ದೇಶದ ಬಿಡುಗಡೆಗೆ ಮಡಿದ ವೀರ ಹುತಾತ್ಮರನ್ನು ವಿದ್ಯಾರ್ಥಿಗಳು ಸದಾ ಸ್ಮರಿಸಬೇಕು ಎಂದು ಹಳ್ಳಿರಂಗ ಶಾಲೆಯ ಮುಖ್ಯ ಶಿಕ್ಷಕ ಸಿ ಬಿ ಜವಳಿ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಹಳ್ಳಿರಂಗ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗ್ರಾಮೀಣ ಮಟ್ಟದಿಂದಲೇ ವಿದ್ಯಾರ್ಥಿಗಳು ಸುಶಿಕ್ಷಿತರಾಗುತ್ತ ದೇಶ ಸೇವೆಗೆ ಕಂಕಣ ಬದ್ದರಾಗಬೇಕು” ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮದ ಹಿರಿಯ ಮುಖಂಡ ರುದ್ರಗೌಡ ಮುಲ್ಕಿ ಪಾಟೀಲ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಶಿಕ್ಷಕ ಮುತ್ತು ಕುರಿ ಸ್ವಾತಂತ್ರ್ಯ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಕವಿ ವೀರಪ್ಪ ಹ ತಾಳದವರ ಕಾರ್ಯಕ್ರಮ ಆಯೋಜಕರಾಗಿ, ನಿರೂಪಣೆ ನಿರ್ವಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಆಚರಣೆ ಅದ್ದೂರಿ: ಸಚಿವ ಡಾ ಎಚ್ ಸಿ ಮಹದೇವಪ್ಪ
ಹಳ್ಳಿರಂಗದ ಅಧ್ಯಕ್ಷೆ ರೂಪಾ, ಕಾರ್ಯದರ್ಶಿ ಬಿ ಸಿ ಗಣಿ, ಉಪಾಧ್ಯಕ್ಷ ಇಮಾಮಾ ಬೊದ್ಲೆಖಾನ್, ಸಹ ಕಾರ್ಯದರ್ಶಿ ಕಾಶಿನಾಥ ನವಲಗುಂದ, ನೇತ್ರಾ ಕೊಣ್ಣೂರು, ಹಿರಿಯರಾದ ಗದಿಗೆಪ್ಪ ಕಡಿ, ಯುವಮುಖಂಡ ನಿಂಗು ಚಲವಾದಿ, ಪ್ರಶಾಂತ ತಾಳದವರ, ಹಳ್ಳಿರಂಗ ವಿದ್ಯಾರ್ಥಿಗಳು ಇದ್ದರು.