ಗದಗ | ನಿಸರ್ಗದಲ್ಲಿ ಹಬ್ಬದ ವಾತಾವರಣ ಸೃಷ್ಟಿ; ನೋಡುಗರ ಮನಸೂರೆಗೊಳಿಸುವ ಗುಲ್​ ಮೊಹರ್

Date:

Advertisements

ಪ್ರಕೃತಿಯ ಸೌಂದರ್ಯ ಅಗಾಧತೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಈ ನಿಸರ್ಗದ ಮಡಿಲಿನಲ್ಲಿ ಅದೆಷ್ಟೋ ಹೂವುಗಳು ಅರಳಿ ʼನಾನೆಷ್ಟು ಚಂದ ಅಲ್ಲವೇʼ ಎಂದು ಪೈಪೋಟಿಗೆ ಇಳಿದಾಗ, ʼನನ್ನಂತ ಚೆಲುವೆ ಯಾರಿಲ್ಲʼ ಎಂದು ನೋಡುಗರ ಕಣ್ಮನ ಸೆಳೆಯುತ್ತಿವೆ ಗುಲ್ ಮೊಹರ್ ಹೂವುಗಳು.

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಹಾಗೂ ಡ. ಸ. ಹಡಗಲಿ ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ಸಾಲು ಸಾಲಾಗಿ ಅರಳಿ ನಿಂತ ಗುಲ್ ಮೊಹರ್ ಮರಗಳು ಕಾಣಸಿಗುತ್ತವೆ. ಚಲುವನ್ನೇ ನಾಚಿಸುವ ಸುಂದರಿ ಗುಲ್ ಮೊಹರ್ ಮೈಮಾಟ, ಮೈತುಂಬ ಕೆಂಪು ಬಣ್ಣ ಮುಡಿದು, ನೋಡಿದವರು ಬೆರಗಾಗಿ, ಮನಸೋತು, ಅರೆ ಕ್ಷಣಹೊತ್ತು ಮೈಮರೆತು, ದಣಿವಾರಿಸಿಕೊಂಡು ನೆರಳಲ್ಲಿ ಅಂದವನ್ನು ಕಣ್ತುಂಬಿಕೊಳ್ಳುವರು.

ಗುಲ್ ಮೊಹರ್‌ನ ನಿಜವಾದ ಹೆಸರು ಡೆಲೊನಿಕ್ಸ್ ರೆಜಿಯ. ಕನ್ನಡದಲ್ಲಿ ಕತ್ತಿಕಾಯಿ ಮರ, ಕೆನ್ನಕೇಸರಿ ಎಂದೂ ಕರೆಯುವರು. ಗ್ರಾಮೀಣ ಪ್ರದೇಶಗಳಲ್ಲಿ ಸೀಮೆಸಂಕೇಶ್ವರ, ಕೆಂಪು ತುರಾಯಿ, ದೊಡ್ಡ ರತ್ನಗಂಧಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಗುಲ್ ಮೊಹರ್ ಎನ್ನುವರು. ದೂರದಿಂದ ನೋಡಿದಾಗ ಬೆಂಕಿಯ ಜ್ವಾಲೆಯಂತೆ ಕಂಡುಬರುವ ತನ್ನ ಕೆಂಬಣ್ಣದ ಹೂಗಳಿಂದಾಗಿ ಇದನ್ನು ಬೆಂಕಿಮರ ಅಥವಾ ಫೈರ್ ಟ್ರೀ ಅಂತಲೂ ಕರೆಯುವರು. ಭಾರತದಲ್ಲಿ ಇದು ಮೇ ತಿಂಗಳಲ್ಲಿ ಹೂ ಬಿಡುವುದರಿಂದ ಮೇ ಫ್ಲವರ್ ಎಂದೂ ಕರೆಯುತ್ತಾರೆ. ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಈ ಹೂವು ಹೋರಾಟ, ಶ್ರಮಾದಾನ ಮತ್ತು ಕಾರ್ಮಿಕರ ಸಂಕೇತವನ್ನು ಪ್ರತಿನಿಧಿಸುತ್ತವೆ. ಗುಲ್ ಮೊಹರ್ ಮೂಲ ಮಡಗಾಸ್ಕರ್. ಮಾರಿಷಸ್ ಮೂಲಕ ಭಾರತಕ್ಕೆ ತಲುಪಿತು. ಇದು ಹೆಚ್ಚಾಗಿ ಆಸ್ಟ್ರೇಲಿಯಾ, ಕೆರಿಬಿಯನ್, ದಕ್ಷಿಣ ಫ್ಲೋರಿಡಾ, ಚೀನಾ ಮತ್ತು ತೈವಾನ್‌ಗಳಲ್ಲಿ ಕಂಡುಬರುತ್ತದೆ.‌

Advertisements
ಗುಲ್‌ ಮೊಹರ್‌ 1

ಹೆಚ್ಚಿಗೆ ಉಷ್ಣ ವಲಯದಲ್ಲಿ ಬೆಳೆಯುವ ಗುಲ್ ಮೊಹರ್ ಕನಿಷ್ಠ 15 ರಿಂದ 25 ಮೀ ಎತ್ತರ ಬೆಳೆಯುತ್ತವೆ. ಫಲವತ್ತಾದ ನೆಲ ಮತ್ತು ನೀರಿನ ಸೌಲಭ್ಯವಿದ್ದರೆ ಇನ್ನೂ ಎತ್ತರವಾಗಿಯೂ ಬೆಳೆಯಬಹುದು.

ಗುಲ್ ಮೊಹ‌ರ್ ಹೂಗಳು ಸಾಕಷ್ಟು ದೊಡ್ಡವೂ, ಕಿತ್ತಳೆ ಮಿಶ್ರಿತ ಕೆಂಪುಬಣ್ಣದಿಂದ ಹಿಡಿದು ಕಡು ಕೆಂಪು ಬಣ್ಣದವರೆಗೂ ಹಲವಾರು ಬಗೆಗಳಿಂದ ಕೂಡಿ ಬಹುಸುಂದರವಾಗಿರುತ್ತವೆ. ಇದರ ಹೂಗಳು 5 ಪುಷ್ಪಪತ್ರಗಳನ್ನು ಹೊಂದಿರುತ್ತವೆ. ಅವುಗಳ ಹೊರಭಾಗ ಹಸಿರು ಹಾಗೂ ಒಳಭಾಗ ಕೆಂಪುಬಣ್ಣದಿಂದ ಕೂಡಿವೆ. ಪ್ರತಿಯೊಂದು ಹೂ 5 ದಳಗಳನ್ನು ಹೊಂದಿವೆ. ಅವುಗಳಲ್ಲಿ ನಾಲ್ಕು ಒಂದೇ ಬಗೆಯವಾಗಿದ್ದು ಕೆಂಪು ಬಣ್ಣದಿಂದ ಕೂಡಿರುತ್ತವೆ. ಉಳಿದ ಒಂದು ದಳ ಬಿಳಿ ಅಥವಾ ನೀಲಿ ಬಣ್ಣದಾಗಿದ್ದು, ಅದರ ಮೇಲೆಲ್ಲ ಕೆಂಪು ಮಚ್ಚೆಗಳಿವೆ. ಎಲ್ಲ ದಳಗಳ ಅಂಚುಗಳೂ ಕೊಂಚ ಮಡಿಚಿದಂತಿದೆ. ಹೂ 10 ಕೇಸರಗಳನ್ನು ಹೊಂದಿದ್ದು, ಕೆಂಪುಬಣ್ಣದಿಂದ ಕೂಡಿರುತ್ತವೆ. ಆದರೆ, ಹೂ ಬಿಡುವ ಮುನ್ನ ಎಲೆಗಳೆಲ್ಲ ಉದುರಿಹೋಗುತ್ತವೆ.

ಗುಲ್‌ ಮೊಹರ್‌ 2

ಮರದ ಆಕಾರ ಛತ್ರಿಯಂತೆ, ತೊಗಟೆ ಒರಟಾಗಿ ಅಲ್ಲಲ್ಲಿ ಗಂಟುಗಳು ಕಾಣಸಿಗುತ್ತವೆ. ಮುಡಿ ತುಂಬಾ ಮುಡಿದ ಹೂವು, ಗಾಳಿಗೆ ನೃತ್ಯ ಮಾಡುತ್ತವೆ. ಹೀಗೆ ಹೂವುಗಳು ದಿನಗಳೆಂದಂತೆ ಒಣಗಿ ನೆಲದ ಮೇಲೆ ಬಿದ್ದಾಗ ಕೆಂಪು ಹೊದಿಕೆ ಹಾಸಿದಂತೆ ಕಾಣುತ್ತದೆ. ಹೀಗೆ ಉದುರಿದ ಜಾಗ ಫಲವತ್ತತೆಯಿಂದ ಕುಡಿರುವುದು.

ಗ್ರಾಮೀಣ ಭಾಗದ ಜನರು ಮದುವೆ ಮನೆಗಳಲ್ಲಿ, ಗೃಹ ಪ್ರವೇಶದಲ್ಲಿ ಗುಲ್‌ಮೊಹರ್ ಟೊಂಗೆಗಳನ್ನು ಹೂ ಸಮೇತ ಕಿತ್ತು ಅಲಂಕರಿಸುತ್ತಾರೆ. ಮರದಲ್ಲಿರುವ ಖಡ್ಗವನ್ನು ಹೋಲುವ ಉದ್ದವಾದ ಕಾಯಿಗಳನ್ನು ಮಕ್ಕಳು ಕಿತ್ತು ಬೇಸಿಗೆ ರಜೆಯಲ್ಲಿ ಆಡಿ ನಲಿಯುತ್ತಿರುವುದು ನೆನಪಿಗೆ ಬರುತ್ತದೆ.

ಇದನ್ನೂ ಓದಿದ್ದೀರಾ? ತುಮಕೂರು | ಯುವಜನರನ್ನು ಅಂಬೇಡ್ಕರ್ ಬಯಸಿದ ಸಂವಿಧಾನದ ಕಡೆಗೆ ನಡೆಸುವುದು ನಮ್ಮ ಜವಾಬ್ದಾರಿ: ಹಿರಿಯ ಪತ್ರಕರ್ತ ಶಿವಸುಂದರ್

ಪೃಕೃತಿಯಲ್ಲಿ ರಾಶಿ ರಾಶಿಯಾಗಿ ಅರಳಿದ ಗುಲ್ ಮೊಹರ್ ಹೂವುಗಳು ನಿಸರ್ಗದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತವೆ. ಎಲ್ಲರ ಕಣ್ಮನ ಸೆಳೆಯುವ ಗುಲ್ ಮೊಹರ್ ಹೂ ‘ಮಡ್ ಗಾಸ್ಕರ್’, ‘ಫೆಡರೇಷನ್‌ ಆಫ್ ಸೆಂಟ್ ಕಿಟ್ಸ್’ ಮತ್ತು ‘ನೇವಿಸ್’ ಎಂಬ ವೆಸ್ಟ್ ಇಂಡೀಸ್‌ನ ದ್ವೀಪರಾಷ್ಟ್ರವೊಂದರ ರಾಷ್ಟ್ರೀಯ ಪುಷ್ಪ ಎನ್ನುವ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X