ಪರಿಶಿಷ್ಟ ಜಾತಿಗಳ ಮೂರು ದಶಕಗಳ ಒಳಮೀಸಲಾತಿ ಹೋರಾಟವನ್ನು ಮಾನ್ಯ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ರಾಜ್ಯ ಸರಕಾರ ಗಣಿನೆಗೆ ತಗೊಂಡು ಪರಿಗಣಿಸಿ, ‘ಸರ್ವರಿಗೂ ಸಮಪಾಲು ಸಮ ಬಾಳು’ ಎಂಬಂತೆ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಬಹುದಿನಗಳ ಕನಸನ್ನ ನನಸು ಮಾಡಿದ ಎಲ್ಲರಿಗೂ ಅಭಿನಂದನೆಗಳು” ಎಂದು ಪತ್ರಿಕಾ ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್. ಎನ್. ಬಳ್ಳಾರಿ ತಿಳಿಸಿದರು.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು “ಒಳಮೀಸಲಾತಿ ಜಾರಿಗೆ ಕಾರಣರಾದ ಮಾನ್ಯ ಸುಪ್ರೀಂ ಕೋರ್ಟ್, ಮಾನ್ಯ ನಾಗಮೋಹನ ದಾಸ ಆಯೋಗಕ್ಕೆ” ಅಭಿನಂದನೆ ಸಲ್ಲಿಸಿದರು.
ಪ್ರೊ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಮಾತನಾಡಿ, ಜಿಲ್ಲಾ ಸಂಚಾಲಕರು ದುರಗಪ್ಪ ಹರಿಜನ, ರಾಜ್ಯ ವಿಭಾಗಿಯ ಸಂಘಟನ ಸಂಚಾಲಕರು ಶರಣು ಎಂ. ಪೂಜಾರ ಮಾತನಾಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಗದಗ ಜಿಲ್ಲಾ ಸಂಘಟನ ಸಂಚಾಲಕರು ಸಂಗಪ್ಪ ಹೊಸಮನಿ, ರೋಣ ತಾಲೂಕು ಸಂಚಾಲಕರು ಸೋಮು ನಾಗರಾಜ, ರಾಜ್ಯ ವಿಭಾಗಿಯ ಸಂಚಾಲಕರು ಪ್ರಕಾಶ ಹೊಸಹಳ್ಳಿ, ಮುಂಡರಗಿ ತಾಲೂಕು ಸಂಚಾಲಕರು ಸೋಮಣ್ಣ ಹೈತಾಪುರು, ಜಿಲ್ಲಾ ಕಲಾ ಮಂಡಳಿ ಸಂಚಾಲಕರು ನಾಗರಾಜ ಗುತ್ತಿ, ಜಿಲ್ಲಾ ವಿದ್ಯಾರ್ಥಿ ಘಟಕದ ಸಂಚಾಲಕರು ಕೃಷ್ಣ ಪೂಜಾರ, ಜಿಲ್ಲಾ ನೌಕರರ ಘಟಕದ ಸಂಚಾಲಕರು, ಮಲ್ಲಣ್ಣ ಬಾವಿಮನಿ ಇನ್ನೂ ಅನೇಕರು ಉಪಸ್ಥಿತರಿದ್ದರು.