ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತ ಡಿ ಎಸ್ ರಮೇಶ್ ಅವರ ನಿರ್ದೇಶನದಂತೆ ಇಂದು ವಾರ್ಡ್ ಸಂಖ್ಯೆ:84 ಹಗದೂರು ವ್ಯಾಪ್ತಿಯ ವೈಟ್ ಫೀಲ್ಡ್ ಮುಖ್ಯರಸ್ತೆ, ವಾರ್ಡ್ ಸಂಖ್ಯೆ-82ರ ಗರುಡಾಚಾರಪಾಳ್ಯ ಹಾಗೂ ವಾರ್ಡ್ ಸಂಖ್ಯೆ-51 ವಿಜೀನಾಪುರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮತ್ತು ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಮಹದೇವಪುರ ವಿಭಾಗ ವ್ಯಾಪ್ತಿಯ ವಾರ್ಡ್ ಸಂಖ್ಯೆ:84 ಹಗದೂರು ವ್ಯಾಪ್ತಿಯ ವೈಟ್ ಫೀಲ್ಡ್ ಮುಖ್ಯರಸ್ತೆಯ ವರ್ತೂರು ಕೋಡಿಯಿಂದ ಹೋಪ್ ಫಾರ್ಮ್‌ವರೆಗೆ, ವಾರ್ಡ್ ಸಂಖ್ಯೆ-82 ಗರುಡಾಚಾರಪಾಳ್ಯದಲ್ಲಿನ ಸಿಂಗಯ್ಯಪಾಳ್ಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಹಾಗೂ ಕೆ ಆರ್ ಪುರಂ ವಿಭಾಗ ವಾರ್ಡ್ ಸಂಖ್ಯೆ-51ವಿಜೀನಾಪುರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.
ಮಹದೇವಪುರ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ದಿನಾಂಕದಂತೆ ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಮಹಾದೇವಪುರ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸಿದ ಪೆಟ್ಟಿಗೆ ಅಂಗಡಿಗಳು, ವಾಣಿಜ್ಯ ಮಳಿಗೆಗಳ ಮುಂದಿನ ಮೇಲ್ಛಾವಣಿಗಳು, ತಾತ್ಕಾಲಿಕ ಮೇಲ್ಛಾವಣಿ, ತಳ್ಳುವ ಗಾಡಿಗಳು, ಹಣ್ಣಿನ ಅಂಗಡಿಗಳು, ಡೆಬ್ರೀಸ್, ಅನಧಿಕೃತ ಕೇಬಲ್‌ಗಳು, ಫುಟ್‌ಪಾತ್ ಹೋಟೆಲ್‌ಗಳು ಮುಂತಾದವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡಲಾಯಿತು.
ಸಾಮೂಹಿಕ ಸ್ವಚ್ಛತಾ ಕಾರ್ಯ
ಪೂರ್ವ ನಗರ ಪಾಲಿಕೆಯ ಕೆ ಆರ್ ಪುರ ಮುಖ್ಯ ರಸ್ತೆ, ಬಸವನಪುರ, ಬೆಳ್ಳಂದೂರು, ಹೂಡಿ, ವಿಜ್ಞಾನ ನಗರ ಮತ್ತು ದೇವಸಂದ್ರ ವಾರ್ಡ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಹಾಗೂ ಬಿ ನಾರಾಯಣಪುರ, ಕೆ ಆರ್ ಪುರ, ಪೈ ಬಡಾವಣೆ ಪ್ರದೇಶಗಳಲ್ಲಿನ ಒಳಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ದಲಿತ ಮಹಿಳೆಗೆ ಅವಮಾನ; ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು
ಇಂದು ನಡೆದ ತೆರವು ಕಾರ್ಯಾಚರಣೆ ಮತ್ತು ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು, ಜೆಹೆಚ್ಐಗಳು, ವಾರ್ಡ್ ಮಾರ್ಷಲ್‌ಗಳು ಹಾಗೂ ಪೌರಕಾರ್ಮಿಕರು ಇದ್ದರು.