ಗದಗ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ ವಾಡಿಕೆ ಮಳೆ 96 ಮಿ.ಮೀ ಇದ್ದು, 122.1 ಮಿ. ಮೀ. ಮಳೆಯಾಗಿದೆ. ವಾಡಿಕೆಗಿಂತ 26 ಪ್ರತಿಶತ ಜಾಸ್ತಿ ಮಳೆಯಾಗಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೆಣ್ಣೇಹಳ್ಳ ಪ್ರವಾಹಕ್ಕೀಡಾಯಿತು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಬೆಣ್ಣೇಹಳ್ಳ ಪ್ರವಾಹದಿಂದ ಒಟ್ಟು 28,173 ಹೆಕ್ಟೇರ್ ಪ್ರದೇಶ ಬೆಳೆಹಾನಿಗೊಳಗಾಗಿದೆ. ಆ ಪೈಕಿ 17,652 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮತ್ತು 10,521 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ ಎಂದು ಮಾಹಿತಿ ತಿಳಿಸಿದರು.
ಇದನ್ನೂ ಓದಿದ್ದೀಊರಾ?ಭಾರೀ ಮಳೆ | ರಾಜ್ಯಾದ್ಯಂತ 56,993 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ; ಬೆಳೆಪರಿಹಾರದ ಭರವಸೆ
ಈ ಬಾರಿ ಮಳೆಯಿಂದಾಗಿ 8 ಸಣ್ಣ ಜಾನುವಾರುಗಳು ಮರಣಹೊಂದಿವೆ. 99 ಮನೆಗಳು ಅಪಾರ ಹಾನಿಗೊಳಗಾಗಿವೆ. ಮರಣ ಹೊಂದಿದ ಜಾನುವಾರು ಮತ್ತು ಹಾನಿಗೊಳಗಾದ ಮನೆಗಳಿಗೆ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಳನ್ವಯದಂತೆ ಪರಿಹಾರ ಪಾವತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
