ಬಂಡವಾಳವಾದ, ಬಹುಸಂಖ್ಯಾತವಾದ, ಕೋಮುವಾದ ಜನಪರ ಪತ್ರಿಕೋದ್ಯಮವನ್ನು ಮುಳುಗಿಸಿವೆ- ಡಿ ಉಮಾಪತಿ

Date:

“ಬಂಡವಾಳವಾದ, ಬಹುಸಂಖ್ಯಾತವಾದ, ಕೋಮುವಾದದ ಪ್ರವಾಹ ಜನಪರ ಪತ್ರಿಕೋದ್ಯಮವನ್ನು ಬಹುತೇಕ ಮುಳುಗಿಸಿದೆ. ಮುಳುಗದೆ ಉಳಿದಿರುವ ಕೆಲವೇ ಅಪವಾದಗಳು ಉಸಿರಕಟ್ಟಿ ಒದ್ದಾಡಿ ಕೈಕಾಲು ಬಡಿಯುತ್ತಿವೆ. ಧರ್ಮದ ಬೇರು ಕರುಣೆ ಎಂದಿದ್ದ ಬಸವಣ್ಣ. ಆದರೆ ಇಂದು ದ್ವೇಷವೇ ಧರ್ಮದ ಬೇರು ಆಗಿ ಹೋಗಿದೆ” ಎಂದು ಹಿರಿಯ ಪತ್ರಕರ್ತ ಡಿ ಉಮಾಪತಿ ಹೇಳಿದರು.

- Advertisement -

ಕರ್ನಾಟಕ ಸರ್ಕಾರ 2024ರಲ್ಲಿ ಸ್ಥಾಪಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ವಗ೯ದ ಬಗೆಗೆ ಸದಾ ಎಚ್ಚರವನ್ನು ಮೂಡಿಸುವ ಮಹತ್ತರ ಕಾಯ೯ವನ್ನು ನೆರವೇರಿಸುವ ಸಮೂಹ ಮಾಧ್ಯಮಗಳನ್ನು ‘ಕಾಯುವ ನಾಯಿ’ಗೆ ಹೋಲಿಸುವುದು ಉಂಟು. ಆದರೆ ಇಂದಿನ ಸಂದರ್ಭದಲ್ಲಿ ಈ ಕಾಯುವ ನಾಯಿ ದುರ್ಲಾಭ ಗಳಿಸುವ ಕಾಯಿಲೆಗೆ ಬಿದ್ದಿದೆ, ಇಲ್ಲವೇ ಅದಕ್ಕೆ ಹುಚ್ಚು ಹಿಡಿದಿದೆ. ವಿನಾಕಾರಣ ಅಮಾಯಕರು ಮತ್ತು ನಿರಪರಾಧಿಗಳ ಮೇಲೆರಗಿ ಪರಚಿ ಕಚ್ಚಿ ಬೊಗಳುತ್ತದೆ. ಆಳುವವರ ಮುಂದೆ ಬಾಗಿ ಬಾಲ ಆಡಿಸುತ್ತದೆ. ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಪ್ರಶ್ನಿಸುವ ಬದಲು ಪ್ರತಿಪಕ್ಷಗಳ ಹಿಂದೆ ಬಿದ್ದಿರುವ ವಿಪರ್ಯಾಸ ಜರುಗಿದೆ. ಜನಸಮುದಾಯಗಳ ಹಿತವೇ ಪ್ರಧಾನವೆನಿಸಿದ್ದ ಪತ್ರಿಕೋದ್ಯಮ ಬಂಡವಾಳದ ತುಳಿತಕ್ಕೆ ಸಿಕ್ಕಿದೆ. ನಿಜ, ಅರ್ಥದಲ್ಲಿ ಕಾರ್ಪೊರೇಟ್ ಉದ್ಯಮವಾಗಿ ಬೆಳೆದಿದೆ. ಅದರ ಜನಪರ ಅಂತರಾತ್ಮದ ಹತ್ಯೆಯಾಗಿ ಹೋಗಿದೆ” ಎಂದು ಹೇಳಿದರು.

“ಮೀಡಿಯಾ ನಿಷ್ಪಕ್ಷಪಾತವಾಗಿರಬೇಕು ಎಂಬುದು ಮೋಸದಿಂದ ಕೂಡಿದ ಆಕರ್ಷಕ ಸುಳ್ಳು. ಹೊಸಕಾಲದ ಮಾಧ್ಯಮ ಸತ್ಯ ನ್ಯಾಯ ಪ್ರೀತಿಯ ಪಕ್ಷಪಾತಿಯಾಗಿರಬೇಕು. ಪತ್ರಕರ್ತ ಜಾರ್ಜ್ ಆರ್ವೆಲ್ ಬರೆದ 1948ರಲ್ಲಿ 1984 ಎಂಬ ಡಿಸ್ಟೋಪಿಯನ್ (ಕೇಡುಗಾಲ)ದ ಕಾದಂಬರಿಯಲ್ಲಿ, ಆಳುವ ಪಕ್ಷ ಹೇಳಿದ್ದೇ ಅಂತಿಮ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕೋ ಅಥವಾ ಐದೋ ಎಂದು ಅನುಮಾನಿಸುವ ಅನಿಶ್ಚಯತೆಯ ಹಂತಕ್ಕೆ ಜನತೆಯನ್ನು ತಳ್ಳಲಾಗುತ್ತದೆ. ಕೆಲವು ಸಲ, ನಿರ್ದಿಷ್ಟ ತಾತ್ವಿಕ ಅಥವಾ ಸೈದ್ಧಾಂತಿಕ ಪರಿಕಲ್ಪನೆಗಳ ಸಂದರ್ಭದಲ್ಲಿ ಎರಡಕ್ಕೆ ಎರಡು ಸೇರಿಸಿದರೆ ಐದು ಕೂಡ ಆಗಬಹುದು ಎಂದು ಪ್ರಜೆಗಳು ಒಪ್ಪಬೇಕಾಗುತ್ತದೆ. ಕಟ್ಟಕಡೆಗೆ ಎರಡಕ್ಕೆ ಎರಡು ಸೇರಿಸಿದರೆ ಆಳುವ ಪಕ್ಷ ಎಷ್ಟು ಹೇಳುತ್ತದೋ ಅಷ್ಟು ಎಂಬ ಸ್ಥಿತಿಗೆ ಜನತೆಯನ್ನು ಬಗ್ಗಿಸಲಾಗುತ್ತದೆ.

ಸರ್ವಾಧಿಕಾರಿ ಸಮಾಜಗಳ ಎರಡು ಚಹರೆಗಳನ್ನು ಆತ ಗುರುತಿಸಿದ್ದ. ಒಂದು ಸುಳ್ಳು ಹೇಳುವುದು ಮತ್ತೊಂದು schizophrenia (ಅಂದರೆ ಛಿದ್ರಮನಸ್ಕತೆ. ನಿರಂತರ ಭ್ರಾಂತಿಗಳಿಂದ ಕೂಡಿದ ಮಾನಸಿಕ ವ್ಯಾಧಿ). ಸಂಘಟಿತವಾಗಿ ಸುಳ್ಳು ಹೇಳುವುದು ಸರ್ವಾಧಿಕಾರಿ ಪ್ರಭುತ್ವದ ಅವಿಭಾಜ್ಯ ಅಂಗ. ವರ್ತಮಾನಕ್ಕೆ ಸ್ಥಾನ ಕಲ್ಪಿಸಲು ಗತವನ್ನು ನಿರಂತರವಾಗಿ ತಿದ್ದಿ ಬರೆಯುವುದೂ ಈ ಸುಳ್ಳು ಹೇಳುವಿಕೆಯಲ್ಲಿ ಸೇರಿದೆ. ಇಂತಹ ಪ್ರಭುತ್ವ schizophrenic ಆಲೋಚನಾ ವ್ಯವಸ್ಥೆಯನ್ನೇ ಏರ್ಪಡಿಸಿಬಿಡುತ್ತದೆ. ನೆನಪಿಡಿ ಆರ್ವೆಲ್ ಈ ಮಾತುಗಳನ್ನು ಬರೆದದ್ದು 1948ರಲ್ಲಿ.

ಗುಣಮಟ್ಟದ ಪತ್ರಿಕೋದ್ಯಮಕ್ಕೆ ಶಾರ್ಟ್‌ಕಟ್‌ಗಳು ಇಲ್ಲ. ಶಕ್ತಿಯುತ ಮತ್ತು ಉತ್ತರದಾಯಿ ಮಾಧ್ಯಮ ಹೊಂದಬೇಕಿದ್ದರೆ ಟಿ.ಆರ್.ಪಿ. ಅಥವಾ ಜಾಹೀರಾತು ಅವಲಂಬಿತ ಮಾದರಿಯ ಪತ್ರಿಕೋದ್ಯಮ ಸಾಯಬೇಕು. ಹಣ ಸಂದಾಯ ಮಾಡಿ ಸೇವೆಗಳನ್ನು ಪಡೆಯುವ ಮಾದರಿಯಲ್ಲಿ ಓದುಗರು ಕಾಸು ತೆತ್ತು ಸುದ್ದಿ ಓದುವ ಕಾಲ ಬರಬೇಕು. ಅದು ಸದ್ಯಕ್ಕೆ ಬರುವ ನಿಚ್ಚಳ ಸೂಚನೆಗಳು ಕಾಣುತ್ತಿಲ್ಲ. ಪರಿಸರ ಮತ್ತು ಅಭಿವೃದ್ಧಿಯ ವ್ಯಾಖ್ಯಾನಗಳೇ ಬದಲಾಗಿ ಹೋಗುತ್ತಿರುವ ಅಪಾಯಕಾರಿ ಕಾಲಮಾನ ಇದು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಆಗುವ ಪ್ರಯೋಜನ ಏನು ಎಂಬುದು ಇಂದಿನ ಅಭಿವೃದ್ಧಿಯ ಮಾನದಂಡವಾಗಿ ಉಳಿದಿಲ್ಲ” ಎಂದರು.

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ಕನ್ನಡ ಪತ್ರಿಕೋದ್ಯಮದ ಚರಿತ್ರೆಯಲ್ಲಿ ಅಪ್ಪಟ ಜನಪರ ಅಧ್ಯಾಯಗಳನ್ನು ಕಟ್ಟಿದ ಕೆಲವೇ ಧೀಮಂತರ ಪೈಕಿ ಒಬ್ಬರು ವಡ್ಡರ್ಸೆ ರಘುರಾಮಶೆಟ್ಟಿಯವರು. ನೇರವಾಗಿ ಅವರೊಂದಿಗೆ ಕೆಲಸ ಮಾಡುವ ಸಂದರ್ಭ ನನಗೆ ಬರಲಿಲ್ಲ. ಸಾಮಾನ್ಯ ಓದುಗರು ಪತ್ರಿಕೆಯ ಒಡೆಯರಾಗಬೇಕೆಂಬ ಕನಸನ್ನು ನನಸು ಮಾಡಲು ತಮ್ಮ ಬದುಕಿನ ಬಹುಮುಖ್ಯ ಆಯಸ್ಸನ್ನು ತೇದವರು. ಕೇವಲ 1,000/- ರೂ. ದೇಣಿಗೆ ನೀಡುವ ಮೂಲಕ ಷೇರುಗಳನ್ನು ಖರೀದಿಸಿ ಪತ್ರಿಕೆಯ ಒಡೆಯರಾಗಬೇಕೆಂದು ಅವರು ಬಯಸಿದ್ದರು. “ಚಿಂತನೆಯ ಹೊಳೆ ಹರಿಸಿ, ಜನಶಕ್ತಿಯ ಬೆಳೆ ತೆಗೆಯುವ ಮುಂಗಾರು” ಎಂಬುದು ಅವರ ಪತ್ರಿಕೆಯೇ ಧ್ಯೇಯವಾಕ್ಯ ಆಗಿತ್ತು. ದೀನದಲಿತರು, ದುರ್ಬಲರು-ವಂಚಿತರ ಪರವಾಗಿ ಅಕ್ಷರಶಃ ಪತ್ರಿಕಾಲೋಕದಲ್ಲಿ ಗುಡುಗಿದ ದನಿ ಅವರದಾಗಿತ್ತು. ಬಂಡವಾಳವಾದ ಅವರನ್ನು ಸೋಲಿಸಿತು. ಕಡೆಯ ದಿನಗಳನ್ನು ನೋವಿನಲ್ಲಿ ಕಳೆದರು” ಎಂದು ನೆನಪು ಮಾಡಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....