ಸಂವಿಧಾನದ 371(ಜೆ)ನಿಂದ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ವಿಕಾಸಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕೆಂದು ಬೀದರ್ ಸಂಸದ ಸಾಗರ್ ಖಂಡ್ರೆ ಮನವಿ ಮಾಡಿದರು.
ಸೋಮವಾರ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿ, ʼಕಲ್ಯಾಣ ಕರ್ನಾಟಕ ಹಾಗೂ ವಿಶೇಷವಾಗಿ ನನ್ನ ಬೀದರ ಲೋಕಸಭೆ ಕ್ಷೇತ್ರದ ಯುವಕರ ಉದ್ಯೋಗ ವಲಸೆ ಕುರಿತು ಸರ್ಕಾರವನ್ನು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಹಲವಾರು ಯುವಕರು ಪದವಿ ಮುಗಿಸಿದ ನಂತರ, ಉದ್ಯೋಗ ಪಡೆಯಲು ಹೈದ್ರಾಬಾದ್, ಪುಣೆ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ದುಃಸ್ಥಿತಿಯನ್ನು ತಪ್ಪಿಸಲು ನಮ್ಮಲ್ಲಿ ಅವಶ್ಯಕವಾದ ಉದ್ಯೋಗಾವಕಾಶಗಳನ್ನು ನೀಡಲು ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದರು.