ಗೋಡೆ ಕುಸಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಕುರುಬಗೇರಿ ಓಣಿಯಲ್ಲಿ ಘಟನೆ ಜರುಗಿದೆ.
ಮೃತ ಬಾಲಕ ಪ್ರದೀಪ್ ಗೋನಾಳ್ ಎಂದು ತಿಳಿದು ಬಂದಿದೆ. ಈತ ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳೆಯರೊಂದಿಗೆ ಆಟವಾಡುವಾಗ ಗೋಡೆ ಬಳಿ ಅವಿತು ಕುಳಿತಾಗ ಘಟನೆ ಜರುಗಿದೆ. ಗೋಡೆ ಬಿದ್ದ ಶಬ್ದ ಕೇಳಿ ಓಡಿ ಬಂದು ಸ್ಥಳೀಯರು ರಕ್ಷಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ನಗರದಲ್ಲಿ ಚಿರತೆ ಪ್ರತ್ಯಕ್ಷ : ಜನರಲ್ಲಿ ಮನೆ ಮಾಡಿದ ಆತಂಕ!
ಆದರೆ ಆಸ್ಪತ್ರೆಗೆ ಕರೆದೊಯುವಾಗ ಪ್ರದೀಪ್ ಮಾರ್ಗ ಮಧ್ಯೆ ಕೊನೆಯುಸಿರೆಳಿದಿದ್ದಾನೆ. ಘಟನೆ ಕುರಿತು ನರಗುಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
