ಗದಗ ಜಿಲ್ಲೆಯ ನರೇಗಲ್ಲ ಪಟ್ಟಣದ ಶ್ರೀಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವಿ ಕೇಳಿಸದ ವಿಶೇಷಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಲ್ಲಕಂಬ ಕ್ರೀಡೆ ಪ್ರದರ್ಶಿಸಿದ್ದಾರೆ.
75ನೇ ಗಣರಾಜ್ಯೋತ್ಸವದ ಅಂಗವಾಗಿ ಅಂಗ ಸಂಸ್ಥೆಯ ವತಿಯಿಂದ ಪದವಿ ಮಹಾವಿದ್ಯಾಲಯದ ಆವರಣಲ್ಲಿ ಏರ್ಪಡಿಸಲಾದ ಕಾಯ೯ಕ್ರಮದಲ್ಲಿ ಮಲ್ಲಕಂಬ ಪ್ರದರ್ಶನದಲ್ಲಿ 40ಕ್ಕೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಈ ಕ್ರೀಡೆಯಲ್ಲಿ ಪೋಲ್ ಮಲ್ಲಕಂಬ ಪ್ರದರ್ಶನ ಹಾಗೂ ರೋಪ ಮಲ್ಲಕಂಬದ ಆಟ, ಈ ಆಟಗಳಲ್ಲಿ ದಸರಂಗ, ಸಲಾಮಿ, ಹಾಲಾಸನ, ಭಜರಂಗಾಸನ, ಸಂಖ್ಯಾಸನ, ವೀರಭದ್ರಾಸನ, ಚೋಕಾರ ಆಸನ ಅಲ್ಲದೇ ರೋಪ ಮಲ್ಲಕಂಬ ಕ್ರೀಡೆಯಲ್ಲಿ ಕ್ರಾಸ್, ಪದ್ಮಾಸನ, ಪಶ್ಚಿಮ ಉತ್ತಾಸನ, ಕ್ರೀತ್ತಾಸನ, ಭಜರಂಗಾಸನ, ಪಾದಹಸ್ತಾಸನ, ಒಳಗೊಂಡು ಕೆಲವು ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.
ನರೇಗಲ್ಲದ ಮಲ್ಲಕಂಬ ಕ್ರೀಡಾಪಟು ಕಳಪ್ಪ ಚವಡಿ ಹಾಗೂ ಎಂ.ವ್ಹಿ. ಹರ್ಲಾಪೂರ, ರಫೀಕ ರೇವಡಿಗಾರ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಕಿವುಡ ಮಕ್ಕಳು ಮಲ್ಲಕಂಬ ಪ್ರದರ್ಶನ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಮ.ನಿ.ಪ್ರ. ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಆಡಳಿತಾಧಿಕಾರಿಗಳಾದ ಎನ್.ಆರ್. ಗೌಡರ, ಕಿವುಡ ಮಕ್ಕಳ ಶಾಲೆಯ ಚೇರ್‌ಮನ್ ಶರಣಪ್ಪ ರೇವಡಿ ಹಾಗೂ ಸಂಸ್ಥೆಯ ಸದಸ್ಯರುಗಳು, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.