ಬೆಂಗಳೂರಿನಲ್ಲಿ ನಡೆಯಲಿರುವ ದುಡಿವ ಜನರ ಮಹಾ ಧರಣಿಯಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದ್ದು, ನ.26ರಿಂದ 28ರವರೆಗೆ ಬೆಂಗಳೂರಿನಲ್ಲಿ ರೈತ ಸಂಘ ಮಹಾಧರಣಿ ಹಮ್ಮಿಕೊಂಡಿದೆ.
ಗದಗ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಸಂಕನಗೌಡ್ರ, “ಗದಗ ಜಿಲ್ಲೆಯ ಪ್ರತಿಯೊಬ್ಬ ರೈತ ಬಾಂಧವರು ಮಹಾ ಧರಣಿಯಲ್ಲಿ ಪಾಲ್ಗೊಂಡು, ಈ ಮಹಾ ಧರಣಿಯನ್ನು ಯಶಸ್ವಿಗೊಳ್ಳಿಸಬೇಕು” ಎಂದು ಕರೆ ನೀಡಿದ್ದಾರೆ.
ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಸುಂಕದ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಧರಣಿಯಲ್ಲಿ ಎಲ್ಲ ದಲಿತಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಚಳವಳಿಗಾರರು ಭಾಗವಹಿಸಲಿದ್ದು, ಗದಗ ಜಿಲ್ಲೆಯಿಂದ ರೈತರು, ರೈತ ಮಹಿಳೆಯರು ಸೇರಿ ಒಂದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದೇವೆ ಎಂದರು.
ಐತಿಹಾಸಿಕ ದೆಹಲಿ ರೈತ ಹೋರಾಟದಲ್ಲಿ ಹುತಾತ್ಮ ರೈತ ಕುಟುಂಬಗಳಿಗೆ ಪರಿಹಾರ, ಪುನರ್ವಸತಿ ಕಲ್ಪಿಸಬೇಕು. ಸಿಂಗು ಗಡಿಯಲ್ಲಿ ರೈತ ಹುತಾತ್ಮ ಸ್ಮಾರಕ ನಿರ್ಮಿಸಬೇಕು. ರೈತರ ಮೇಲೆ ಹಾಕಿದ ಎಲ್ಲಾ ಪೊಲೀಸ್ ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದಿದ್ದು, ರಾಜ್ಯದಲ್ಲಿಯೂ ಹಿಂದಕ್ಕೆ ಪಡೆಯಬೇಕೆಂಬ ಭರವಸೆಯನ್ನುಈಗೀನ ಸರಕಾರದವರು ನೀಡಿದೆ. ಆದರೆ, ಇದುವರೆಗೂ ಆಗಿಲ್ಲ.
ರೈತರು ಬೆಳೆದ ಬೆಳಗೆ ಕನಿಷ್ಠ ಬೆಂಬಲ ಕಾಯ್ದೆ ಜಾರಿಯಾಗಬೇಕು. ಮಹದಾಯಿ ನೀರಿಗೆ ಆಣೆಕಟ್ಟು ಕಟ್ಟಿ, ನಮ್ಮ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಯಿಸಲು, ಬೆಂಗಳೂರಿನಲ್ಲಿ ನಡೆಯುವ ಸಂಯುಕ್ತ ಕರ್ನಾಟಕ ಹೋಟದ ಮಹಾ ಧರಣಿಯಲ್ಲಿ ಎಲ್ಲ ರೈತ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪ್ರಗತಿಪರ ರೈತ ಮುಖಂಡ ಮೇಘರಾಜ ಭಾವಿ ರೈತರಿಗೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಂಗಣ್ಣ ದಂಡಿನ, ಎಸ್.ಎನ್. ಪರಡ್ಡಿ, ವಾಯ್.ಎಮ್. ಬಿಚ್ಚುಮನಿ, ಶರಣಪ್ಪ ಹುಲ್ಲೂರು, ಮಲ್ಲಿಕಾರ್ಜುನ ಶೀಲವಂತರ, ಈರಪ್ಪ ದೊಡ್ಡನ್ನವರ, ರುದ್ರಯ್ಯ ಸಾಲಿಮಠ, ಬಸವರಾಜ ಜಕ್ಕಲಿ ಹಾಗೂ ರೈ ಮುಖಂಡರು ಉಪಸ್ಥಿತರಿದ್ದರು.