ಗದಗ | ದಲಿತ ಮುಖಂಡರ ವಿರುದ್ಧ ದೂರು ದಾಖಲು; ಹಿಂಪಡೆಯುವಂತೆ ದಸಂಸ ಆಗ್ರಹ

Date:

Advertisements

ದಲಿತ ಮುಖಂಡರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಗದಗ ಜಿಲ್ಲಾ ಘಟಕವು ಜಿಲ್ಲಾಧಿಕಾರಿ‌ಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಗದಗ ಜಿಲ್ಲಾ ಘಟಕ ಪ್ರಧಾನ ಸಂಚಾಲಕ ಬಾಲರಾಜ ಅರಬರ ಮಾತನಾಡಿ, “ದಂಡ ಪ್ರಕ್ರಿಯೆ ಸಂಹಿತೆ ಕಲಂ 107ನ್ನು ಗದಗ ಶಹರ ಸಿಪಿಐ ಹಾಗೂ ಪಿಎಸ್‌ಐ ಇವರುಗಳು ದಲಿತ ಮುಖಂಡರುಗಳ ವಿರುದ್ಧ ಜೂನ್‌ 15ರಂದು ದೂರು ದಾಖಲಿಸಿ ದಲಿತ ದೌರ್ಜನ್ಯ ಎಸಗಿದ್ದಾರೆ. ಕಾರಣ ತೋಂಟದಾರ್ಯ ಮಠ ಗದಗ ಈ ಮಠದ ಜಾಗದಲ್ಲಿ ಟೆಂಡ‌ರ್ ಮುಖಾಂತರ ವ್ಯಾಪಾರಸ್ಥರಿಗೆ ಸ್ಥಳವನ್ನು ಒದಗಿಸಿದ್ದಾರೆ” ಎಂದು ಆರೋಪಿಸಿದರು.

“ದಲಿತ ಮುಖಂಡರು ಸೇರಿ ಮಳೆ ಬಂದು ವ್ಯಾಪಾರಸ್ಥರಿಗೆ ತೊಂದರೆಯಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದಾರೆ. ವ್ಯಾಪಾರಸ್ಥರಲ್ಲಿ ಅನೇಕ ದಲಿತ ಕುಟುಂಬಸ್ಥರು. ಅಲ್ಪಸಂಖ್ಯಾತ ಹಾಗೂ ಕಡುಬಡವರು ಇರುವುದರಿಂದ ದಲಿತ ಮುಖಂಡರು ಅವರ ನಷ್ಟದ ಕುರಿತು ಇನ್ನೂ ನಾಲ್ಕು ದಿನ ವ್ಯಾಪಾರ ಮಾಡಲು ಮಂಡಳಿಯವರಿಗೂ ಹಾಗೂ ಪೊಲೀಸ್‌ ಇಲಾಖೆಯವರಿಗೂ ನಮ್ರತೆಯಿಂದ ವಿನಂತಿಸಿಕೊಂಡಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಪೊಲೀಸ್ ಇಲಾಖೆಯವರು ದಲಿತರ ವಿರುದ್ಧ ದೂರು ದಾಖಲಿಸಿ ಒತ್ತಾಯಪೂರ್ವಕವಾಗಿ ಪೊಲೀಸ್‌ ನೋಟಿಸ್‌ಗೆ ಸಹಿಗಳನ್ನು ಮಾಡಿಸಿಕೊಂಡಿದ್ದಾರೆ  ಮತ್ತು ದಲಿತ ಚಳುವಳಿಯನ್ನು ಮೊಟಕುಗೊಳಿಸಿ ದಲಿತ ಮುಖಂಡರು ಯಾವುದೇ ರೀತಿ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಹುನ್ನಾರ ನಡೆಸಿದ್ದಾರೆ ಹಾಗೂ ಕೋಮುವಾದಿ ಸಂಘಟನೆಗಳೊಂದಿಗೆ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಬಡವರಿಗೆ ಅನ್ಯಾಯ ಮಾಡಿ. ಪೊಲೀಸ್‌ ಇಲಾಖೆಯವರು ದಲಿತರ ಮೇಲೆ ಪದೇಪದೆ ದೌರ್ಜನ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ವಿಜಯಪುರ | ಪೆಟ್ರೋಲ್ ಡಿಸೇಲ್ ದರ ಹೆಚ್ಚಳ; ದರ ಇಳಿಕೆಗೆ ಡಿವೈಎಫ್‌ಐ ಆಗ್ರಹ

ಪೊಲೀಸ್‌ ಇಲಾಖೆಯೇ ದಲಿತ ಮುಖಂಡರ ವಿರುದ್ಧ ದಾಖಲಿಸಿದ ದೂರನ್ನು ಹಿಂಪಡೆಯಬೇಕು. ಒಂದು ವೇಳೆ ಹಿಂಪಡೆಯದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತ ಹಾಗೂ ಅಲ್ಪಸಂಖ್ಯಾತರ ಸಂಘಟನೆಯ ಮುಖಾಂತರವಾಗಿ ಹೋರಾಟ ಮಾಡುತ್ತೇವೆ” ಎಂದು ಗದಗ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.

ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ಗಣೇಶ ಹುಬ್ಬಳ್ಳಿ, ನಾರಾಯಣ ದೊಡ್ಡಮನಿ ಸೇರಿದಂತೆ ಇನ್ನೂ ಮುಂತಾದವರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X