ತಿಪಟೂರು ತಾಲೂಕಿನ ಯುವಜನತೆಯ ಉದ್ಯೋಗಾರ್ಹತೆ ಹೆಚ್ಚಿಸಲು ಇಲ್ಲಿನ ಸತ್ಯಕುಮಾರ್ ರಿಲೀಫ್ ಫೌಂಡೇಷನ್ ವತಿಯಿಂದ ಸ್ಥಾಪಿಸಲಾಗಿರುವ ಸಂಪೂರ್ಣ ಉಚಿತ ಕೌಶಲ ತರಬೇತಿ ಕೇಂದ್ರ ಗುರುವಾರ ಕಾರ್ಯಾರಂಭಗೊಂಡಿತು.
ಇಂದು ಮೊದಲ ಬ್ಯಾಚಿನ ಅಭ್ಯರ್ಥಿಗಳಿಗೆ ತರಬೇತಿ ಆರಂಭಗೊಳ್ಳುತ್ತಿದ್ದು, ಇದು ಶೇಕಡ ನೂರರಷ್ಟು ಉದ್ಯೋಗ ಗ್ಯಾರಂಟಿಯೊಂದಿಗೆ ರೂಪಿಸಿರುವ 35 ದಿನಗಳ ಉಚಿತ ತರಬೇತಿ ಕಾರ್ಯಕ್ರಮವಾಗಿದೆ. ಎಸ್ ಎಸ್ ಎಲ್ ಸಿ, ಡಿಪ್ರೊಮಾ ಮತ್ತು ಪದವಿ ಪಾಸ್ ಅಥವಾ ಫೇಲ್ ಆದವರಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಟ್ಯಾಲಿ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್, ಜಿ ಎಸ್ ಟಿ, ಜೀವನ ಕೌಶಲ್ಯ ಗಳು, ಆಪ್ತ ಸಮಾಲೋಚನೆ ಹಾಗೂ ಆತ್ಮವಿಶ್ವಾಸ ವೃದ್ಧಿಗೆ ಆದ್ಯತೆ ನೀಡುವ ಮೂಲಕ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ ಎಂದು ಶ್ರೀಧರ್ ವಿವರಿಸಿದರು.

ಶಾಸಕ ಕೆ ಷಡಕ್ಷರಿ ಅವರು ಮಾತನಾಡಿ, “ಸತ್ಯಕುಮಾರ್ ಪ್ರತಿಷ್ಠಾನ, ಎಂ ಜೆ ಎಸ್ ಪಿ ಆರ್ ಮತ್ತು ಉನ್ನತಿ ಸಂಸ್ಥೆಯ ಸಹಯೋಗದಲ್ಲಿ ಈ ಕೌಶಲ್ಯ ಕೇಂದ್ರ ಸ್ಥಾಪಿಸಿ ಶ್ಲಾಘನೀಯ ಕಾರ್ಯ ಮಾಡಿದೆ. ಪ್ರಸ್ತುತ ಉದ್ದಿಮೆಗಳ ನಿರೀಕ್ಷೆಗಳಿಗೆ ಅನುಗುಣವಾಗಿ ಯುವಜನತೆಯಲ್ಲಿ ಕೌಶಲಗಳನ್ನು ಮೈಗೂಡಿಸಬೇಕೆಂಬುದೇ ಈ ಉಪಕ್ರಮದ ಉದ್ದೇಶವಾಗಿದ್ದು, ಇಲ್ಲಿನ ಯುವಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.
ಉನ್ನತಿ ಪ್ರತಿಷ್ಠಾನವು ರಾಷ್ಟ್ರೀಯ ಕೌಶಲಾಭಿವೃದ್ಧಿ ಮಂಡಳಿಯಿಂದ (ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟಲ್ ಕೌನ್ಸಿಲ್) ಮಾನ್ಯತೆ ಹೊಂದಿದ್ದು, ದೇಶದಾದ್ಯಂತ 38 ಕೌಶಲ ಕೇಂದ್ರಗಳನ್ನು ಸ್ಥಾಪಿಸಿದೆ. ಸಂಸ್ಥೆಯು ವಿವಿಧ ಮುಂಚೂಣಿ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಈವರೆಗೆ 70,000ಕ್ಕೂ ಹೆಚ್ಚು ಜನರನ್ನು ತರಬೇತಿಯೊಂದಿಗೆ ಸಜ್ಜುಗೊಳಿಸಿ ಉದ್ಯೋಗ ಲಭ್ಯವಾಗಿಸಿದೆ ಎಂದು ಎಂ ಜೆ ಎಸ್ ಪಿ ಆರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜೆ ಶ್ರೀಕಾಂತ್ ಹೇಳಿದರು.
ಕಾರ್ಯಕ್ರಮದಲ್ಲಿ ಫೌಂಡೇಷನ್ ನ ಟ್ರಸ್ಟಿ ಡಾ.ಜಿ.ಎಸ್.ಶ್ರೀಧರ್, ಶಂಕರ ಕಿಯೋನಿಕ್ಸ್ ಸಂಸ್ಥೆಯ ಶಿವಪ್ರಕಾಶ್, ಉನ್ನತಿ ತರಬೇತುದಾರರಾದ ತೃಪ್ತಿ, ಚೇತನಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
I am inters