ಈ ದೇಶದ ಜನರು ಎಲ್ಲರೂ ಸಮಾನವಾಗಿ ಹಾಗೂ ಸುರಕ್ಷಿತವಾಗಿ ಇದ್ದಾರೆ ಎಂದರೆ ಅದಕ್ಕೆ ಕಾರಣ ಈ ದೇಶದ ಸಂವಿಧಾನ ಅದನ್ನು ನಮಗೆ ಕೊಟ್ಟ ಅಂಬೇಡ್ಕರ್. ಅವರ ಜೀವನ, ಸಾಗಿ ಬಂದು ದಾರಿ, ಹೋರಾಟ ನಮ್ಮೆಲ್ಲರಿಗೂ ಮಾದರಿ ಎಂದು ಎಂ.ಎ. ಪ್ರಭಣ್ಣವರ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ಅಂಬೇಡ್ಕರ್ ಗೆಳಯರ ಬಳಗ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಾಯಕನ ಜನ್ಮ ದಿನದ ಅಂಗವಾಗಿ ಕಬಡ್ಡಿ ಪಂದ್ಯದಲ್ಲಿ ನಾನು ಭಾಗಿಯಾಗಿರುವುದು ತುಂಬಾ ಸಂತೋಷ ತಂದಿದೆ. ಕಬಡ್ಡಿ ಆಟದಿಂದ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರುವುದರಿಂದ ಯುವಕರು ಕಬಡ್ಡಿ ಕ್ರೀಡೆಯಲ್ಲಿ ತೊಡಗುವುದರಿಂದ ಅವರ ಬೆಳವಣಿಗೆ ಸಹಾಯಕ. ಕ್ರೀಡಾಪಟುಗಳು ಯಾವುದೇ ದುಷ್ಟ ಚಟದಿಂದ ದೂರ ಇರಬೇಕು. ಆಟದ ಜೊತೆಗೆ ಪಾಠದ ಕಡೆಯ ಹೆಚ್ಚಿನ ಗಮನ ಕೊಡಬೇಕು ಎಂದರು.
ಈ ವೇಳೆ ಕಬಡ್ಡಿಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ಅಭಿಷೇಕ್ ಮುಂದಿನಮನಿಯನ್ನು ಗೌರವಿಸಲಾಯಿತು. ಕಬಡ್ಡಿ ಪಂದ್ಯಾವಳಿಗೆ ಸಹಾಯ ಮಾಡಿದ ಗಣ್ಯರಿಗೆ ಗೌರವ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಹರ್ಷ ಕೋಗಿಲೆ, ಶರಣಯ್ಯ ರುದ್ರಾಕ್ಷಿಮಠ, ಈರಣ ಬಳಗೇರ, ರವಿಕುಮಾರ ಕರಮುಡಿ ಹಾಗೂ ಊರಿನ ಯುವಕರು ಸಾರ್ವಜನಿಕರು ಭಾಗಿಯಾಗಿದ್ದರು.
ವರದಿ: ಮಂಜು ಬುರಡಿ ಗದಗ
