ಶೋಷಣೆ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಕದನದಲ್ಲಿ 30 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಹೋರಾಡಿದ 500 ಮಹರ್ ರೆಜಿಮೆಂಟ್ ವೀರರಂತೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಸಿದ್ದರಾಗಬೇಕು ಹುಲಸೂರ ತಾಲೂಕು ಕಸಾಪ ಉಪಾಧ್ಯಕ್ಷ, ಸಾಮಾಜಿಕ ಚಿಂತಕ ಬಸವಕುಮಾರ ಕವಟೆ ಹೇಳಿದರು.
ಹುಲಸೂರ ಪಟ್ಟಣದ ಇಂದಿರಾ ನಗರದಲ್ಲಿ ಸೋಮವಾರ ನಡೆದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನ ಕಾರ್ಯಕರ್ಮದಲ್ಲಿ ಭಾಗವಹಿಸಿ ಮಾತನಾಡಿ, “ಇಂದು ಶೋಷಿತ ವರ್ಗಗಳ ಯುವಕರು ದೈಹಿಕವಾಗಿ ಮಾನಸಿಕವಾಗಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶದ ಗಡಿ ರಕ್ಷಣೆಗೆ ಸಿದ್ಧರಾಗಬೇಕು. ಸುಶಿಕ್ಷಿತರಾಗಿ ಉನ್ನತ ಅಧಿಕಾರಿಗಳಾಗಿ ವಂಚಿತ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು” ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಶಿವಾನಂದ ಮೇತ್ರೆ ಅವರು ಬುದ್ದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಪುಷ್ಪ ಸಲ್ಲಿಸಿ ಮಾತನಾಡಿ, “ಶಿಕ್ಷಣದಿಂದ ಮಾತ್ರ ಸಾಮಾಜಿಕ ಶೋಷಣೆ ಮುಕ್ತವಾಗಲು ಸಾಧ್ಯ, ಇತಿಹಾಸ ಮರೆತರೆ ಇತಿಹಾಸ ರಚಿಸಲು ಸಾಧ್ಯವಿಲ್ಲ ಎಂಬುವಂತೆ ಸಮಾಜದ ಬದಲಾವಣೆಗಾಗಿ ಪೂರ್ವಜರ ತ್ಯಾಗ, ಬಲಿದಾನದ ಸ್ಮರಣೆ ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಹಾರ | ದಲಿತ ಮಹಿಳೆಗೆ ಮನಬಂದಂತೆ ಲಾಠಿಯಿಂದ ಬಡಿದ ಪೊಲೀಸ್; ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕ ಶಾಖೆ ಅಧ್ಯಕ್ಷ ದತ್ತಾ ಮೋರೆ, ವಂಚಿತ ಬಹುಜನ ಅಘಾಡಿ ತಾಲೂಕು ಅಧ್ಯಕ್ಷ ಸತೀಶ್ ಗಾಯಕವಾಡ, ಭಾರತೀಯ ದಲಿತ ಪ್ಯಾಂಥರ್ಸ್ ತಾಲೂಕು ಕಾರ್ಯದರ್ಶಿ ಸಂದೀಪ ಸೂರ್ಯವಂಶಿ ಸೇರಿದಂತೆ ಪ್ರಮುಖರಾದ ಗೌಸೋದ್ದೀನ್ ಬಿರಿವಾಲೆ, ಲೋಕೇಶ್ ಧಬಾಲೆ, ದಯಾನಂದ ನಿಮಾಣೆ, ಅಶೋಕ ಮೆಘಶಾಮ, ಸುಮಿತ್ ಮೋರೆ, ನಾಗನಾಥ ಮೋರೆ, ವಿಶಾಲ ಕೂಸೆ, ಅನೀಲ ಮೋರೆ, ಚಂದ್ರಕಾಂತ ಮೆಘಶಾಮ, ದಯಾನಂದ ಗವಾರೆ, ಅರ್ಜುನ್ ಅಲಗೊಡ್ಕಕರ್, ಜಗದೇವಿ ಮೋರೆ, ಪ್ರಿಯಾಂಕಾ ಮೋರೆ, ಬಾಲಿಕಾ ಮೋರೆ, ಮಹಾದೇವಿ ಮೆಘಶಾಮ ಸೇರಿದಂತೆ ಬೌದ್ಧ ಧರ್ಮದ ಅನುಯಾಯಿಗಳು ಪಾಲ್ಗೊಂಡಿದ್ದರು.