ಶಾಲೆಯ ಮಕ್ಕಳು ನಮ್ಮ ದೇಶದ ಮಹಾನ್ ನಾಯಕರ ಉದಾತ್ತ ಚಿಂತನೆಗಳನ್ನು, ಅಖಂಡ ಭಾರತಕ್ಕೆ ಸುಭದ್ರವಾದ ಸಂವಿಧಾನ ಬರೆದುಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರ ದೇಶದ ಭವ್ಯ ಕನಸನ್ನು ನಾವೆಲ್ಲರೂ ಒಗ್ಗೂಡಿ ನನಸು ಮಾಡಬೇಕು ಎಂದು ಮುಖ್ಯ ಶಿಕ್ಷಕ ಬಿ ಸಿ ಗಣಿ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಹಳ್ಳಿರಂಗ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಏಕ ಉಪಯೋಗಿ ಪ್ಲಾಸ್ಟಿಕ್ ಬಳಕೆಗೆ ಎಚ್‌ಡಿಎಂಸಿ ಕಡಿವಾಣ
ಕಾರ್ಯಕ್ರಮದಲ್ಲಿ ಹಳ್ಳಿರಂಗ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರೂಪಾ ತಾಳದವರ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಪತ್ರಕರ್ತ ಶರಣು ಸವಡಿ, ಹಳ್ಳಿರಂಗ ಶಿಕ್ಷಣ ಸಂಸ್ಥೆಯ ಕಾಶಿನಾಥ ನವಲಗುಂದ, ಇಮಾಮ ಬೊದ್ಲೆಖಾನ್, ಗದಿಗೆಪ್ಪ ಕಡಿ, ಸಂಸ್ಥಾಪಕ ಕವಿ ವೀರಪ್ಪ ತಾಳದವರ ಸೇರಿದಂತೆ ಇತರರು ಇದ್ದರು.