ಶಿವಮೊಗ್ಗದಿಂದ ಮೂರು ನಗರಗಳಿಗೆ ವಿಮಾನಯಾನ ಆರಂಭ; ಸ್ಟಾರ್‌ ಏರ್‌ ಸಿದ್ಧತೆ

Date:

Advertisements

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೂರು ನಗರಗಳಿಗೆ ನವೆಂಬರ್‌ 17ರಿಂದ ವಿಮಾನಯಾನ ಆರಂಭವಾಗಲಿದ್ದು, ಸ್ಟಾರ್‌ ಏರ್‌ ಕೂಡ ಶಿವಮೊಗ್ಗದಿಂದ ಕಾರ್ಯನಿರ್ವಹಿಸಲು ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು-ಶಿವಮೊಗ್ಗ ನಡುವೆ ಎರಡು ತಿಂಗಳ ಹಿಂದೆ ವಿಮಾನ ಸೇವೆ ಆರಂಭಗೊಂಡಿದ್ದು, ಉಭಯ ನಗರಗಳಿಗೆ ಇಂಡಿಗೋ ಸಂಸ್ಥೆ ಹಾರಾಟ ನಡೆಸುತ್ತಿದೆ. ಇದೀಗ, ಸ್ಟಾರ್‌ ಏರ್‌ ಕೂಡ ಎರಡೂ ನಗರಗಳ ನಡುವೆ ಹಾರಾಟ ಆರಂಭಿಸಲು ಮುಂದೆ ಬಂದಿದೆ ಎಂದು ಹೇಳಲಾಗಿದೆ.

ಆಗಸ್ಟ್‌ 31ರಂದು ಸೇವೆ ಆರಂಭಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸದ್ಯ ಬೆಂಗಳೂರಿಗೆ ಮಾತ್ರ ವಿಮಾನ ಸೇವೆ ಇದೆ. ಇನ್ನು ಮುಂದೆ ತಿರುಪತಿ, ಹೈದರಾಬಾದ್‌ ಹಾಗೂ ಗೋವಾಕ್ಕೂ ವಿಮಾನಗಳು ಸಂಚರಿಸಲಿದ್ದು, ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಇರಲಿದೆ.

Advertisements

ಈ ಮೂರು ನೇರ ಸಂಪರ್ಕದ ವಿಮಾನಗಳಾಗುವುದರಿಂದ ಪ್ರಮುಖ ಧಾರ್ಮಿಕ ತಾಣ ತಿರುಪತಿ, ಪ್ರವಾಸಿ ತಾಣಗಳಾದ ಗೋವಾ ಹಾಗೂ ಹೈದರಾಬಾದ್‌ನಿಂದ ಶಿವಮೊಗ್ಗದ ಸಂಪರ್ಕ ಇನ್ನಷ್ಟು ಗಟ್ಟಿಗೊಳ್ಳಲಿದೆ.

ಸ್ಟಾರ್‌ ಏರ್‌ ಭಾರತದ ಹಲವು ನಗರಗಳಿಗೆ ತನ್ನ ವಿಮಾನ ಸೇವೆಯನ್ನು ಹೊಂದಿದೆ. ಸ್ಟಾರ್‌ ಏರ್‌ ಸಂಸ್ಥೆ ಈಗಷ್ಟೇ ಬೆಂಗಳೂರಿನಿಂದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ವಿಮಾನ ಸೇವೆಯನ್ನು ಆರಂಭಿಸಿದ್ದು, ಈಗ ಶಿವಮೊಗ್ಗಕ್ಕೂ ಸೇವೆ ವಿಸ್ತರಿಸುತ್ತಿದೆ.

ಬೆಂಗಳೂರು ಮೂಲದ ಪ್ರಾದೇಶಿಕ ವಿಮಾನಯಾನ ಸ್ಟಾರ್‌ ಏರ್‌ ಸಂಸ್ಥೆ ಇದೀಗ ಶಿವಮೊಗ್ಗದಿಂದ ಮೂರು ನಗರಗಳಿಗೆ ವಿಮಾನ ಸಂಚಾರಕ್ಕೆ ಮುಂದಾಗಿದೆ. ಈ ಹಿಂದೆಯೇ ಸಂಚಾರದ ಕುರಿತು ಸ್ಟಾರ್‌ ಏರ್ ಸಂಸ್ಥೆ ತಿಳಿಸಿತ್ತಾದರೂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿರಲಿಲ್ಲ. ಆದರೆ ಇದೀಗ ಅಧಿಕೃತ ದಿನಾಂಕ ಪ್ರಕಟಿಸಿದ್ದು, ಬುಕಿಂಗ್‌ ಕೂಡ ಆರಂಭವಾಗಿದೆ.

ಸ್ಟಾರ್‌ ಏರ್‌ ಟಿಕೆಟ್‌ ಬುಕಿಂಗ್‌ ನಡೆಸುತ್ತಿರುವ ಬ್ಲೂಬೆಲ್‌ ಹಾಲಿಡೇಸ್‌ ಸಹಾಯಕಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸ್ಟಾರ್‌ ಏರ್‌ ಲೈನ್ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ನವೆಂಬರ್‌ 17ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಟಿಕೆಟ್‌ ಬುಕಿಂಗ್‌ ಕೂಡ ಆರಂಭವಾಗಿದೆ” ಎಂದು ತಿಳಿಸಿದರು.

ಸ್ಟಾರ್‌ ಏರ್‌ ಟೈಮಿಂಗ್‌ 

ಸ್ಟಾರ್‌ ಏರ್‌ ವಿಮಾನವು ಬೆಳಿಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಡಲಿದ್ದು, ಬೆಳಿಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ.

ಟಿಕೆಟ್‌ ಬುಕಿಂಗ್‌ ಆರಂಭ

ಸ್ಟಾರ್‌ ಏರ್‌ ಸಂಸ್ಥೆ ವಿಮಾನಯಾನ ಸೇವೆ ಆರಂಭಕ್ಕೆ ದಿನಾಂಕ ಪ್ರಕಟಿಸುತ್ತಿದ್ದಂತೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದ್ದು, ನಗರದ ಶುಭಂ ಹೊಟೇಲ್‌ ಸಮೀಪ ಇರುವ ಬ್ಲೂಬೆಲ್‌ ಹಾಲಿಡೇಸ್‌ನಲ್ಲಿ ಸ್ಟಾರ್‌ ಏರ್‌ ಟಿಕೆಟ್‌ ಬುಕಿಂಗ್‌ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 8123002917, 9449502917 ಸಂಪರ್ಕಿಸಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X