“ಅನೇಕ ದಶಕಗಳಿಂದ ಸಮಾಜದ ಒಳಿತಿಗಾಗಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಅನೇಕ ಜನ ಹಿರಿಯರು ತಮ್ಮ ಜೀವನವನ್ನೇ ಸವೆಸಿದ್ದಾರೆ. ಇಂತಹ ಸದೃಢ ಸಮಾಜ ಕಟ್ಟುವಲ್ಲಿ ಶ್ರಮಿಸಿದ. ಸಮಾಜದ ಹಿರಿಯರನ್ನು ಮತ್ತು ನಾಯಕರ ಸ್ಮರಣೆಗೆ ಭೂಮಿ ಮಂಜೂರು ಮಾಡಬೇಕು” ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ ಒತ್ತಾಯಿಸಿದರು.
ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಗದಗ ಜಿಲ್ಲೆಯಲ್ಲಿ ನಮ್ಮ ಛಲವಾದಿ ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತೀ ಹಿಂದುಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ನ್ಯಾಯದ ಪರ ನಿಲ್ಲುವ ಸರ್ಕಾರಗಳು ಬಂದ ನಂತರ ಭಲವಾದಿ ಸಮಾಜ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದೆ. ಆದರೂ ‘ಸಮಾಜದಲ್ಲಿ ಇನ್ನೂ ಕೂಡಾ ಹೇಳಿಕೊಳ್ಳುವಷ್ಟು ಬದಲಾವಣೆಗಳು ಆಗಿಲ್ಲ’ ಎನ್ನುವ ಬೇಸರವನ್ನು ವ್ಯಕ್ತಪಡಿಸುತ್ತಾ, ಇಂತಹ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕಾರಿಯಾಗಲು ನಮಗೆ ಬಂದು ಶೈಕ್ಷಣಿಕ ಭವನದ ಅವಶ್ಯಕತೆ ಇದೆ” ಎಂದು ಮನವಿ ಮಾಡಿದರು.
“ಜಿಲ್ಲೆಯಲ್ಲಿ ಛಲವಾದಿ ಸಮಾಜಕ್ಕೆ ಕನಿಷ್ಠ ಐದು ಎಕರೆ ಭೂಮಿಯನ್ನು ಮಂಜೂರು ಮಾಡಬೇಕು. ಅಲ್ಲಿ ಸಮಾಜದ ಅಭಿವೃದ್ಧಿಗಾಗಿ ಚಿಂತನೆ ನಡೆಸುವ ಭವ್ಯವಾದ ಕಟ್ಟಡ ಕಟ್ಟಲು ಮತ್ತು ಮಹಿಳೆಯರ ಮಕ್ಕಳ ಹಾಗೂ ವಿದ್ಯಾರ್ಥಿ ಯುವಜನರ ಆಶೋತ್ತರಗಳಿಗೆ ಪೂರಕವಾಗುವ ಯೋಜನೆಗಳನ್ನು ರೂಪಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ ಸಮಾಜದ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿದ್ದು ಅದನ್ನು ಮತ್ತಷ್ಟು ಪ್ರೋತ್ಸಾಹಿಸಲು ನಮಗೆ ಮಕ್ಕಳ ಯುವಜನರ ವಿಧ್ಯಾಭ್ಯಾಸಕ್ಕಾಗಿ ಕಟ್ಟಡವನ್ನು ನಿರ್ಮಿಸಲು ಅವಕಾಶ ಕಲ್ಪಿಸಿಕೊಡಬೇಕು” ಎಂದು ಆನಂದ ಶಿಂಗಾಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೈಬರ್ ವಂಚನೆ ಬಗ್ಗೆ ಎಚ್ಚರವಹಿಸಿ : ಪ್ರೊ.ಬಿ.ಎಸ್.ಬಿರಾದಾರ್
ಮನವಿ ಸಂದರ್ಭದಲ್ಲಿ ಮುಖಂಡರು ಬಾಲರಾಜ್ ಅರಬರ್, ಶಿವಾನಂದ ತಮ್ಮಣ್ಣವರ, ಮುತ್ತು ಚೌಡಣ್ಣವರ, ಪರಶು ಕಾಳೆ, ಅನಿಲ್ ಕಾಳೆ, ರಮೇಶ್ ಛಲವಾದಿ ಇನ್ನೂ ಅನೇಕರು ಉಪಸ್ಥಿತರಿದ್ದರು.
