ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ, ನಾಡ ಸೇನಾನಿ ಟಿ ಎ ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಗದಗ ನಗರದ ಎಪಿಎಂಸಿ ಆವರಣದಿಂದ ಪಂಡಿತ್ ಪುಟ್ಟರಾಜ ಗವಾಯಿಗಳ ಮಠದವರೆಗೆ ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.
ಕರವೇ ಗದಗ ಜಿಲ್ಲಾಧ್ಯಕ್ಷ ಶರಣು ಎಸ್ ಗೋಡಿ ಮಾತನಾಡಿ, “ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆಗೆ ಒತ್ತಾಯಿಸಿ ನಡೆಸಿದ ಹೋರಾಟದ ಸಮಯದಲ್ಲಿ ಬಂಧಿಸಿರುವ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಹಾಗೂ ಕರವೇ ಮುಖಂಡರು, ಕಾರ್ಯಕರ್ತರನ್ನು ರಕ್ಷಣೆಯ ಬಿಡುಗಡೆ ಮಾಡಬೇಕು ಮತ್ತು ಕೇಸುಗಳನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ನಾಮಫಲಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆಗಾಗಿ ನಡೆಯುತ್ತಿರುವ ಅಭಿಯಾನವನ್ನು ರಾಜ್ಯಾದ್ಯಂತ ಹಾಗೂ ಜಿಲ್ಲೆಯಾದ್ಯಂತ ಮುಂದುವರಿಸಲಾಗುವುದು. ಕನ್ನಡ ಕಲಿಗಳು ಕನ್ನಡಕ್ಕಾಗಿ ಹೋರಾಟ ನಡೆಸಿ ಸೆರೆವಾಸದಲ್ಲಿ ಇರುವ ಈ ಸಮಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುವುದಕ್ಕಿಂತ ಕರಾಳ ದಿನವಾಗಿ ಆಚರಿಸುವುದೇ ಸೂಕ್ತವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ನಮ್ಮೂರಿನ ರಾಮ ನಮಗೆ ಆಶೀರ್ವಾದ ಮಾಡೋದಿಲ್ವ?: ಸಚಿವ ರಾಜಣ್ಣ
ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲಿಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಜೂಲಗುಡ್ಡ, ಮಹಾದೇವಿ ದೊಡ್ಡಗೌಡ್ರ, ರತ್ನಮ್ಮ ಯಲಬುರ್ಗಿ, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಲೋಕೇಶ ಸುತಾರ, ಮುಂಡರಗಿ ತಾಲೂಕು ಅಧ್ಯಕ್ಷ ರಾಮನಗೌಡ ಹಳೆಮನಿ, ಪ್ರಕಾಶ ಸಂದಿಗೋಡ, ಈರಣ್ಣ ಹುರಕಡ್ಲಿ, ಅಲ್ಲಾಬಕ್ಷಿ ನದಾಫ್, ಆನಂದ ಹೊಸಮನಿ ಯಲ್ಲಪ್ಪ ಬೋವಿ, ಮಾರುತಿ ಈಳಗೇರ ಆಷಪಾಕ್ ಬಾಗೋಡಿ, ಪ್ರವೀಣ್ ಗಾಣಿಗೇರ ಮೈನು ಮನಿಯಾರ, ಅಪ್ಪು ಉಮಚಗಿ ಗಣೇಶ ಕಳಸೂರ, ವೀರೇಶ ಮಡಿವಾಳರ, ನಾಗರಾಜ ಬಂಡಿವಡ್ಡರ, ಮಂಜುನಾಥ ಹುಲ್ಲೂರು, ರಾಹುಲ್ ಹೂಗಾರ, ಚಂದ್ರು ಮಣ್ಣೂರ, ಮಲ್ಲಪ್ಪ ಗೊಜನೂರು, ರವಿ ಕೋರಿ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.