ಭಾರತ ಸಂವಿಧಾನದಲ್ಲಿ ಮೀಸಲಾತಿ ಬಂದಿದೆ. ಆದರೆ ಹಕ್ಕುಗಳಿಂದ ದೂರು ಇಡಬೇಕು ಎಂಬುವ ಉದ್ದೇಶದಿಂದ ಹುನ್ನಾರ ನಡೆಸಲಾಗುತ್ತಿದೆ. ಹಾಗಾಗಿ ನಮ್ಮ ಹೋರಾಟ ನಿರಂತರವಾಗಿರಬೇಕು ಎಂದು ಲೋಕೋಪಯೋಗಿ ನಿವೃತ್ತ ಅಧಿಕಾರಿ ಚಂದ್ರಹಾಸ್ ಹೇಳಿದರು.
ಮಂಡ್ಯದ ಅಶೋಕ ನಗರದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ನೂತನ ಕಚೇರಿ ಶಾಖಾ ಉದ್ಘಾಟನಾ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ʼದಲಿತರು ತಮ್ಮ ಹಕ್ಕುಗಳಿಗಾಗಿ ಎಷ್ಟು ಹೋರಾಡಿದರೂ ಸಾಲುವುದಿಲ್ಲ. ಹೀಗಾಗಿ ದಲಿತ ಹಕ್ಕುಗಳಿಗೆ ಈ ಸಮಿತಿ ನಿರಂತರವಾಗಿ ದುಡಿಯಲಿʼ ಎಂದು ಹಾರೈಸಿದರು
ಕೆಪಿಆರ್‌ಎಸ್ ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ʼದಲಿತರ ಹಕ್ಕುಗಳಿಗೆ ಹೋರಾಡಲು ಒಂದು ಕಚೇರಿ ಮಾಡಿಕೊಳ್ಳಲಾಗಿದೆ. ಅದೇ ವಸತಿ ರಹಿತ ದಲಿತರಿಗೆ ವಸತಿ ಕೊಡಿಸಲು ಹೋರಾಟ ರೂಪಿಸಬೇಕು. ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಮನೆ, ಭೂಮಿ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸೋಣʼ ಎಂದರು.
ʼದಲಿತರ ಹಕ್ಕಿಗಾಗಿ ಹೋರಾಟ ಮಾಡದಿದ್ದರೆ ಸಂಘಟನೆ ಕಟ್ಟಿ ಪ್ರಯೋಜನವಿಲ್ಲ, ದಲಿತರಿಗೆ ಈಗಲೂ ಸಹ ಲೇಔಟ್‌ಗಳಲ್ಲಿ ನಿವೇಶನ ನೀಡುತ್ತಿಲ್ಲ. ಉನ್ನತ ಹುದ್ದೆಯಲ್ಲಿರುವ ದಲಿತ ಅಧಿಕಾರಿಗಳು ಸಹ ಜಮೀನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇಂತಹ ಕರಾಳ ಅಸ್ಪ್ರಶ್ಯತೆ, ಜಾತಿಯತೆ ವಿರುದ್ಧ ಹೋರಾಡಿ ನಮ್ಮ ಹಕ್ಕು ಪಡೆದುಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್-ಕಾರು ಡಿಕ್ಕಿ; 7 ಮಂದಿ ಸಾವು
ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ವೇದಿಕೆಯ ಮುಕುಂದ, ಅಹಿಂದ ಸಂಘಟನೆಯ ಶಿವರುದ್ರಯ್ಯ, ಡಿಎಚ್ಎಸ್‌ನ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷ ಕೆ.ಎಸ್.ಶಿವಲಿಂಗಯ್ಯ, ರಾಜ್ಯ ಸಮಿತಿ ಸದಸ್ಯೆ ಗಿರಿಜಮ್ಮ, ಕಾರ್ಯದರ್ಶಿ ಅಂಬೂಜಿ ಭಾಗವಹಿಸಿದ್ದರು.