ಸಂಘಟನೆ ಜೊತೆಗೆ ಸಾಯುವವರೆಗೂ ಕೈ ಜೋಡಿಸುವೆ. ಸಂಘಟನೆಗೆ ಎಲ್ಲರ ಸಹಕಾರ ಮುಖ್ಯ ಸಂಘಟನೆಯಲ್ಲಿ ಶಕ್ತಿ ತುಂಬುವುದರ ಜತೆಗೆ ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಸಮಾಜದ ಸೇವೆಗೆ ನಾನು ಸದಾ ಬದ್ಧ. ಸಮಾಜದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿರ್ವಹಿಸಬೇಕು ಎಂದು ನಿವೃತ್ತ ಶಿಕ್ಷಕ ಎಚ್ ಎಸ್ ಜೋಗಣ್ಣವರ ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಸಮಾಜದಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50ರ ಸಂಭ್ರಮಚಾರಣೆ ಕುರಿತು ಪೂರ್ವಭಾವಿ ಸಭೆ ಹಾಗೂ ನಿವೃತ್ತ ಶಿಕ್ಷಕ ಎಚ್ ಎಸ್ ಜೋಗಣ್ಣವರ ಅವರಿಗೆ ಮಾಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜದ ಮುಖಂಡ ವೀರಪ್ಪ ತೆಗ್ಗಿನಮನಿ ಮಾತನಾಡಿ, “ಸಮಾಜದಲ್ಲಿ, ಸಂಘಟನೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಕೀರ್ತಿ ಜೋಗಣ್ಣವರ ಅವರಿಗೆ ಸಲ್ಲುತ್ತದೆ. ಹೋರಾಟದ ಹಾದಿಯನ್ನು ಯುವಕರಿಗೆ ತಿಳಿಸಿದ್ದಾರೆ. ಸಂಘಟನೆ ಬೆಳವಣಿಗೆಯಲ್ಲಿ ಇವರ ಪಾತ್ರ ಮಹತ್ವ ಸರ್ಕಾರ ರಚನೆ ಮಾಡುವಂತ ಶಕ್ತಿ ಸಂಘಟನೆಗೆ ಇದೆ. ಜಾತಿಗೊಂದು ಸಂಘಟಗಳು ಆಗಿವೆ. ರಾಜಕೀಯ ಪಕ್ಷಕ್ಕೊಂದು ಸಂಘಟನೆಗಳು ಇವೆ” ಎಂದರು.
ಸಮಾಜ ಮುಖಂಡ ಮೌನೇಶ ಹಾದಿಮನಿ ಮಾತನಾಡಿ, “ಜೋಗಣ್ಣವರ ಅವರು ಸಮಾಜದ ಜತೆಗೆ ಪ್ರೀತಿ ಒಡನಾಟ ಬಾಂಧವ್ಯ, ಹಾಗೂ ಇತರೆ ಸಮಾಜದ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸಂಘಟನೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜವನ್ನು ಒಂದುಗೂಡಿಸಿ ಅವರ ಹೋರಾಟ ಸಮಾಜಕ್ಕೆ ಒಂದು ಮಾದರಿಯಾಗಿದೆ. ಆನೇಕ ಹೋರಾಟದ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಬಯಸಿದ್ದಾರೆ” ಎಂದು ಹೇಳಿದರು.
ಮಾರುತಿ ಹಾದಿಮನಿ ಮಾತನಾಡಿ, “ಇಂದಿನ ಆಧುನಿಕ ಯುಗದಲ್ಲಿ ಸಂಘಟನೆಗಳು ಇಬ್ಬಾಗವಾಗಿವೆ. ಸಂಘಟನೆ ಒಂದು ಕಡೆ, ಸಮಾಜ ಒಂದು ಕಡೆ ಆಗಿದೆ. ಸಂಘಟನೆ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಿದ ಕೀರ್ತಿ ಜೋಗಣ್ಣವರ ಅವರಿಗೆ ಸಲ್ಲುತ್ತದೆ. ಅವರ ಶಿಕ್ಷಕ ವೃತ್ತಿ ಜೊತೆಗೆ ಸಂಘಟನೆಯಲ್ಲಿ ಭಾಗಿಯಾಗುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ
ಇದೇ ಸಂದರ್ಭದಲ್ಲಿ ಸೋಮು ನಾಗರಾಜ, ಮಂಜುನಾಥ ಬುರಡಿ, ರಮೇಶ ಕಡೆಮನಿ, ಪ್ರಕಾಶ ಹೊಸಳ್ಳಿ, ಸುರೇಶ ನಡುವಿನಮನಿ, ಪರಶುರಾಮ ಹೊಸಮನಿ, ಮುತ್ತಪ್ಪ ಪೂಜಾರ, ಹನುಮಂತ ದ್ವಾಸಲ, ಮುತ್ತಪ್ಪ ಜೋಗಣ್ಣವರ, ಲಕ್ಷಣ ಹೊಸಮನಿ, ಸಂಗಪ್ಪ ಹೊಸಮನಿ, ಬಾಳಪ್ಪ ಭಜೇಂತ್ರಿ, ಮಹಾದೇವಪ್ಪ ಮುಂದಿನಮನಿ, ಪುಂಡಲೀಕ ಮಾದರ, ವೀರಪ್ಪ ತೆಗ್ಗಿನಮನಿ, ಎಸ್ ಎಸ್ ಹಲಗಿ, ಹುಚ್ಚೀರಪ್ಪ ಬಾವಿಮನಿ, ಪರಸಪ ಪೂಜಾರ, ಅಭಿಷೇಕ ಕೊಪ್ಪದ್, ರಮೇಶ, ನಂದಿ ಸುರೇಶ, ಹಲಗಿವೀರಪ್ಪ ಬಾವಿಮನಿ ಸೇರಿದಂತೆ ಇತರರು ಇದ್ದರು.
