ಗದಗ | ಗಜೇಂದ್ರಗಡದಲ್ಲಿ ಸೌಹಾರ್ದ ಮಾನವ ಸರಪಳಿ

Date:

Advertisements

ಗಾಂಧಿಜೀಯವರ ಹುತಾತ್ಮ ದಿನದ ಸ್ಮರಣಾರ್ಥ ಸೌಹಾರ್ದ ಕರ್ನಾಟಕ ವೇದಿಕೆ ರಾಜ್ಯಾದ್ಯಂತ ಸೌಹಾರ್ದ ಮಾನವ ಸರಪಳಿ ಅಭಿಯಾನ ನಡೆಸಿದೆ. ಗಜೇಂದ್ರಗಡಲ್ಲಿಯೂ ವೇದಿಕೆ ಕಾರ್ಯಕರ್ತರು ಕೆ.ಕೆ ಸರ್ಕಲ್‌ನಲ್ಲಿ ಮಾನವ ಸರಪಳಿ ರಚಿಸಿ, ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ ಮಾಹಾಂತೇಶ ಸ್ವಾಮೀಜಿ, “ಕರ್ನಾಟಕ ಬಸವ ತತ್ವದ ನಾಡು. ಇಲ್ಲಿ ಸೌಹಾರ್ದತೆ ಎಂಬುದು ಜನರ ಅಂತರಕರಣದಲ್ಲಿ ಹಾಸು ಹೋಕ್ಕಿದೆ. ಅದಕ್ಕೆ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು. ಇಂದು ಜಾತಿ, ಧರ್ಮ, ದೇವರ ಹೆಸರಲ್ಲಿ ಮತೀಯವಾದ ಹಬ್ಬಿಸುತ್ತಿರುವುದು ಖೇದಕರ. ಗಾಂಧಿಜೀಯವರು ದೇಶದ ಸೌಹಾರ್ದತೆ ಪರಂಪರೆಯ ಸಂಕೇತವಾಗಿದ್ದರು. ಅವರನ್ನು ಇಂದು ನೆನೆಯಬೇಕು. ಅವರ ಆದರ್ಶ ಪಾಲಿಸಬೇಕು. ಆದರೆ, ಇಂದು ಮತೀಯವಾದಿಗಳು ಗಾಂಧಿಜೀಯವರನ್ನು ಅವಮಾನಿಸುತ್ತವೆ. ಯಾವುದೋ ರಾಜಕೀಯ ವ್ಯಕ್ತಿಗಳನ್ನು ವಿಜೃಂಭಿಸುತ್ತವೆ. ಇದನ್ನು ನಾವು ಅರ್ಥ ಮಾಡಿಕೊಂಡು ಎಲ್ಲಾ ಜಾತಿ ಬೇಧ ಧರ್ಮ ಬೇಧ ಇಲ್ಲದೇ ಸೌಹಾರ್ದತೆಯಿಂದ ಬಾಳಬೇಕು” ಎಂದರು.

ಪಾಥರ್ ಜೋಷಪ್, “ನಾವು ಭಾರತೀಯರು ಸೌಹಾರ್ದತೆಯಿಂದ ಬಾಳಿ ಬದುಕಿದವರು. ಗಾಂಧಿಜೀಯವರು ಸ್ವಾತಂತ್ರ್ಯ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಆಶಯದ ಭಾರತದಲ್ಲಿ ಬುದುಕುತ್ತಿರುವ ನಾವು ಅವರ ಅಹಿಂಸೆಯ ತತ್ವವನ್ನು ಅಳವಡಿಸಿಕೊಂಡು ಸಾಗಬೇಕು. ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು” ಎಂದರು.

Advertisements

ಖಾಜಾ ನಿಜಾಮ್ ವುದ್ದಿನ್ ಟೇಕೆದ್ ಭಾವ ಮಾತನಾಡಿ, ” ಇಂದು ದೇಶ ಮತ್ತು ರಾಜ್ಯದಲ್ಲಿ ಜಾತಿ, ಮತ, ಧರ್ಮಗಳ ನಡುವೆ ಕಲುಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಕಾಲದಲ್ಲಿ ಸೌಹಾರ್ದತೆ ಬಹು ಮುಖ್ಯವಾಗಿದೆ. ಗಜೇಂದ್ರಗಡದಲ್ಲಿ 18 ಬಾವಿಗಳು, 18 ಗುಡಿಗಳು, 18 ಮಸೀದಿಗಳನ್ನು ನಮ್ಮ ಹಿರಿಯರು ಕಟ್ಟಿ ಬಿಟ್ಟು ಹೋಗಿದ್ದಾರೆ. ಅದು ಸೌಹಾರ್ದತೆ ಪರಂಪರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದರ ಜೊತೆಗೆ ಗದುಗಿನ ಪುಟ್ಟರಾಜ ಗವಾಯಿಗಳು ಕಣ್ಣಿನಿಂದ ಅಂಧರಾಗಿದ್ದರು, ಆದರೆ, ಹೃದಯದಿಂದ ಅವರು ಬೆಳಕಾಗಿದ್ದರು. ಎಲ್ಲಾ ಜಾತಿ, ಮತ, ಧರ್ಮದವರಿಗೂ ಅವರು ಸಂಗೀತ ಕಲೆಯನ್ನು ಕಲಿಸಿದರು, ಬೆಳೆಸಿದರು ಅವರಂತೆ ನಾವು ಸೌಹಾರ್ದತೆಯ ಬದುಕು ನಮ್ಮ ಮುಂದಿನ ತಲೆಮಾರಿಗೆ ಬಿಟ್ಟು ಹೋಗುವುದು ಅಗತ್ಯ” ಎಂದರು.

ಸೌಹಾರ್ದತೆಯ ಸಂದೇಶವನ್ನು ಬಿ ಎ ಕೆಂಚರೆಡ್ಡಿ ಅವರು ಓದಿದರು. ಸಂದೇಶ ಘೋರ್ಪಡೆ, ಮಾಜಿ ಚೇರ್ಮನ್ ಎ ಡಿ ಕೋಲಕಾರ್ ಅವರು ಮಾತನಾಡಿದರು. ವಕೀಲರಾದ ಎಂ ಎಸ್ ಹಡಪದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್ ಎಫ್ ಐ ನ ಮುಖಂಡರಾದ ಗಣೇಶ ರಾಠೋಡ್ ವಂದಿಸಿದರು.

ಈ ಸಂದರ್ಭದಲ್ಲಿ ಶರಣು ಪೂಜಾರ, ಕಳಕಯ್ಯ ಸಾಲಿಮಠ, ಫಯಾಜ್ ತೋಟದ್, ಟಿ ಎಸ್ ಗೊರವರ್, ಮಾರುತಿ ಚಿಟಗಿ, ಬಾಲು ರಾಠೋಡ್, ಪೀರು ರಾಠೋಡ್, ಮೈಬು ಹವಾಲ್ದಾರ್, ಪ್ರದೀಪ್ ಎಂ, ಅಂದಪ್ಪ ಕುರಿ, ಬಿ ಎ ಶೀಲವಂತರ, ಸುವರ್ಣಾ ಇಂಡಿ, ರೇವಣ್ಣಪ್ಪ ರಾಠೋಡ್, ಬಸಮ್ಮ ಕಿತ್ತೂರು, ಚಂದ್ರು ರಾಠೋಡ್, ಶಿವಾನಂದ ಬಡೀಗೇರ್, ಚೆನ್ನಪ್ಪ ಗುಗಲೊತ್ತರ್, ರಾಜು ಸಾಂಗ್ಲಿಕರ್, ಬಸವರಾಜ ಹೊಸಮನಿ, ಶಶೀಧರ್ ಹೂಗಾರ, ಮಂಜು ಹೂಗಾರ, ಹಸನ್ ತಟಗಾರ್, ರಫೀಕ್ ಎಲಬುನಚಿ, ರೂಪಲೇಶ ಮಾಳೋತ್ತರ್ ಹಾಗೂ ಮುಂತಾದವರು, ವಿವಿಧ ಪ್ರಗತಿಪರ ಸಂಘಟನೆ ಮುಖಂಡರು, ಸಮುದಾಯಗಳ ಮುಖಂಡರು, ಸೌಹಾರ್ದ ಮನಸ್ಸುಗಳು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X