ಕೊಡಗು | ಬಜೆಟ್ ಟೀಕಿಸಿದ ಮಾಜಿ ಶಾಸಕರು ; ಬಹಿರಂಗ ಚರ್ಚೆಗೆ ಬರುವಂತೆ ಸವಾಲ್

Date:

Advertisements

ಕೊಡಗು ಜಿಲ್ಲೆ,ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೆನ್ವಿರಾ ಮೈನಾ ಮಾತನಾಡಿ ಜನತೆಯ ನಿರೀಕ್ಷೆಗೂ ಮೀರಿ ಜಿಲ್ಲೆಗೆ ಅನುದಾನ ತರುವಲ್ಲಿ ಶಾಸಕದ್ವಯರು ಯಶಸ್ವಿಯಾಗಿದ್ದಾರೆ, ಮಾಜಿ ಶಾಸಕರು ಟೀಕಿಸುವುದನ್ನು ಬಿಟ್ಟು ಹಾಲಿ ಶಾಸಕರುಗಳ ಜೊತೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು.

2025-26 ರ ಸಾಲಿನ ರಾಜ್ಯ ಬಜೆಟ್ ಕೊಡಗು ಜಿಲ್ಲೆಯ ಪಾಲಿಗೆ ಗೋಲ್ಡನ್‌ ಬಜೆಟ್ ಆಗಿದ್ದು, ಶಾಸಕದ್ವಯರ ಪರಿಶ್ರಮ, ಕ್ರಿಯಾಶೀಲತೆ ಹಾಗೂ ಬದ್ದತೆಯ ಪರಿಣಾಮ 2025-26 ರ ರಾಜ್ಯ ಬಜೆಟ್ ನಲ್ಲಿ 1800 ಕೋಟಿ ರೂ ಗಳಿಗೂ ಹೆಚ್ಚಿನ ಬರಪೂರ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಹಾಗಾಗಿ, ಈ ಬಾರಿಯ ಬಜೆಟ್ ಕೊಡಗಿನ ಪಾಲಿಗೆ ಇತಿಹಾಸ ನಿರ್ಮಿಸಿದೆ.

ಹಿಂದಿನ ಸರ್ಕಾರಗಳು ಕೊಡಗು ಜಿಲ್ಲೆಯನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ರೀತಿಯಲ್ಲಿ ಪರಿಗಣಿಸಿಕೊಂಡು ಬಂದಿರುವುದನ್ನು ನಾವೆಲ್ಲಾ ಗಮನಿಸಿದ್ದೇವೆ.ಆದರೆ, ಈ ಬಾರಿ ಸರ್ಕಾರ ವಿಶೇಷ ಕಾಳಜಿ ವಹಿಸಿ ಕೊಡಗು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ.” ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ.ವಿರಾಜಪೇಟೆಗೆ 250 ಕೋಟಿ ರೂ ವೆಚ್ಚದ ಜಿಲ್ಲಾಸ್ಪತ್ರೆ ದರ್ಜೆಯ 400 ಬೆಡ್ ಸಾಮರ್ಥ್ಯದ ಆಸ್ಪತ್ರೆ,75 ಕೋಟಿ ವೆಚ್ಚದಲ್ಲಿ ಕುಶಾಲ ನಗರ ಆಸ್ಪತ್ರೆ ಆಧುನೀಕರಣ, 65 ಕೋಟಿ ವೆಚ್ಚದಲ್ಲಿ ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ” ಘೋಷಣೆಯಾಗಿದೆ.

Advertisements

” ಕೊಡಗಿನಲ್ಲಿ ಐದು ಕರ್ನಾಟಕ ಪಬ್ಲಿಕ್ ಶಾಲೆಗಳು. ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿಧ್ಯಾರ್ಥಿಗಳಿಗಾಗಿ ಎರಡು ಹಿಂದುಳಿದ ವರ್ಗಗಳ ಹಾಸ್ಟೆಲ್ ಗೆ ಮಂಜೂರಾತಿ ನೀಡಿದೆ. ಕೊಡಗಿನ ಐದು ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಿದೆ.ಕೂಡಿಗೆ ಕ್ರೀಡಾಶಾಲೆಯ ಅಭಿವೃದ್ದಿಗೆ ಮೂರು ಕೋಟಿ ರೂ ಅನುದಾನ ಒದಗಿಸಲಾಗಿದೆ.ಕಟ್ಟಡ ಕಾರ್ಮಿಕರು ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು 6 ನೇ ತರಗತಿಯಿಂದ 12 ನೇ ತರಗತಿಯವರೆಗೆ ಎರಡು ವಸತಿ ಶಾಲೆಗಳು ಅಸ್ತು ” ಎಂದಿದೆ.

” ಕೊಡಗಿನ ರಸ್ತೆಗಳಿಗೆ ದಾಖಲೆಯ ಅನುದಾನ ಬಂದಿದೆ.ರಾಷ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಸುಧಾರಿಸುವ ಯೋಜನೆಯಲ್ಲಿ NH 275 ರಿಂದ NH 75 ಸಂಪರ್ಕಿಸುವ ಮಡಿಕೇರಿ ,ಮಾದಾಪುರ, ಸೋಮವಾರಪೇಟೆ, ಕೊಡ್ಲಿಪೇಟೆ ದೋಣಿಗಲ್ ರಸ್ತೆ ಆಧುನೀಕರಣಕ್ಕೆ 625 ಕೋಟಿ ರೂಗಳು. ವಿರಾಜಪೇಟೆ, ಮಡಿಕೇರಿ ರಸ್ತೆಯ ಸೇತುವೆ ದುರಸ್ತಿ ಕಾರ್ಯಕ್ಕೆ 20 ಕೋಟಿ ರೂಗಳು,ಕೊಡಗು ಜಿಲ್ಲೆಯ ಜಿಲ್ಲಾ ಮುಖ್ಯ ರಸ್ತೆಗಳು ( MDR) ,ರಾಜ್ಯ ಹೆದ್ದಾರಿಗಳು ಮತ್ತು ಲೋಕೋಪಯೋಗಿ ರಸ್ತೆಗಳಿಗೆ 165 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 135.5 ಕೋಟಿ ರೂ ಒದಗಿಸಲಾಗಿದೆ.ಪ್ರಗತಿ ಪಥ ಯೋಜನೆಯಲ್ಲಿ 100 ಕೋಟಿ ರೂಗಳಲ್ಲಿ ಗ್ರಾಮದಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಯೋಜನೆಯನ್ನು ಘೋಷಣೆ ” ಮಾಡಿದೆ.

‘ ಆದಿವಾಸಿ ಜನಾಂಗಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 33.5 ಕೋಟಿ ರೂಗಳನ್ನು ಒದಗಿಸಲಾಗಿದೆ. ಭೂ ಕುಸಿತ ತಡೆಯಲು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ 50 ಕೋಟಿ ರೂ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಗೆ ಐದು ಕೋಟಿ ರೂಗಳ ಅನುದಾನ ನೀಡಲಾಗಿದೆ ‘ ಎಂದರು.

ಇವು ವಿಶೇಷ ಅನುದಾನಗಳಾಗಿದ್ದರೆ ಸಾಮಾನ್ಯ ಕಾರ್ಯಕ್ರಮಗಳಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ, ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ,ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ,ಮುಜರಾಯಿ ಇಲಾಖೆ, ಸೇರಿದಂತೆ ಎಲ್ಲಾ ಇಲಾಖೆಗಳಿಂದ ಹಿಂದಿನ ವರ್ಷಗಳಿಗಿಂತಲೂ ಅತ್ಯಧಿಕ ಅನುದಾನಗಳನ್ನು ಮೀಸಲಿಡಲಾಗಿದೆ. ಇದಲ್ಲದೆ, ಇಂಧನ ಇಲಾಖೆ ವಿದ್ಯುತ್ ವ್ಯವಸ್ಥೆ ಆಧುನೀಕರಣಕ್ಕೆ 200 ಕೋಟಿ ರೂ ಅನುದಾನ ಈಗಾಗಲೇ ನೀಡಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ನೀಡುವ ವಿಶೇಷ ಆದ್ಯತೆಯ ರೀತಿಯಲ್ಲಿಯೇ ಕೊಡಗು ಜಿಲ್ಲೆಯನ್ನು ಪರಿಗಣಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಬರುವ ಸುಳಿವು ಇದ್ದ ಕೊಡಗಿನ ಮಾಜಿ ಶಾಸಕರು ಹಾಗೂ ಕೊಡಗು ಬಿಜೆಪಿ ಮುಖಂಡರು ಜನರ ದೃಷ್ಟಿಕೋನ ಬದಲಿಸಲು ಅನಾವಶ್ಯಕ ಪ್ರತಿಭಟನೆ ನಡೆಸುತ್ತಿದೆ. ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಶಾಸಕರ ರಾಜೀನಾಮೆ ಕೇಳುತ್ತಿದ್ದಾರೆ.ಸಿ ಅಂಡ್ ಡಿ ಲ್ಯಾಂಡ್ ಸಮಸ್ಯೆ ಆಗಿದ್ದೆ ಆಗಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್,ಕೆ ಜಿ ಬೋಪಯ್ಯ ಮತ್ತು ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ದಿಂದ. ದಿನಾಂಕ 21-4-2021 ರಂದು ಕೊಡಗಿನ 11 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಎಂದು ಹೈ ಕೋರ್ಟ್ ಆದೇಶ ನೀಡಿದಾಗ ಆಗಿನ ಸರ್ಕಾರ ಏನು ಮಾಡುತ್ತಿತ್ತು? ಅಂದಿನ ಕೊಡಗಿನ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಬೋಪಯ್ಯನವರು ಯಾಕೆ ಕೋರ್ಟ್ ಗೆ ಅಫಿಡವಟ್ ಸಲ್ಲಿಸಲು ಸರ್ಕಾರಕ್ಕೆ ಒತ್ತಾಯಿಸಲಿಲ್ಲ? ಮೊದಲು ಅಪ್ಪಚ್ಚು ರಂಜನ್ ಕ್ಷೇತ್ರದ ಜನರ ಮನೆ ಮನೆಗೆ ಹೋಗಿ ಕೈ ಮುಗಿದು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ದಿನದ 18 ಗಂಟೆಗಳ ಕಾಲ ಕ್ಷೇತ್ರದ ಜನತೆಯ ಕೆಲಸ ಮಾಡುತ್ತಿರುವ ಶಾಸಕದ್ವಯರ ಬಗ್ಗೆ ಅಪ ಪ್ರಚಾರ ಮಾಡಿ ರಾಜೀನಾಮೆ ಕೇಳುವುದಲ್ಲಾ.ಅಂತಹ ನೈತಿಕತೆ ಅವರಿಗಿಲ್ಲಾ. ಮಾಜಿ ಶಾಸಕರು ಇಂತಹ ಟೀಕೆ ಮಾಡುವುದು ಬಿಟ್ಟು ಚರ್ಚೆಗೆ ಬರಲಿ ಎಂದರು.

ಈ ಸುದ್ದಿ ಓದಿದ್ದೀರಾ? ಕೊಡಗು | ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎ ಹಂಸ, ಸೇವಾದಳ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ,ಡಿಸಿಸಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಖಲೀಲ್ ಬಾಷಾ, ಮಾಜಿ ನಗರ ಸಭಾ ಸದಸ್ಯ ಕೆ ಜೆ ಪೀಟರ್ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X