ಗದಗ-ಬೆಟಗೇರಿ ನಗರಸಭೆಯ ವಾರ್ಡ್ ಸಂಖ್ಯೆ 28ರ ಬಿಜೆಪಿ ಅಭ್ಯರ್ಥಿ ಶಿದ್ದಿಂಗಪ್ಪ (ಅನಿಲ) ಮಲ್ಲಪ್ಪ ಅಬ್ಬಿಗೇರಿಯವರ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಒತ್ತಾಯಿಸಿದೆ. ಗದಗ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿ ಮಾತನಾಡಿದ ದಸಂಸ ಜಿಲ್ಲಾದ್ಯಕ್ಷ ಬಾಲರಾಜ್ ಅರಬರ ಮಾತನಾಡಿ, “ಗದಗ-ಬೆಟಗೇರಿ ನಗರಸಭೆಯ ವಾರ್ಡ್ ಸಂಖ್ಯೆ 280ರ ಬಿಜೆಪಿ ಅಭ್ಯರ್ಥಿ ತಿದ್ದಿಂಗಪ್ಪ (ಅನಿಲ) ಮಲ್ಲಪ್ಪ ಅಬ್ಬಿಗೇರಿಯವರು ಕಳೆದ 2021ರ ನಗರಸಭೆಯ ಚುನಾವಣೆಯಲ್ಲಿ ಜಿಲ್ಲಾ ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮೋಸದಿಂದ ಜಯಗಳಿಸಿದ್ದಾರೆ. ಈ ಅಭ್ಯರ್ಥಿಯ ಜಾತಿ ಒಂದು ಪತ್ರದಲ್ಲಿ ಹಿಂದೂ ಲಿಂಗವಂಶ, ಒಂದರಲ್ಲಿ ಹಿಂದೂ ಅಂತಾ ಇನ್ನೊಂದರಲ್ಲಿ ಹಿಂದೂ ಗಾಣಿಗ ಎಂದು ಸಲ್ಲಿಸಿರುವುದು ಕಂಡುಬಂದಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ವಸತಿನಿಲಯಕ್ಕೆ ಮೂಲಸೌಕರ್ಯ ಒದಗಿಸುವಂತೆ ಎಐಡಿಎಸ್‌ಒ ಆಗ್ರಹ
“ಈಗಾಗಲೇ ಈ ಕುರಿತು ಅವರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇಂತಹ ಸಮಸ್ಯೆ ಇದ್ದರೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಮೋಸಗೊಳಿಸಿದ್ದಾರೆ. ಅಲ್ಲದೇ ಕೊಟ್ಟಿ ಜಾತಿ ಪ್ರಮಾಣಪತ್ರ ನೀಡಿ, ಚುನಾವಣೆಯಲ್ಲಿ ಮೋಸದಿಂದ ಗೆದ್ದಿರುವ ಇವರ ಸದಸ್ಯತ್ವವನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮುಖಂಡರು ನಾಗರಾಜ್ ಗೋಕಾವಿ, ಕೆಂಚಪ್ಪ ಮ್ಯಾಗೇರಿ, ಮಾರುತಿ ಅಂಗಡಿ, ಬಸವರಾಜ ಈರಣ್ಣನವರ ಸೇರಿದಂತೆ ಇತರರು ಇದ್ದರು.