“ಆಂಗ್ಲ ವ್ಯಾಮೋಹಕ್ಕೆ ಚಿಕ್ಕ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಬಳಸುವ ದುಸ್ಥಿತಿಯಲ್ಲಿದ್ದೇವೆ. ಇಂಗ್ಲಿಷ್ ಲಿಪಿಗೂ ಭಾಷೆಗೂ ವ್ಯತ್ಯಾಸವಿದೆ. ಬರೆದಂತೆ ಇಂಗ್ಲಿಷ್ ಉಚ್ಚರಿಸಲು ಬರುವುದಿಲ್ಲ. ಕನ್ನಡವನ್ನು ನಾವು ಹೇಗೆ ಬರೆಯುತ್ತೇವೆಯೋ ಹಾಗೆಯೇ ಉಚ್ಚರಿಸುತ್ತೇವೆ. ಇಂಗ್ಲಿಷ್ ಪರಿಪೂರ್ಣ ಭಾಷೆ ಅಲ್ಲ, ಕನ್ನಡ ಪರಿಪೂರ್ಣ ಭಾಷೆಯಾಗಿದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು ಮಹೇಶ ಜೋಶಿ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕು ಕುರ್ತಕೋಟಿ ಗ್ರಾಮದಲ್ಲಿ ಗದಗ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.
“ಕನ್ನಡ ಭಾಷ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಕನ್ನಡದ ಮೊದಲ ರಾಜಮನೆತನ ಕದಂಬರು ಕನ್ನಡ ಭಾಷೆಯನ್ನು ಬೆಳೆಸಿದವರು, ಇಂದಿಗೂ ಕನ್ನಡಿಗರು ಬೆಳೆಸುತ್ತಾ ಬಂದಿದ್ದಾರೆ. ವರದಿಯ ಪ್ರಕಾರ ಜಗತ್ತಿನಲ್ಲಿ ಪರಿಪೂರ್ಣವಾದಂತಹ ಮೂರು ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆಯು ಒಂದು” ಎಂದು ಹೇಳುದರು.
“ನಮ್ಮ ಕನ್ನಡ ಭಾಷೆಗೆ ತನ್ನದೇ ಆದ ಸ್ವಂತ ಲಿಪಿ, ಸಂಖ್ಯೆ ಇದೆ. ಹಾಗಾಗಿ ವಿನೋದಾ ಭಾವೆ ಅವರು ಕನ್ನಡ ಭಾಷೆಯನ್ನು’ಲಿಪಿಗಳ ರಾಣಿ ಎಂದು ಕರೆದರು” ಎಂದು ನೆನಪಿಸಿಕೊಂಡರು.
“ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳು ಮುಚ್ಚಬಾರದು. ಕನ್ನಡ ಅನ್ನದ ಭಾಷೆಯಾಗಬೇಕು. ಉದ್ಯೋಗದ ಭಾಷೆಯಾಗಬೇಬೇಕು. ಕನ್ನಡ ಸಾಹಿತ್ಯ ಪರಿಷತ್ತಿಗೆ ಕನಸು ಹೊತ್ತುಬಂದೆ. ಆದರೆ ನಿರಾಶೆಯಾಯಿತು. ಪೋಷಕರ ನಿರ್ಣಯವೆ ಅಂತಿಮ ಎಂದು ನ್ಯಾಯಾಲಯ ಹೇಳುದಾಗ ನಿರಾಶೆಯಾಯಿತು” ಎಂದು ಮಹೇಶ ಜೋಶಿ ಅವರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಎನ್ಎಸ್ಎಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ: ಡಾ. ಲಿಂಗರಾಜ ಅಂಗಡಿ
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಎಚ್ ಕೆ ಪಾಟೀಲ್, ಸಮ್ಮೇಳನಾಧ್ಯಕ್ಷರು ಜೆ ಕೆ ಜಮಾದಾರ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷರು ವಿವೇಕಾನಂದಗೌಡ ಪಾಟೀಲ, ದಸಾಪ ರಾಜ್ಯಾಧ್ಯಕ್ಷರು ಅರ್ಜುನ ಗೋಳಸಂಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.
