“ನರಗುಂದ ಪಟ್ಟಣದಲ್ಲಿ ದೇವರ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೌಡ್ಯತೆ ಮತ್ತು ಕಂದಾಚಾರಗಳನ್ನು ಬಿತ್ತುತ್ತಿದ್ದಾರೆ. ಇದರಿಂದ ಜನರು ಭಯ ಭೀತಿ ಒಳಗೊಳ್ಳುತ್ತಿದ್ದು, ಕೂಡಲೇ ದೇವರ ಹೆಸರಿನಲ್ಲಿ ಮೌಢ್ಯ, ಕಂದಾಚಾರ ತಡೆಗಟ್ಟುವಂತೆ ಡಿಎಸ್ಎಸ್ ಒತ್ತಾಯಿಸಿದರಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದೇವರ (ಭಾಗಮ್ಮ ದೇವಿ) ಹೆಸರಿನಲ್ಲಿ ಮಾಟ ಮಂತ್ರ ನಿಧಿ ಶೋಧನೆ ಪ್ರಾಣಿ ಬಲಿ, ವಾಮಾಚಾರ, ಭಯಾನಕವಾದ ಕಾಯಿಲೆಗಳಿಗೆ ಔಷಧಿ ನೀಡುತ್ತೇವೆ ಎಂದು ಹೇಳಿ ಜನರಲ್ಲಿ ಮೂಡನಂಬಿಕೆ ಬಿತ್ತುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪೊಲೀಸ್ ಠಾಣೆ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ, ಡಿ ಎಸ್ ಎಸ್ ತಾಲ್ಲೂಕು ಅಧ್ಯಕ್ಷ ದತ್ತಾತ್ರೇಯ ಜೋಗನ್ನವರ ಮಾತನಾಡಿ, “ನರಗುಂದ ಪಟ್ಟಣದ ಕೆಲವು ನಗರಗಳಲ್ಲಿ ದೇವರ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೌಡ್ಯತೆ ಮತ್ತು ಕಂದಾಚಾರಗಳನ್ನು ಬಿತ್ತುತ್ತಿದ್ದಾರೆ. ಅಲ್ಲದೆ ಹುಣ್ಣಿಮೆ ಅಮಾವಾಸ್ಯೆ ಗುರುವಾರ ಭಾನುವಾರದಂತ ವಾರಗಳಲ್ಲಿ ಭಯಾನಕ ಕಾಯಿಲೆಗಳನ್ನು ಒಳಕೊಂಡಂತ ಜನರು, ಮಾನಸಿಕ ಅಸ್ವಸ್ಥರು ಸಂಚರಿಸುವುದರಿಂದ ಓಣಿಯಲ್ಲಿನ ಜನರು ಭಯ ಬೀತಗೊಂಡು ಜೀವನ ನಡೆಸುತ್ತಿದ್ದಾರೆ. ಓಣಿಯಲ್ಲಿ ಸಣ್ಣ ಪುಟ್ಟ ಮಕ್ಕಳು ಮಹಿಳೆಯರು ವಯೋವೃದ್ಧರು ಇದ್ದಾರೆ. ವಾಮಾಚಾರ ಮಾಟ ಮಂತ್ರ ಮಾಡತಕ್ಕಂಥ ವ್ಯಕ್ತಿಗಳಿಗೆ ಪ್ರಶ್ನೆ ಮಾಡಿದರೆ, ಎಲ್ಲಿ ನಮಗೆ ಮಾಟ ಮಂತ್ರ ಮತ್ತು ನಾವು ಸಾಕಿದ ಪ್ರಾಣಿ ಪಕ್ಷಿಗಳಿಗೆ ಎಲ್ಲಿ ಸಾವು ನೋವು ತರುತ್ತಾರೆಂಬ ಭಯದ ವಾತಾವರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಿಲ್ಲಾದ್ಯಂತ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ್ ಅದಾಲತ್
“ಹಾಗಾಗಿ ಇಂತಹವುಗಳನ್ನು ತಡೆಗಟ್ಟಿ ಸಾರ್ವಜನಿಕರಿಗೆ ನಿರ್ಭೀತಿಯಿಂದ ಜೀವನವನ್ನು ನಡೆಸಲು ಅನುವು ಮಾಡಿಕೊಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣು ಚಲವಾದಿ, ಮುತ್ತು ಸುರಕೋಡ, ವಿಜಯ ಬಡಿಗೇರ, ಸುಭಾಷ್ ಜೋಗನವರ, ಮಹಾಂತೇಶ ಪೂಜಾರ, ವಿಠ್ಠಲ್ ಸೋಮಣ್ಣವರ, ನವೀನ್ ಜೋಗನ್ನವರ, ಗುರುನಾಥ ಕೆಂಗಾರಕರ, ಇನ್ನೂ ಅನೇಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.