ರಾಜ್ಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಒಂದು ಕಡೆ ರೈತರಿಗೆ ಸಂತೋಷವಾದರೆ, ಇನ್ನೊಂದು ಕಡೆ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದ ಎಷ್ಟೋ ಮನೆಗಳು, ಕುಸಿದ ಗೋಡೆಗಳು ಹಾನಿಗೀಡಾಗಿದ್ದು, ಸ್ಥಳಿಯರನ್ನು ಸಂಕಷ್ಟಕ್ಕೆ ದೂಡಿದೆ.
ಗದಗ ಜಿಲ್ಲೆಯಲ್ಲೂ ನಿರಂತರ ಮಳೆಯಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ಜುಲೈ 1 ರಿಂದ 28ರವರೆಗೆ 118 ಮಿಮೀ ಮಳೆಯಾಗಿದೆ. ವಾಡಿಕೆ ಮಳೆ 61 ಮಿಮೀ ಇದ್ದು ಶೇ.93 ರಷ್ಟು ಮಳೆ ಹೆಚ್ಚಾಗಿದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 192 ಮನೆಗಳು ಭಾಗಶಃ ಹಾನಿಗೀಡಾಗಿವೆ. ತಾಲೂಕುವಾರು ನೋಡುವುದಾದರೆ, ಗದಗ-73, ಗಜೇಂದ್ರಗಡ-15, ಲಕ್ಷ್ಮೇಶ್ವರ-46, ಮುಂಡರಗಿ-8, ನರಗುಂದ-19, ರೋಣ-4, ಶಿರಹಟ್ಟಿ-27 ಮನೆಗಳು ಹಾನಿಯಾಗಿವೆ.
ನಿರಂತರ ಮಳೆಯಿಂದ ಬಹುತೇಕೆರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೂಡಲೇ ಸರ್ಕಾರವು ಗದಗ ಜಿಲ್ಲೆಯಾದ್ಯಂತ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಉಕ್ಕಿ ಹರಿಯುತ್ತಿದೆ ಕೃಷ್ಣಾ ನದಿ; ಸೇತುವೆ ಮುಳುಗಡೆ
ಜಲಾಶಯ ಮಟ್ಟ: ನವಿಲು ತೀರ್ಥ ಜಲಾಶಯ 37.785 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈವರೆಗೆ 18.311 ಟಿಎಂಸಿ ನೀರು ಸಂಗ್ರಹವಾಗಿದೆ. ನೀರಿನ ಒಳ ಹರಿವು 12,821 ಕ್ಯೂಸೆಕ್ ಇದ್ದು, ಹೊರ ಹರಿವು 194 ಕ್ಯೂಸೆಕ್ ಇದೆ. ಭದ್ರಾ ಜಲಾಶಯ 71.535 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈವರೆಗೆ 38,271 ಟಿಎಂಸಿ ನೀರು ಸಂಗ್ರಹವಾಗಿದೆ. ನೀರಿನ ಒಳ ಹರಿವು 16,041 ಕ್ಯೂಸೆಕ್ ಇದ್ದು, ಹೊರ ಹರಿವು 185 ಕ್ಯೂಸೆಕ್ ಇದೆ.