ಆಸ್ತಿ ವಿಚಾರಕ್ಕೆ ಜಗಳ ಉಂಟಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ. ಒಡಹುಟ್ಟಿದ ಅಣ್ಣನೇ ತಂಗಿಯನ್ನು ಕೊಲೆ ಮಾಡಿದ್ದಾನೆ.
ಅಣ್ಣ ಮಾರಾಸ್ತರದಿಂದ ತಂಗಿಯನ್ನು ಇರಿದಿದ್ದು, ಅಲ್ಲದೆ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಕಾಳಮ್ಮ ರಂಗಪ್ಪ ಕ್ಯಾದಿಗೆಹಳ್ಳಿ(34) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಎರಡು ವರ್ಷದ ಮಗುವಿಗೆ ಲಿವರ್ ಸಮಸ್ಯೆ: ದಾನಿಗಳ ನೆರವಿಗಾಗಿ ಕಾಯುತ್ತಿರುವ ಪೋಷಕರು
ಆಸ್ತಿ ವಿವಾದದ ವಿಷಯಕ್ಕೆ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದ್ದು, ಕೊಲೆಯ ನಂತರ ಆರೋಪಿ ಈಶ್ವರಪ್ಪ ರಂಗಪ್ಪ ಕ್ಯಾದಿಗೆಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುದ್ದಿ ತಿಳಿದ ಕೂಡಲೇ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
