ಗದಗ | ಮಕ್ಕಳು ನೋಡಿ ಕಲಿಕೆಯನ್ನು ಅನುಭವವಾಗಿಸಿಕೊಳ್ಳಬೇಕು: ಸಾಹಿತಿ ಯಲ್ಲಪ್ಪ ಹಂದ್ರಾಳ

Date:

Advertisements

“ನೋಡಿದ್ದು ಬಹುಕಾಲ ಉಳಿಯುವುದರಿಂದ ಮಕ್ಕಳು ಪಾಠ ಕೇಳುವುದಲ್ಲ, ನೋಡಿ ಕಲಿಯುವಂತಿರಬೇಕು. ಪ್ರಾತ್ಯಕ್ಷಿಕೆಗಳನ್ನು ನೋಡಿ ಕೇಳಿಸಿಕೊಳ್ಳುತ್ತಿರುವ ಕಥೆ, ಘಟನೆ, ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಲೇ ಮನೋರಂಗದಲ್ಲಿ ನೋಡಿ ಕಲಿಕೆಯನ್ನು ಅನುಭವವಾಗಿಸಿಕೊಳ್ಳಬೇಕು” ಎಂದು ಡಯಟ್ನ ಉಪನ್ಯಾಸಕ  ಸಾಹಿತಿ ಯಲ್ಲಪ್ಪ ಹಂದ್ರಾಳ ಹೇಳಿದರು.

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಬೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

“ರಾಮೇನಹಳ್ಳಿ ಶಾಲೆ ಸುಂದರ ಆಕರ್ಷಕ ಕಲಿಕಾ ಪರಿಸರವನ್ನು ಹೊಂದಿದೆ. ಮಕ್ಕಳು ಸ್ವಯಂ ಕಲಿಕೆಯಲ್ಲಿ ತೊಡಗಲು ಪ್ರೇರೇಪಿಸುವಂತಿದೆ. ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಚೆನ್ನಾಗಿರುವುದು ಇತರರಿಗೆ ಮಾದರಿಯಾಗಿದೆ. ಮಕ್ಕಳಿಗೆ ಶಾಲಾಶಿಕ್ಷಣದಲ್ಲಿ ಹಿಂದೆಂದಿಗಿಂತಲೂ ಇಂದು ಸಾಕಷ್ಟು ಅವಕಾಶಗಳಿದ್ದು, ಹಲವು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಂಡು ಎಲ್ಲರೂ ಉತ್ತಮ ಶಿಕ್ಷಣ ಪಡೆದು ಬೆಳೆಯಬೇಕು” ಎಂದರು. 

Advertisements

ಪುರಸಭೆಯ ಸದಸ್ಯೆ ಶ್ರೀಮತಿ ದೇವಕ್ಕ ದಂಡಿನ ಸಸಿಗೆ ನೀರೆರೆಯುವ ಮೂಲಕ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿದರು. 

2025-26 ನೇ ಸಾಲಿನ ಕ್ರೀಡಾ ಚಟುವಟಿಕೆ ಉದ್ಘಾಟಿಸಿದ, ಶಾಲಾ ತರಗತಿ ಕೋಣೆಗಳನ್ನು ಕಲಿಕಾಸ್ನೇಹಿ ಚಿತ್ತಾರಗಳೊಂದಿಗೆ ಆಕರ್ಷಕಗೊಳಿಸುವಲ್ಲಿ ಸಹಕರಿಸಿದ ದಾನಿಗಳು ಆನಂದಗೌಡ ಪಾಟೀಲ ಮಾತನಾಡಿ, “ಸರಕಾರಿ ಶಾಲೆಗಳು ಉಳಿದರೆ ಸಾಮಾನ್ಯ ಜನರಿಗೆ ಗುಣಾತ್ಮಕ ಶಿಕ್ಷಣ ಸಿಗುತ್ತದೆ. ಸಮುದಾಯದ ಸಹಕಾರ ಹಾಗೂ ನೆರವಿನಿಂದ ಸರಕಾರಿ ಶಾಲೆಗಳು ಉಳಿದು ಬೆಳೆಯಬಲ್ಲವು” ಎಂದರು.

ಅತಿಥಿಗಳು ತಾಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಹನಮರಡ್ಡಿ ಇಟಗಿ ಮಾತನಾಡಿ, “ಮಕ್ಕಳು ನಿರಂತರ ಉತ್ಸಾಹದಿಂದ ಇದ್ದು ಚಟುವಟಿಕೆಯಿಂದ ತೊಡಗಿಸಿಕೊಂಡರೆ ಕಲಿಕೆ ಯಶಸ್ವಿಯಾಗಿ ಆಗುತ್ತದೆ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು” ಎಂದರು. 

ಬೇಸಿಗೆ ರಜಾ ಅವದಿಯಲ್ಲಿ  ನಾಲ್ಕು ಮತ್ತು ಐದನೇ ತರಗತಿ ಮಕ್ಕಳಿಗೆ ನಡೆದ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಹಾವೇರಿ | ನಾನು ಸೌಮ್ಯ ವ್ಯಕ್ತಿಯಾಗಿದ್ದರೂ ನನ್ನೊಳಗೆ ಕ್ರಾಂತಿ, ಬಂಡಾಯ ಅಡಗಿತ್ತು: ಕವಿ ಸತೀಶ ಕುಲಕರ್ಣಿ

ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಲಿಂಗರಾಜ. ಡಾವಣಗೇರಿ,  ಉಮೇಶರಡ್ಡಿ ಮೇಟಿ, ಎಸ್.ಡಿ. ಎಂ.ಸಿ ಸದಸ್ಯರಾದ ಉಮೇಶ ದಂಡೀನ, ರಾಮಣ್ಣ ತಿಗರಿ, ಪಾಲಕರಾದ ಪರಮೇಶ್ ದಂಡಿನ, ವಿಠಲ ಜಂಬಗಿ, ಬಸವರಾಜ ಅಂಗಡಿ, ಅಶೋಕ ಕೋಳಿ, ಸಂತೋಷ ಚೌಟಗಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಡಾ. ನಿಂಗು ಸೊಲಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ಆರ್. ಗುಗ್ಗರಿ ಸ್ವಾಗತಿಸಿದರು. ಬಿ.ಎಚ್. ಹಲವಾಗಲಿ ವಂದಿಸಿದರು. ಪಿ.ಎಂ. ಲಾಂಡೆ ಕಾರ್ಯಕ್ರಮ ನಿರೂಪಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X