ಮೈಸೂರು | ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ

Date:

Advertisements

ಮೈಸೂರಿನ ಏಕಲವ್ಯ ನಗರದಲ್ಲಿ ವಾಸವಿರುವ ಅಂಗವಿಕಲರಿಗೆ ಭಾನುವಾರದಂದು ದಸಂಸ ನೇತೃತ್ವದಲ್ಲಿ ಆಹಾರ ಕಿಟ್‌ ವಿತರಣೆ ಮಾಡಿದರು.

ಏಕಲವ್ಯ ನಗರದಲ್ಲಿ ಅಂಗ ವೈಕಲ್ಯದಿಂದ ಬಳಲುತ್ತಿರುವ ನಿರ್ಗತಿಕ ಕುಟುಂಬಗಳು ವಾಸವಿದ್ದು, ಸಂಕಷ್ಟದ ಬದುಕನ್ನು ಸಾಗಿಸುತ್ತಿರುವ 20 ಮಂದಿ ಅಂಗವಿಕಲರಿಗೆ ಎರಡು ತಿಂಗಳಿಗೆ ಬೇಕಾಗುವ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು. ಅಂಗವಿಕಲ ಕುಟುಂಬಗಳು ದಿನನಿತ್ಯದ ಬದುಕನ್ನು ಸಾಗಿಸಲು ಮೈಸೂರಿನ ರಸ್ತೆ ಬದಿಗಳಲ್ಲಿ ಭಿಕ್ಷಾಟನೆ ಮಾಡುತ್ತಾ ಬಿಡಿಗಾಸಿನಿಂದ ಜೀವನ ಸಾಗಿಸುವವರಾಗಿದ್ದು ಕಡು ಕಷ್ಟದಲ್ಲಿರುವವರಿಗೆ ಕೈಲಾಗುವ ನೆರವು ನೀಡಿದ್ದಾರೆ.

ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ‘ ಅಂಗವಿಕಲರಿಗೆ ಸರ್ಕಾರದಿಂದ ಬರುವ ಮಾಸಾಶನ ಸಾಕಾಗುತ್ತಿಲ್ಲ. ಅಂಗವಿಕಲರು ಅನ್ಯ ಮಾರ್ಗವಿಲ್ಲದೆ ಬೀದಿಗಳಲ್ಲಿ ಭಿಕ್ಷೆ ಬೇಡುವ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಕೂಡಲೇ ಸರ್ಕಾರ ಅಂಗವಿಕಲರುಗಳಿಗೆ ಜೀವನ ನಿರ್ವಹಣೆಗಾಗಿ ದಿನಕ್ಕೆ ನೂರು ರೂಪಾಯಿಗಳಂತೆ ತಿಂಗಳಿಗೆ ಮೂರು ಸಾವಿರ ಮಾಸಾಶನವನ್ನಾದರೂ ನೀಡುವಂತೆ ‘ ಮನವಿ ಮಾಡಿದರು.

Advertisements

ಅಂಗವಿಕಲರ ಸಮಸ್ಯೆಯನ್ನು ದಸಂಸ ಮತ್ತು ಅಲೆಮಾರಿ ಸಂಘ ಮೈಸೂರಿನ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿ ವೆಂಕಟರಾಜುರವರಿಗೆ ತಿಳಿಸಿದಾಗ 50 ಸಾವಿರ ರೂಪಾಯಿ ಸ್ವಂತ ಹಣದಲ್ಲಿ ಆಹಾರ ಕಿಟ್ ಖರೀದಿಸಿ ವಿತರಿಸಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿ ಸಂಘಗಳ ರಾಜ್ಯಾಧ್ಯಕ್ಷ ವೈ ಕುಮಾರ್‌ ಮಾತನಾಡಿ ” ಅಂಗವಿಕಲರು ದೈಹಿಕವಾಗಿ ಅಂಗವೈಕಲ್ಯತೆಯಿಂದ ಕೂಡಿದ್ದರೂ ಅವರ ಮನಸ್ಸುಗಳು ಅಂಗವೈಕಲ್ಯತೆಯಿಂದ ಕೂಡದೆ ಹೃದಯ ಶ್ರೀಮಂತರಾಗಿದ್ದಾರೆ. ಆದರೆ, ಕೆಲವು ಮನುಷ್ಯರು ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿದ್ದರೂ ಅವರ ಮನಸ್ಸುಗಳು ಅಂಗವೈಕಲ್ಯತೆಯಿಂದ ಕೂಡಿ ಸಮಾಜದಲ್ಲಿ ಭ್ರಷ್ಟಾಚಾರ, ಘಾತುಕ ಕೆಲಸಗಳನ್ನು ಮಾಡುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇಂತಹ ಮನುಷ್ಯರಿಗೆ ಹೋಲಿಕೆ ಮಾಡಿದರೆ ಅಂಗವಿಕಲರೇ ನಿಜವಾಗಲೂ ಹೃದಯ ಶ್ರೀಮಂತರಾಗಿದ್ದಾರೆ. ಇಂತಹವರನ್ನು ಸಮಾಜ ಪ್ರೀತಿ, ಗೌರವದಿಂದ ಕಾಣುವಂತಾಗಬೇಕು. ಅವರ ಕಷ್ಟ ನೋವುಗಳಿಗೆ ಕೈಲಾಗುವ ಮಟ್ಟಿಗೆ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಂಡು ನೆರವಾಗಬೇಕು. ಇಂತಹ ಒಳ್ಳೆಯ ಕೆಲಸಗಳನ್ನು ಸಾಧ್ಯವಾದಷ್ಟು ಮಾಡಬೇಕು ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ದಸಂಸ ಮುಖಂಡರಿಂದ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮನೆ ಮುತ್ತಿಗೆ ಯತ್ನ; ಬಂಧನ

ಚಾಮುಂಡೇಶ್ವರಿ ಬಡಾವಣೆಯ ಮುಖಂಡರುಗಳಾದ ಸಿಂಗೇಗೌಡ, ನಿವೃತ್ತ ಪೊಲೀಸ್‌ ಅಧಿಕಾರಿ ಸಣ್ಣಪ್ಪ, ಉಪನ್ಯಾಸಕ ಪರಮೇಶ್‌, ಏಕಲವ್ಯ ಗ್ರಾಮ ಪಂಚಾಯ್ತಿ ಸದಸ್ಯೆ ತೇಜಸ್ವಿನಿ ಶ್ರೀಧರ್‌, ಏಕಲವ್ಯ ನಗರದ ಮುಖಂಡರುಗಳಾದ ನಂದನ್‌ ಕುಮಾರ್‌, ನವೀನ, ಕಿರಣ, ಸತೀಶ, ರಮೇಶ, ಪುತ್ರ, ಅಂಗವಿಕಲರ ಸಂಘದ ಅಧ್ಯಕ್ಷ ಕೆರೆಯೂರು ಶಿವಶೆಟ್ಟಿ, ತಿಮ್ಮರಾಯಪ್ಪ, ಕುಮಾರ, ಹರೀಶ, ರಂಗಮ್ಮ, ನಾಗರತ್ನಮ್ಮ, ಜಮುನಾ ಅಂಬಿಕಾ, ಕಾವ್ಯ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X