“ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಆರಂಭದಿಂದಲೂ ಪ್ರಾಮಾಣಿಕ ಪ್ರಯತ್ನ, ಸತತ ಪರಿಶ್ರಮ, ಕಠಿಣ ಅಭ್ಯಾಸದೊಂದಿಗೆ ಸಾಧನೆಯ ಒಂದೊಂದು ಮೆಟ್ಟಿಲು ಏರುತ್ತಾ ಹೋದಾಗ ಮಾತ್ರ ಸಾಧನೆಯ ಉತ್ತುಂಗಕ್ಕೆರಲು ಸಾಧ್ಯವೆಂದು ನಿವೃತ್ತ ಪ್ರಾಚಾರ್ಯರಾದ ಮುಕ್ತಾ ಉಡುಪಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು” ಎಂದು ಮುಖ್ಯ ಅತಿಥಿ ಮುಕ್ತಾ ಉಡುಪಿ ಹೇಳಿದರು.
ಗದಗ ಪಟ್ಟಣದ ವಿದ್ಯಾದಾನ ಶಿಕ್ಷಣ ಸಮಿತಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೫-೨೬ ನೇ ಸಾಲಿನ ವಿದ್ಯಾರ್ಥಿ ಸಂಘದ ಮತದಾರರ ಜಾಗೃತಿ ಕ್ಲಬ್, ಪ್ರಥಮ ಪಿಯುಸಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮತನಾಡಿದರು.
“ಈ ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಆ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನವನ್ನು ಮಾಡುವುದು ಅವಶ್ಯ. ಈ ಹಂತದಲ್ಲಿ ತಮ್ಮ ಏಕಾಗ್ರತೆಯನ್ನು ಬೇರೆ ಕಡೆಗೆ ಸೆಳೆಯಲು ಹಲವಾರು ಆಕರ್ಷಣೆ ನಿಮ್ಮ ಸುತ್ತಲೂ ಇರುತ್ತವೆ. ಎಲ್ಲವುಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದಾಗ ನಿಮ್ಮ ತಂದೆ ತಾಯಿ ಗುರುಗಳ ಪರಿಶ್ರಮ ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರು ಎಂ. ಸಿ. ಕಟ್ಟಿಮನಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಕಿಶೋರಬಾಬು ಜೆ. ನಾಗರಕಟ್ಟಿ ಅತಿಥಿ ಅಧ್ಯಕ್ಷರನ್ನು ಪರಿಚಯಿಸಿದರು. ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸುವದರ ಜೊತೆಗೆ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ. ಬಿ. ಹುಯಿಲಗೋಳ ಮಾತನಾಡಿ, “ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಒಂದೊಂದು ಸಾಮರ್ಥ್ಯವಿದೆ. ಅದನ್ನು ಅರಿಯಲು ಕಾಲೇಜಿನ ಹಂತ ಒಂದು ಸುವರ್ಣಕಾಲ. ತಮ್ಮ ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುವದರೊಂದಿಗೆ ಅಧ್ಯಯನಗೈದ ಸಂಸ್ಥೆಗೆ, ಗುರುಗಳಿಗೆ, ತಂದೆ ತಾಯಿಗಳಿಗೆ ಕೀರ್ತಿಯನ್ನು ತರಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಲೋಕರ್ಪಾಣೆ
ಕಾರ್ಯಕ್ರಮದ ಕೊನೆಗೆ ಉಪನ್ಯಾಸಕರಾದ ಜೆ. ಡಿ. ಸಂಶಿ ವಂದಿಸಿದರು. ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಿ. ತೊಂಡಿಹಾಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಗೀನಾ ಜೆ. ಕದರಳ್ಳಿ, ಸಂಜನಾ ಹಂಚಿನಾಳ ಹಾಗೂ ಸಂಜನಾ ಲಮಾಣಿ, ಉಪನ್ಯಾಸಕರಾದ ಟಿ. ಎಮ್. ನದಾಫ, ಎಸ್. ಪಿ. ಪಮ್ಮಾರ, ಪಿ. ಜೆ. ಕಟ್ಟಿಮನಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.