ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ 200 ಮಾನವ ದಿನಗಳು ಜೊತೆಗೆ 500 ರೂಪಾಯಿ ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪತ್ರ ಚಳುವಳಿ ನಡೆಸಿದರು.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಬನ್ನಿಕಲ್ಲು, ಹಗರಿಕ್ಯಾದಿಗಿಹಳ್ಳಿ, ಮಗಿಮಾವಿನಹಳ್ಳಿ ಹಾಗೂ ಹಂಪಾಪಟ್ಟಣ, ಕಂಪ್ಲಿ ರಾಮಸಾಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಪತ್ರಗಳಿಗೆ ಸಹಿ ಹಾಕಿ ಕೂಲಿ ಹೆಚ್ಚಳಕ್ಕೆ ಆಗ್ರಹಿಸಿದರು.
ಬಡವರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತುಂಬಾ ಅನುಕೂಲವಾಗಿದೆ. ಆದರೆ ಕೂಲಿ 100 ದಿನಗಳ ಬದಲಾಗಿ 200 ದಿನಗಳಿಗೆ ಹೆಚ್ಚಿಸಬೇಕು. ಕೂಲಿ ಹಣ 349 ರಿಂದ 500 ರೂಪಾಯಿಗಳಿಗೆ ಕೂಲಿ ಹೆಚ್ಚಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲʼ ಎಂದು ದೂರಿದರು.
ಕಾರ್ಮಿಕರು ಸಹಿ ಮಾಡಿದ ಎಲ್ಲ ಪತ್ರಗಳನ್ನು ಅಂಚೆ ಕಚೇರಿಗಳ ಮೂಲಕ ಪ್ರಧಾನಿಗಳಿಗೆ ಕಳುಹಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬೆಳ್ಳುಳ್ಳಿ ಬೆಳೆಗೆ ಉತ್ತಮ ಬೆಲೆ; ರೈತರ ಮುಖದಲ್ಲಿ ಮಂದಹಾಸ
ಈ ವೇಳೆ ಸಂಘಟನೆಯ ಬಳ್ಳಾರಿ ಜಿಲ್ಲಾ ಸಂಚಾಲಕಿ ಅಕ್ಕಮ್ಮ, ವಿಜಯನಗರ ಕಾರ್ಯಕರ್ತೆ ಕೊಟ್ರಮ್ಮ, ಪಾರ್ವತಮ್ಮ, ಮಲ್ಲಮ್ಮ, ಮರಿಯಮ್ಮ, ನಿಲ್ಲಮ್ಮ ಸೇರಿದಂತೆ ಇತರರಿದ್ದರು.