ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಬಸವರಾಜ ಮುಳ್ಳಾಳ ಮತ್ತು ನಾಗಮ್ಮ ಹಾಲಿನವರ ಅವರ ಮೇಲೆ ನಡೆದ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ರಮೇಶ ಕೋಳೂರು ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪ.ಜಾ/ಪ.ಪಂ ಉಪವಿಭಾಗ ಜಾಗೃತಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಬಸವರಾಜ ಮುಳ್ಳಾಳ ಮತ್ತು ದಲಿತ ಬಹುಜನ ಚಳವಳಿಯ ಅಧ್ಯಕ್ಷೆ ನಾಗಮ್ಮ ಹಾಲಿನವರ ಅವರ ಮೇಲೆ ನಡೆದ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸ್ ಇಲಾಖೆ ಇಂತಹ ನಿರ್ಲಕ್ಷ್ಯದಿಂದ ಪ.ಜಾ/ಪ.ಪಂಗಡಗಳ ಕುಂದು ಕೊರತೆಯ ಸಭೆಯನ್ನು ಮಾಡದಿರುವುದೇ ಕಾರಣ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ನೀತಿ ಸಂಹಿತೆ ಉಲ್ಲಂಘನೆ ಆರೋಪ; ಜಯಪ್ರಕಾಶ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
“ಪ.ಜಾ/ಪ.ಪಂಗಡದ ಜನಾಂಗದ ಮೇಲೆ ದೌರ್ಜನ್ಯಗಳು ಹೇಚ್ಚಾಗುತ್ತಿರುವುದು ಹಾಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮೂಲಕವೂ ಎಸ್‌ಸಿ/ಎಸ್‌ಟಿ ಕುಂದು ಕೊರತೆಯ ಸಭೆಯನ್ನು ಮಾಡದಿರುವ ಕಾರಣ ಇಂತಹ ನಿರ್ಲಕ್ಷದಿಂದ ಸರ್ಕಾರದ ಜಾಗಗಳು ಕಾನಾಉನು ಬಾಹಿರವಾಗಿ ಮೇಲ್ವರ್ಗದವರ ಹೆಸರಿಗಾಗುತ್ತಿರುವುದು ದುರಂತ. ಜಾತಿ ನಿಂದನೆ ಮಾಡಿದವರ ಮೇಲೆ ಹಾಗೂ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ರಮೇಶ್ ಕೋಳೂರ ಒತ್ತಾಯಿಸಿದರು.