ಚಿಂತಾಮಣಿ ನಗರದ ಮದೀನಾ ಮಸೀದಿ ಅಜಾಮ್ ಕಮಿಟಿ, ಎಸ್ ಜಿ ಎಂ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್, ಆಂಟಿ ಕರೆಕ್ಷನ್ ಕಮಿಟಿ ಸಹಯೋಗದಲ್ಲಿ ನವೆಂಬರ್ 25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಯೋಜಿಸಲಾಗಿದೆ ಎಂದು ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ತಿಳಿಸಿದರು.
ನಗರದ ಮದೀನಾ ಮಸೀದಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.25ರಂದು ಬೆಳಗ್ಗೆ 9:30 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಚಿಂತಾಮಣಿ ನಗರದ ಶ್ರೀನಿವಾಸಪುರ ರಸ್ತೆಯಲ್ಲಿರುವ ನಸೀಬ್ ಶಾದಿ ಮಹಲ್ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ, ನ್ಯೂರೋ ಸರ್ಜರಿ, ಯುರಾಲಜಿ, ಕಿಡ್ನಿ, ಇ ಎನ್ ಟಿ ಮತ್ತು ಕಣ್ಣು ಸೇರಿದಂತೆ ವಿವಿಧ ರೀತಿಯ ರೋಗಗಳ ಕುರಿತು ತಪಾಸಣೆ ನಡೆಸಲಾಗುವುದು. ಪ್ರತಿಯೊಬ್ಬರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಚಿಂತಾಮಣಿ | ಬಾಬು ಜಗಜೀವನ್ ರಾಮ್ ಭಾವಚಿತ್ರ ಕಸಕ್ಕೆಸೆದು ಅವಮಾನ ; ಪ್ರತಿಭಟನೆ
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ರಹೀಂ ಸಾಬ್, ಗುಲ್ಜರ್ ಸಾಬ್, ಆರಿಫ್ ಪಾಷ, ಮೌಲಾ ಖಾನ್, ಮಹಬೂಬ್ ಪಾಷಾ, ಸಮೀರ್ ಪಾಷಾ, ಜುನೇದ್ ಉಲ್ಲಾ ಖಾನ್ ಸೇರಿದಂತೆ ಮತ್ತಿತರರಿದ್ದರು.