ವಿದ್ಯುತ್ ತಂತಿ ಪರಸ್ಪರ ಸ್ಪರ್ಶಗೊಂಡ ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿ 6 ಎಕರೆ ಕಬ್ಬು ಬೆಳೆ ನಾಶವಾದ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬಲ್ಲೂರ್ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗ್ರಾಮದ ರೈತರಾದ ಸಿದ್ದಪ್ಪ ವೀರಭದ್ರಪ್ಪ ಹಾಗೂ ವಿಶ್ವನಾಥ ಶಿವರಾಯ ಅವರಿಗೆ ಸೇರಿದ ತಲಾ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟಾವಿಗೆ ಬಂದ ಕಬ್ಬು ನಾಶವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಡಿಸಿದ್ದಾರೆ.
ಟ್ರಾನ್ಸ್ ಫಾರ್ಮ್ ಬಳಿ ಬೆಂಕಿಯ ಕಿಡಿ ಕಬ್ಬಿಗೆ ತಾಗಿದ ಪರಿಣಾಮ ಒಟ್ಟು 8 ಲಕ್ಷ ರೂ. ಮೌಲ್ಯದ ಕಬ್ಬು ನಾಶವಾಗಿದೆ. ಮೊದಲೇ ಬರದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.