ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡಿನವರು ತಮ್ಮ ಹೆಸರುಗಳನ್ನು ದಾಖಲಿಸಿರುವುದನ್ನು ರದ್ದುಪಡಿಸಬೇಕು. ವಕ್ಫ್ ಪರ ಇರುವ ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ರೈತ ಸಂಘದ ಗದಗ ಜಿಲ್ಲೆಯ ರೋಣ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಆಗ್ರಹಿಸಿದರು.
ಕರ್ನಾಟಕ ರೈತ ಸೇನೆಯು ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಇರುವುದನ್ನು ತೆಗೆಯಬೇಕೆಂದು ಗದಗ ಜಿಲ್ಲೆಯ ರೋಣ ಪಟ್ಟಣದ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಬೊರ್ಡನವರು ಕಾನೂನು ಬಾಹಿರವಾಗಿ ತಮ್ಮ ಹೆಸರುಗಳನ್ನು ರೈತರುಗಳ ಉತಾರಗಳಲ್ಲಿ ಈಗಾಗಲೇ ದಾಖಲಿಸಿರುತ್ತಾರೆ. ಸದರಿ ದಾಖಲಾದ ಹೆಸರುಗಳು ಕಾನೂನಾತ್ಮಕವಾಗಿ ದಾಖಲಾಗಿರುವುದಿಲ್ಲ” ಎಂದು ಹೇಳಿದರು.
ರೈತರ ಹಿತದೃಷ್ಟಿಯಿಂದ ವಕ್ಫ್ ಬೋರ್ಡಿನವರು ದಾಖಲಿಸಿರುವ ಹೆಸರನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ರೈತರಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗದಂತೆ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕುಮಟಾ | ರೈತರಿಗೆ ಪರಿಹಾರ ನೀಡದ ಅಧಿಕಾರಿ: ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶ
ಈ ಸಂದರ್ಭದಲ್ಲಿ ರೈತ ಮುಖಂಡರು ವೀರಬಸಪ್ಪ ಅಂದಾನಪ್ಪನವರ, ತುಳಸಪ್ಪ ವಾಸನದ, ಹಣಮಪ್ಪ ಹಣಮಕ್ಕನವರ, ಧರಿಗೆಪ್ಪ ಹಣಮಕ್ಕನವರ ಉಪಸ್ಥಿತರಿದ್ದರು.
