- ಸಿಮ್ಸ್ ನಿರ್ದೇಶಕನ ಮುಖಕ್ಕೆ ಮಸಿ ಬಳಿದು, ಕಾರಿಗೆ ಹಾನಿ ಮಾಡಲಾಗಿತ್ತು
- ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದರಿಂದ ನಿಂದನೆ ಆರೋಪ
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಡೀನ್ ಮತ್ತು ನಿರ್ದೇಶಕ ಡಾ. ಸಂಜೀವ್ ರೆಡ್ಡಿ, ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ನಿಂದಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಸಿಮ್ಸ್‌ನ ನಾಲ್ವರು ನೌಕರರ ಮುಂದೆ ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಮೂವರು ವೈದ್ಯರು, ಮುಖ್ಯ ಆಡಳಿತಾಧಿಕಾರಿ ಸೇರಿದಂತೆ ನೌಕರರು ಚಾಮರಾಜನಗರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಹಿನ್ನೆಲೆ ನಿರ್ದೇಶಕರ ವಿರುದ್ಧ ತನಿಖೆ ನಡೆಸಬೇಕೆಂದು ವೈದ್ಯರು ಒತ್ತಾಯಿಸಿದ್ದರು. ಈ ಪತ್ರದ ಆಧಾರದ ಮೇಲೆ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್ ನಾಗಯ್ಯ ಅವರು ನಿರ್ದೇಶಕರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಸ್‌ಸಿ, ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಸಿಮ್ಸ್ ನಿರ್ದೇಶಕ ಡಾ. ಸಂಜೀವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಸುದ್ದಿಗಾರರಿಗೆ ತಿಳಿಸಿದ್ದರು.
ಪ್ರತಿಭಟನಾಕಾರರ ವಿರುದ್ಧ ಪ್ರತಿದೂರು ದಾಖಲು
“ಅಂಬೇಡ್ಕರ್‌ಗೆ ಅವಮಾನಿಸಿರುವ ಬಗ್ಗೆ ಯಾವುದೇ ಸಾಕ್ಷಿ ಆಧಾರವಿಲ್ಲದೆ ನನ್ನ ವಿರುದ್ಧ ದೂರು ನೀಡಿದ್ದು, ಇಲಾಖೆ ಕೆಲಸದ ಮೇಲೆ ತೆರಳುತ್ತಿದ್ದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಪ್ರಚೋದನೆ ನೀಡಿ, ಕಾರಿನ ಮೇಲೆ ದಾಳಿ ಮಾಡಿ, ನನ್ನನ್ನು ಮತ್ತು ನನ್ನ ಪತ್ನಿಯನ್ನು ಎಳೆದಾಡಿ ಜೀವ ಬೆದರಿಕೆ ಒಡ್ಡಿದ್ದಾರೆ” ಎಂದು ಆರೋಪಿಸಿ ಸಿಮ್ಸ್ ನಿರ್ದೇಶಕ ಡಾ. ಸಂಜೀವ್ ರೆಡ್ಡಿ, ಸಿಮ್ಸ್‌ನ ಡಾ. ಮಾರುತಿ ಹಾಗೂ ಇನ್ನು ಸುಮಾರು 70 ಮಂದಿ ಅಪರಿಚಿತರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಂಬೇಡ್ಕರ್‌ಗೆ ನಿಂದನೆ ಆರೋಪ; ಸಿಮ್ಸ್ ಡೀನ್ ಮುಖಕ್ಕೆ ಮಸಿ
ಘಟನೆ ಹಿನ್ನೆಲೆ
“ಸಿಮ್ಸ್ ನಿರ್ದೇಶಕರು ತಮ್ಮ ಕಚೇರಿಯಲ್ಲಿ ಸಿಎಒ ಮಂಜುನಾಥ್, ಡಾ. ಗಿರೀಶ್ ಮತ್ತು ಡಾ. ಹರ್ಷ ಅವರ ಮುಂದೆ ಅಂಬೇಡ್ಕರ್ ಅವರನ್ನು ನಿಂದಿಸಿ ಅವಮಾನಿಸಿದ್ದಾರೆ. ಹೊರಗುತ್ತಿಗೆ ನೌಕರರು ಸಂಬಳಕ್ಕಾಗಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಹೀಗೆ ಮಾಡಿದ್ದಾರೆ” ಎಂದು ಆರೋಪಿಸಿ ಸಿಮ್ಸ್ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸಿ ವಿ ಮಾರುತಿ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರಿನ ಪ್ರತಿಯು ಅಂಬೇಡ್ಕರ್ ಅಭಿಮಾನಿಗಳು ಮತ್ತು ಬಿಎಸ್‌ಪಿ ಕಾರ್ಯಕರ್ತರಿಗೆ ಸಿಕ್ಕಿತ್ತು. ಬಳಿಕ ಸಿಮ್ಸ್ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೋಪಗೊಂಡ ಪ್ರತಿಭಟನಾಕಾರರು ಸಿಮ್ಸ್ ನಿರ್ದೇಶಕರ ಡಾ. ಸಂಜೀವ್ ರೆಡ್ಡಿ ಮುಖಕ್ಕೆ ಮಸಿ ಬಳಿದು, ಕಾರಿಗೆ ಹಾನಿ ಮಾಡಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ನಿರ್ದೇಶಕರನ್ನು ರಕ್ಷಿಸಿ ತಮ್ಮ ಜೀಪಿನಲ್ಲಿ ಬೇರೆಡೆಗೆ ಕರೆದೊಯ್ದಿದ್ದರು.
Ambedakar avar hesar heli roudijam madorige Gallu shikshe Kodi Dr Babasaheb ambedakar avar Hesarinalli yavane vabba vekti kettadagi matadli haagu avar hesareli bereyavaranna hodiyodagali madidavarige Kaanunu krama Jarugisbeku, Yavade sang samsthe Munde bandu raudi jam madalu mundadre Ambedakar avar savidandalli yelli Chlenge maduvadu anivarya vagutte,
Dr baba saheb ambedkar avar Hesarige masi badiyo kelasa madatiddare, Aadare Ambedakar avar hesarelli gundagiri maadok hogbyadi yidu ambedkar avar Hesarige sobhe taro kelasa alla, Niu nijavaglu ambedkar avar Tattvagalannu anusarisodadre avar kodugegalannu Anusharanege tanni education development maadri nimma janangdavaranna education kodusi adann bittu Ambedakar avara hesareli yavano yeno anda anta roading yilyadu raudijama madodu yidu ambedkar avar Hesarige shobe tarovant kelasa alla, Nimmanna ambedakar avaru education free kodsidare, Channagi education kaliri Mattomme Namma deshadalli ambedkar avaru janasali anno Tara jeevisi, adu tane nimage shobe tarodu, adanna bittu Yavanige hogi masi badada yavano yeno anda anta hogi roudijam maadad yi Tara aadre savidan vanne raddu maado hantakke nive tandakotira, nenpinalli yitkondi kelasagallanna Maadi, Jai hind jai bharat