ಶ್ರೀನಿವಾಸಪುರ | ಮಾವು ಬೆಳೆಗೆ ಬೆಂಬಲ ಬೆಲೆ ನೀಡದಿದ್ದರೆ ವಿಧಾನಸೌಧದ ಮುಂದೆ ಉಗ್ರ ಹೋರಾಟ: ಚಿನ್ನಪ್ಪ ರೆಡ್ಡಿ

Date:

Advertisements

ರಾಜ್ಯದಲ್ಲಿ ಮಾವಿನ ಬೆಲೆ ಕುಸಿತವಾಗಿದ್ದು ಮಾವು ಬೆಳೆಗಾರರು ಭಾರೀ ನಷ್ಟ ಅನುಭವಿಸುವ ಸನ್ನಿವೇಶ ಉಂಟಾಗಿದೆ. ಆದಕಾರಣ ಸರ್ಕಾರ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದೇ ಹೋದಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಒಂದು ಟನ್ ಮಾವು ಬೆಳೆದು ಮಾರುಕಟ್ಟೆಗೆ ಹಾಕುವವರೆಗೂ ಸುಮಾರು 10 ರಿಂದ 12 ಸಾವಿರ ಖರ್ಚಾಗುತ್ತದೆ. ಆದರೆ ಮಾವು ಬೆಲೆ ಕುಸಿತದಿಂದ ಒಂದು ಟನ್ 4 ಸಾವಿರ ಸಿಗುತ್ತಿದ್ದು, ರೈತರಿಗೆ ಭಾರೀ ನಷ್ಟವಾದ ಕಾರಣ ಸರ್ಕಾರ ಒಂದು ಟನ್ ಗೆ 8 ಸಾವಿರ ಬೆಂಬಲ ಬೆಲೆ ನೀಡಿದರೆ ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಸರ್ಕಾರ ಒಂದು ಟನ್ ಗೆ 4 ಸಾವಿರ ಬೆಂಬಲ ಬೆಲೆ ನೀಡ್ತಿದೆ‌ ಹಾಗೂ ಜ್ಯೂಸ್ ಕಂಪನಿಗಳು 8 ಸಾವಿರ ಬೆಂಬಲ ಬೆಲೆ ನೀಡುವ ರೀತಿ ನಮ್ಮ ರಾಜ್ಯದಲ್ಲಿಯೂ ನೀಡಬೇಕು. ಆಗ ಮಾತ್ರ ವ್ಯವಸ್ಥಿತವಾಗಿ ಎಲ್ಲವೂ ನಡೆದುಕೊಂಡು ಹೋಗುತ್ತದೆ ಎಂದು ಒತ್ತಾಯಿಸಿದ್ದಾರೆ.

Advertisements

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಜೊತೆ ಸಭೆ ಮಾಡಿ ಎಲ್ಲಾ ಬೆಳವಣಿಗೆ ಹಾಗೂ ಮಾವು ಬೆಳೆಗಾರರಿಗೆ ಆದ ತೊಂದರೆ, ನಷ್ಟದ ಬಗ್ಗೆ ಮನವರಿಕೆ ಮಾಡಿ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ನೀಡಿದ್ದೇವೆ. ಸಚಿವರು ಸಹ ನಮ್ಮ ಮನವಿಗೆ ಸ್ಪಂದಿಸಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಎರಡು ಮೂರು ದಿನಗಳಲ್ಲಿ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಿಲ್ಲದಿದ್ದರೆ ಕೋಲಾರ ಜಿಲ್ಲೆ ಬಂದ್ ಮಾಡಿ ನಂತರ ವಿಧಾನಸೌಧದ ಮುಂದೆ ಮಾವು ಸುರಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾವು ಬೆಳೆಗಾರರಿಗೆ ಸರ್ಕಾರ ಬೆಂಬಲ ಬೆಲೆ ಕೊಡ್ಬೇಕು, ಆದರೆ ಮಾವಿನ ಉಪ ಉತ್ಪನ್ನ ಮಾಡಿ ಸರ್ಕಾರ ಮಾರ್ಕೆಟಿಂಗ್ ಮಾಡಬೇಕು ಎಂದು ರೈತ ಉತ್ಪಾದಕ ಸಂಸ್ಥೆ ಸಿಇಓ ವಾಸುದೇವ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ವಿಖ್ಯಾತ ಮಾವಿನ ನಗರಿ ಎಂದೇ ಕರೆಯುವ ಶ್ರೀನಿವಾಸಪುರದಲ್ಲಿ ಪ್ರಸ್ತುತವಾಗಿ ಮಾವಿನ ಬೆಲೆ ತೀವ್ರ ಕುಸಿತವಾಗಿರೋದು ಮಾವು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ಸರ್ಕಾರದ ಗಮನ ಸೆಳೆಯಲು ರೈತರು ಶ್ರೀನಿವಾಸಪುರವನ್ನು ಬಂದ್ ಮಾಡಿ ಮಾವು ಬೆಳೆಗಾರರಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ ಒತ್ತಾಯಿಸಿದ್ದರು.

ಶ್ರೀನಿವಾಸಪುರ ಬಂದ್ ದಿನ ಸ್ಥಳಕ್ಕೆ ಬಂದ ಕೋಲಾರ ಜಿಲ್ಲಾಧಿಕಾರಿ ರವಿ ರೈತರ ಮನವೊಲಿಸಲು ಪ್ರಯತ್ನ ಪಟ್ಟು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಆಶ್ವಾಸನೆ ನೀಡಿ ಅದರಂತೆ ಮಾವು ಬೆಳೆಗಾರರ ಸಂಘದ ಮುಖಂಡರು ಹಾಗೂ ರೈತರನ್ನು ಸಚಿವ ಬೈರತಿ ಸುರೇಶ್ ಜೊತೆ ಸಭೆಯನ್ನು ಸಹ ನಡೆಸಿದರು.

ಒಂದು ಟನ್ ಮಾವಿನ ಹಣ್ಣು 4 ಸಾವಿರಕ್ಕೆ ಆಕ್ಷನ್ ಹೋಗ್ತಿದೆ. ಮಾರುಕಟ್ಟೆಯಲ್ಲಿ, ನಾವು ಮಾವು ಬೆಳೆದು ಮಾರುಕಟ್ಟೆಗೆ ಮಾರಾಟ ಮಾಡುವವರೆಗೂ ಸುಮಾರು 10 ರಿಂದ 12 ಸಾವಿರ ರೂಪಾಯಿ ಖರ್ಚಾಗುತ್ತೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 4 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದು, ನಮಗೆ ಶೇ. 50ಕ್ಕೂ ಹೆಚ್ಚು ನಷ್ಟ ಆಗ್ತಿದೆ ಎಂದು ಮಾವು ಬೆಳೆಗಾರರು ದೂರಿದ್ದಾರೆ.

ಇದನ್ನು ಓದಿದ್ದೀರಾ..? ಬೆಂಗಳೂರು | ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ : ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಸರ್ಕಾರ ಕನಿಷ್ಠ ಒಂದು ಟನ್ ಮಾವಿಗೆ ಕನಿಷ್ಠ 5 ಸಾವಿರ ಬೆಂಬಲ ಬೆಲೆ ಕೊಡ್ಬೇಕು. ಆಂಧ್ರದಲ್ಲಿ ಜ್ಯೂಸ್ ಕಂಪನಿ ಅವರು ಒಂದು ಟನ್ ಗೆ 8 ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಆದ್ರೆ ನಮ್ಮ ಶ್ರೀನಿವಾಸಪುರದಲ್ಲಿ ಆ ತರಹದ ಕಂಪನಿಗಳು ಇಲ್ಲ. ಕರ್ನಾಟಕದಲ್ಲಿ ಸುಮಾರು 45 ಜ್ಯೂಸ್ ಕಂಪನಿಗಳಿವೆ. ಅವರು ಮಾವು ಬೆಳೆಗಾರರಿಗೆ ಒಂದು ಟನ್ ಮಾವು ಖರೀದಿ ಮಾಡಿ 7 ಸಾವಿರ ಕೊಡ್ಬೇಕು ಹಾಗೂ ಸರ್ಕಾರ 4 ಸಾವಿರ ಕೊಟ್ರೆ ಇದರ ಮೂಲಕ ನಮಗೆ ಲಾಭ ಸಿಗದೇ ಇದ್ದರೂ ಬಂಡವಾಳ ವಾಪಸ್ ಬರುತ್ತದೆ. ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಇಲ್ಲದಿದ್ದರೆ ಎಲ್ಲಾ ಮಾವು ಬೆಳೆಗಾರರು ಸೇರಿ ಕೋಲಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ಪ್ರತಿಭಟನೆ ಮಾಡ್ಬೇಕಾಗುತ್ತದೆ ಎಂದು ಮಾವು ಬೆಳೆಗಾರರಾದ ನವೀನ್ ಎಚ್ಚರಿಕೆ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X