ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಹಳ್ಳಿರಂಗ ಶಾಲೆಯಲ್ಲಿ ಗಣರಾಜ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರ ಮಾರ್ಗದಲ್ಲಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಸಂಶಾದ ಬಾಬಾನಗರವರು ನೇರಿವೆರಿಸಿದರು.
ನಂತರ “ಗ್ರಾಮದ ಪ್ರಗತಿ, ಬಯಲು ಶೌಚಕ್ಕೆ ಮುಕ್ತಿ , ಉತ್ತಮ ರಸ್ತೆ ಮತ್ತು ಸ್ವಚ್ಛತೆ. ಶಾಲೆಗಳ ಉನ್ನತೀಕರಣ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು” ಎಂದು ಅಧ್ಯಕ್ಷರಿಗೆ ಹಳ್ಳಿರಂಗ ಸದ್ಯಸರು ಮನವಿ ಮಾಡಿಕೊಂಡರು.
ಕವಿ ವೀರಪ್ಪ ತಾಳದವರ ಮಾತನಾಡಿ, “ಡಾ.ಬಿ.ಆರ್. ಅಂಬೇಡ್ಕರವರ ಸಂವಿಧಾನದ ಆಶಯದಂತೆ ನಾವೆಲ್ಲ ಭಾರತೀಯರಾಗಿ ಬಾಳುತ್ತಲೆ ನಮ್ಮ ದೇಶದ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು.
ಹಳ್ಳಿರಂಗ ಕ್ಯಾಲೆಂಡರ್ ಬಿಡುಗಡೆ
ಹಳ್ಳಿರಂಗ ಐದನೆ ವರ್ಷ ಪೂರೈಸಿದ ಈ ಸವಿ ನೆನಪಲ್ಲಿ ವಿಶೇಷ ದಿನದರ್ಶಿಕೆಯನ್ನು ಹಳ್ಳಿರಂಗವು ಬಿಡುಗಡೆಗೊಳಿಸಿತು. ಹಳ್ಳಿರಂಗ ಐದು ವರ್ಷಗಳ ವಿಶೇಷ ಕಾರ್ಯ ಚಟುವಟಿಕೆ ಈ ಕ್ಯಾಲೆಂಡರಿನಲ್ಲಿವೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನ ಜೀವಾಳ : ಪ್ರೊ.ಬಿ.ಎಸ್.ಬಿರಾದಾರ್
ಕಾರ್ಯಕ್ರಮದಲ್ಲಿ ಹಳ್ಳಿರಂಗ ಪ್ರಧಾನ ಕಾರ್ಯದರ್ಶಿ ಬಿ.ಸಿ. ಗಣಿ, ಅಧ್ಯಕ್ಷ ರಾದ ಶ್ರೀಮತಿ ರೂಪಾ ವೀರಪ್ಪ, ಇಮಾಮ ಬೊದ್ಲೆಖಾನ, ಕಾಶೀನಾಥ ನವಲಗುಂದ ನವಲಗುಂದ, ನೇತ್ರಾವತಿ ಕೊಣ್ಣೂರು, ರವಿ ಕಾಳಿ, ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಬಿ.ಜವಳಿ, ಗ್ರಾಮ ಲೆಕ್ಕಾಧಿಕಾರಿಗಳು, ಸದಸ್ಯ ಕೆಂಚಪ್ಪ ಮಾದರ ,ಶಿಕ್ಷಕ ಮುತ್ತು ಕುರಿ, ಹಿರಿಯರಾದ ಗದಿಗೆಪ್ಪ ಕಡಿ, ಹಳ್ಳಿರಂಗ ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರು ಅನೇಕರು ಭಾಗವಹಿಸಿದ್ದರು.
