ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ್ ಎಲಿವಾಳ್ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ಶೋಷಿತ ಸಮುದಾಯಗಳ ಜನರ ಕಾಳಜಿ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಹೇಳಿದರು.
ಜಿಲ್ಲೆಯ ಮುಂಡರಗಿ ಪಟ್ಟಣದ ಸಮಾಜ ಕಲ್ಯಾಣ ಕಚೇರಿಯಲ್ಲಿ ಸಹಾಯಕ ನಿರ್ದೇಶಕ ಉದಯಕುಮಾರ್ ಎಲಿವಾಳ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ್ ಎಲಿವಾಳ್ ಅವರು ತಮ್ಮ ಸೇವೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮೆಚ್ಚುವಂತಹವುಗಳಾಗಿವೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ರೀತಿ, ಅವರ ಅಧಿಕಾರದ ಚಾಣಕ್ಯತೆ, ಅವರ ಅಧಿಕಾರದಲ್ಲಿ ನಡೆದಂತಹ ಕಾಮಗಾರಿಗಳ ಅಭಿವೃದ್ಧಿಯ ಕಾರ್ಯಗಳು ಶ್ಲಾಘನೀಯವಾಗಿವೆ: ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜೈಲಿನಿಂದ ಪರಾರಿಯಾಗಿದ್ದ ಆರೋಪಿ; 24 ವರ್ಷಗಳ ಬಳಿಕ ಬಂಧನ
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂತೋಷ್ ಹಿರೇಮನಿ, ದಲಿತ ಯುವ ಮುಖಂಡ ನಿಂಗರಾಜ್ ಹಾಲಿನವರ್, ಬಿಜೆಪಿ ಯುವಮುಖಂಡ ಪ್ರವೀಣ್ ವಡ್ಡಟ್ಟಿ, ದಲಿತ ಯುವಮುಖಂಡ ನಿಂಗರಾಜ್ ಮೇಗಳಮನಿ, ರೈಲ್ವೆ ಹೋರಾಟ ವೇದಿಕೆ ಅಧ್ಯಕ್ಷ ಬಸವರಾಜ್ ದೇಸಾಯಿ, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಸೋಮಣ್ಣ ಹೈತಾಪುರ್, ಡಿಎಸ್‌ಎಸ್ ಮುಖಂಡ ದುರಗಪ್ಪ ಹರಿಜನ್, ರಾಮನಹಳ್ಳಿ ದಲಿತ ಯುವಮುಖಂಡ ಕೋಟೇಶ್ ಪೂಜಾರ, ಹಾರೂಗೇರಿಯ ದಲಿತ ಯುವಮುಖಂಡ ನಾಗರಾಜ್ ಎಚ್, ಹಾಲೇಶ್ ಎಚ್ ಸೇರಿದಂತೆ ಅನೇಕರು ಇದ್ದರು.