ಗದಗ | ಸಿ ಸಿ ಪಾಟೀಲ ಅಭಿಮಾನಿ ಬಳಗದಿಂದ ಬಡವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ನುಗಳ ವಿತರಣೆ

Date:

Advertisements

ಅಭಿವೃದ್ಧಿಯ ಹರಿಕಾರ, ಶಿಕ್ಷಣ ಪ್ರೇಮಿ, ಗದಗ ಜಿಲ್ಲೆ ಕಂಡ ಶ್ರೇಷ್ಠ ನಾಯಕ ಸಿ ಸಿ.ಪಾಟೀಲರವರ 66ನೇ ಜನ್ಮದಿನದ ಪ್ರಯುಕ್ತ ಸಿ ಸಿ ಪಾಟೀಲ ಅಭಿಮಾನಿ ಬಳಗದಿಂದ ಬಳಗಾನೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ನು ವಿತರ‌ಣೆ ಮಾಡಿದರು.

ಗ್ರಾಮದ ಬಿಜೆಪಿ ಮುಖಂಡ ಶರಣಪ್ಪ ಚಟ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, “ಸಿ ಸಿ ಪಾಟೀಲ ಅವರು ಬಡವರ ದೀನ ದಲಿತರ ಪರವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಲೋಕೋಪಯೋಗಿ ಇಲಾಖೆ ಸಚಿವರಿದ್ದಾಗ ನರಗುಂದ ಮತಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದರ ಜತೆಗೆ ಸಾಕಷ್ಟು ಶಾಲೆ, ವಸತಿನಿಲಯಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ” ಎಂದು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತಾ ಪಂ ಮಾಜಿ ಸದಸ್ಯ ಶೇಖಣ್ಣ ಎಸ್ ಅಗಸಿಮನಿ ಮಾತನಾಡಿ, “ಸಿ ಸಿ ಪಾಟೀಲ ಸಾಹೇಬರು ದೂರದೃಷ್ಠಿಯುಳ್ಳ ನಾಯಕರು. ಅಧಿಕಾರ ಇರಲಿ ಬಿಡಲಿ ಸದಾಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತನೆ ನಡೆಸಿರುವ ನಾಯಕ. ಸಿಕ್ಕಂತಹ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುವುದರ ಜತೆಗೆ ಇತರೆ ರಾಜ್ಯಕೀಯ ನಾಯಕರಿಗೆ ಮಾದರಿಯಾಗಿದ್ದಾರೆ. ಅವರು ಶಿಕ್ಷಣ ಪ್ರೇಮಿಗಳಾಗಿದ್ದು, ತಾವೇ ಲಯನ್ಸ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲ‌ ಕಲ್ಪಿಸಿದ್ದಾರೆ. ಅಲ್ಲದೆ ಬಡ ಮಕ್ಕಳ ಬಗ್ಗೆ ಅಪಾರವಾದ ಕಾಳಜಿಯುಳ್ಳ ಸಹೃದಯವನ್ನು ಹೊಂದಿರುವವರು. ಅವರ ಹುಟ್ಟು ಹಬ್ಬದ ಶುಭದಿನದಂದು ಸಿ ಸಿ ಪಾಟೀಲ‌ ಅಭಿಮಾನಿ ಬಳಗದಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ನು ವಿತರಿಸುತ್ತಿರುವುದು ಉತ್ತಮವಾದ ಕಾರ್ಯ” ಎಂದು ಹೇಳಿದರು.

Advertisements

ಬಿಜೆಪಿ ಯುವ ಮುಖಂಡ ಕುಮಾರ ಮಳ್ಳಿಮಠ ಮಾತನಾಡಿ, “ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗಿ ಮಾರ್ಪಟ್ಟಿವೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ಒದಗಿಸುತ್ತಿದ್ದು‌, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಅಲ್ಲದೆ ಸನ್ಮಾನ್ಯ ಸಿ ಸಿ ಪಾಟೀಲರ ಅಭಿಮಾನಿಗಳು ಕೊಡುತ್ತಿರುವ ನೋಟ್‌ಬುಕ್ ತಮ್ಮ ಜೀವನ ರೂಪಿಸಿಕೊಳ್ಳುವ ಮೈಲುಗಲ್ಲುಗಳಾಗಿ ಪರಿವರ್ತನೆಯಾಗಲಿ” ಎಂದು ಹಾರೈಸಿದರು.

ಈ ಸುದ್ದಿ ಓದಿದ್ದೀರಾ? ಕೊಡಗು | ಕೇರಳ ಮೂಲದ ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ವಂಚನೆ; ಆರೋಪಿ ಬಂಧನ

ಮುಖ್ಯ ಅತಿಥಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭುರಾಜ ಗೂಳರಡ್ಡಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಳಗಾನೂರ ಎಸ್‌ಡಿ‌ಎಂ‌ಸಿ ಅಧ್ಯಕ್ಷ ಬಸವರಾಜ ಚಲವಾದಿ, ಅತಿಥಿ ಆರ್ ಎನ್ ಪಾಟೀಲ, ಗ್ರಾ ಪಂ ಸದಸ್ಯ ಬಳಗಾನೂರ ಹನಮಪ್ಪ ಕಮಲದಿನ್ನಿ, ಬಿಜೆಪಿ ಮುಖಂಡ ಶರಣಪ್ಪ ಚಟ್ರಿ, ಬಿಜೆಪಿ ಯುವ ಮುಖಂಡ ಕುಮಾರ ಮಳ್ಳಿಮಠ, ಹಿರಿಯರಾದ ಹನುಮರಡ್ಡೆಪ್ಪ ಕರಡ್ಡಿ, ಯುವ ಮುಖಂಡರಾದ ಈಶ್ವರಗೌಡ್ರ, ಕಾಶೀಗೌಡ್ರ, ಶಶಿಧರ ಗೂಳರಡಗ್ಡಿ, ಮಕ್ತುಮಹುಸೇನ ಮುಲ್ಲಾ, ಮಂಜುನಾಥ ಆರಬಳ್ಳಿನ, ಪ್ರದೀಪ ಗಾಣಿಗೇರ, ಬಸವರಾಜ, ಚವಡಿ, ಶರಣಪ್ಪ ಬಿಂಗಿ, ಬಸವರಾಜ ಕರಡ್ಡಿ, ಪ್ರಶಾಂತ ಶಟವಾಜಿ, ತಿಪ್ಪಣ್ಣ ಕರಿಭರಮಣ್ಣವರ, ಮಂಜುನಾಥ ದೊಡ್ಡಮನಿ, ಹನಮಂತ ನಡುವಿನಮನಿ, ಸುನೀಲ ಬೇವಿನಮರದ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X