ಸರ್ಕಾರಿ ಇಲಾಖೆಗಳಲ್ಲಿ ವರ್ಷಪೂರ್ತಿ ಕೆಲಸದ ಒತ್ತಡದಲ್ಲೇ ಕಾಲ ಕಳೆಯುವ ಸಿಬ್ಬಂದಿಗೆ ಮಾನಸಿಕವಾಗಿ ನಿರಾಳತೆ, ಸಕ್ರಿಯವಾಗಿ ತಮ್ಮ ಕರ್ತವ್ಯದಲ್ಲಿ ಉತ್ಸಾಹ, ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸಲು ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಎಲ್ಲ ಇಲಾಖೆಯ ಸಿಬ್ಬಂದಿಗಳು ಒಬ್ಬರಿಗೊಬ್ಬರು ಪರಿಚಿತರಾಗಲು ಒಳ್ಳೆಯ ಸ್ನೇಹ ಸಂಬಂಧದ ಸೇತುವೆಯಾಗಿ ಈ ಕ್ರಿಕೆಟ್ ಕ್ರಿಡೆ ಸಹಾಯವಾಗಲಿದೆ, ಜತೆಗೆ ಪ್ರೇರಣೆಯಾಗಿದೆ” ಎಂದು ಲಕ್ಷ್ಮೇಶ್ವರ ತಹಶೀಲ್ದಾರ್ ವಿ ವಾಸುದೇವ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಸ್ವತಃ ಲಕ್ಷ್ಮೇಶ್ವರ ತಾಲೂಕು ತಹಶಿಲ್ದಾರ್ ಅವರು ಕ್ರಿಕೆಟ್ ಆಟದಲ್ಲಿ ತಮ್ಮ ಕಂದಾಯ ಇಲಾಖೆಯ ಮುಖ್ಯ ನಾಯಕರಾಗಿ ಮೈದಾನದಲ್ಲಿ ಉತ್ತಮ ಆಟ ಪ್ರದರ್ಶಿಸುವವ ತಮ್ಮ ಸಿಬ್ಬಂದಿಗೆ ಮತ್ತು ಎದುರು ಆಟಗಾರರಿಗೂ ಚಪ್ಪಾಳೆ ತಟ್ಟುವುದರ ಮೂಲಕ ಹುರಿದುಂಬಿಸಿ ಉತ್ಸಹ ತುಂಬುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅನನ್ಯ: ಜ್ಯೋತಿ ಬೊಮ್ಮ
ತಾಲೂಕು ಪಂಚಾಯತ್ ಉಪ ನಿರ್ದೇಶಕರ ಧರ್ಮಣ್ಣ ಅವರ ವೀಕ್ಷಕರ ವಿವರಣೆ (ಕಾಮೆಂಟ್ರಿ)ಉತ್ತಮವಾಗಿತ್ತು ಮತ್ತು ಎಲ್ಲ ತಂಡದವರಿಗೂ ಉತ್ಸಾಹ ತುಂಬುವಂತಿತ್ತು. ಕ್ರಿಡೆ ವೀಕ್ಷಿಸುವ ವೀಕ್ಷಕರ ಮೆಚ್ಚುಗೆಯ ಮಾತುಗಳೂ ಕೇಳಿ ಬಂದವು.
ಲಕ್ಷ್ಮೇಶ್ವರ ಸಬ್ ಇನ್ಸ್‌ಪೆಕ್ಟರ್ ಈರಣ್ಣ ರಿತ್ತಿ, ತಾಲೂಕು ಪಂಚಾಯತ್ ಉಪ ನಿರ್ದೇಕ ಧರ್ಮಣ್ಣ, ತಾಲೂಕು ಗ್ರೇಡ್ ಟು ತಹಶೀಲ್ದಾರ್ ಮಂಜುನಾಥ ಅಮಾಸಿ, ಉಪ ತಹಶೀಲ್ದಾರ್ ಕಿಮ್ಮಾಯಿ, ತಾಲೂಕು ಕಂದಾಯ ಇಲಾಖೆ ರಾಜಸ್ವ ಅಧಿಕಾರಿ ನದಾಫ್ ಇದ್ದರು.
ವರದಿ : ಕೇಶವ್ ಕಟ್ಟಿಮನಿ, ಸಿಟಿಜ಼ನ್ ಜರ್ನಲಿಸ್ಟ್ ಲಕ್ಷ್ಮೇಶ್ವರ