ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯದಲ್ಲಿ 16 ಹದಿನಾರು ವರ್ಷ 4 ತಿಂಗಳ ಅನುಸೂಯಾ ಹೆಸರಿನ ಹುಲಿಯು ಶನಿವಾರ ಮೃತಪಟ್ಟಿದೆ.
ಹೊಲ್ಡಿಂಗ್ ಕೋಣೆಯಲ್ಲಿದ್ದ ಅನಸೂಯಾ ಹುಲಿ ತನ್ನ ವೃದ್ಧಾಪ್ಯದಿಂದ ಸಾವನ್ನಪ್ಪಿದ್ದು, ಆಕೆಯ ಮರಣದ ನಂತರ ವಿವರವಾದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.
ಕೇಂದ್ರೀಯ ಮೃಗಾಲಯ ಪ್ರಾಧಿಕಾರವು ನಿಗಧಿಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಅನಸೂಯಾಳ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
“ಚಿಕಿತ್ಸೆ ನೀಡಿದರೂ ಮಾಂಸ ಹಾಗೂ ಗಟ್ಟಿಯಾದ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಇದರಿಂದ ಅಂದಿನಿಂದಲೂ ಆಹಾರ ಜಗಿಯುವ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೆ, ವಯಸ್ಸೂ ಆಗಿದ್ದರಿಂದ 16 ವರ್ಷದ ಹೆಣ್ಣು ಹುಲಿ ಅನಸೂಯ ಮೃತಪಟ್ಟಿತು” ಎಂದು ಮೃಗಾಲಯದ ಅಧಿಕಾರಿ ಸ್ನೇಹಾ ಪೂಜಾರ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ತಮಟೆ ಚಳವಳಿ
ಈ ಸಮಯದಲ್ಲಿ ಗದಗ ಮೃಗಾಲಯದ ನಿರ್ದೇಶಕರು ಹಾಗೂ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ, ಗದಗ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪೊಲೀಸಪಾಟೀಲ, ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕ ಡಾ.ಶಶಿಧರ ಬಳ್ಳಾರಿ, ಮೃಗಾಲಯದ ವಲಯ ಅರಣ್ಯ ಅಧಿಕಾರಿಗಳು/ಕ್ಯೂರೇಟರ್ ಸ್ನೇಹಾ, ಕೊಪ್ಪಳ ಅಧ್ಯಕ್ಷರು, ಸದಸ್ಯರು ಹಾಗೂ ಮೃಗಾಲಯದ ಸಿಬ್ಬಂದಿಗಳು ಇದ್ದರು.
