ಖೋಖೋ ಆಟದಲ್ಲಿ ಪಾಲ್ಗೊಂಡಿದ್ದ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಚಾಂಪಿಯನ್ ಪ್ರಶಸ್ತಿ ಬಾಚುಕೊಳ್ಳುವಲ್ಲಿ ಗದಗ ಬಾಲಕಿಯರ ಖೋಖೋ ತಂಡ ಯಶಸ್ವಿಯಾಗಿದೆ.
ಬೆಂಗಳೂರು ನಗರದಲ್ಲಿ ಕರ್ನಾಟಕ ಒಲಿಪಿಂಕ್ ಸಂಸ್ಥೆ ಸಹಯೋಗಲ್ಲಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸಿಕೊಡುತ್ತಿರುವ ಕರ್ನಾಟಕ ಮಿನಿ ಒಲಿಪಿಂಕ್ ಕ್ರೀಡಾಕೂಟ 2024 ಅದ್ಧೂರಿಯಾಗಿ ಆಯೋಜನೆಗೊಂಡಿತ್ತು.
ಗದಗ ತಂಡ ಈ ಬಾರಿ ತನ್ನ ಸತತ ಪರಿಶ್ರಮ ಮತ್ತು ಮಾರ್ಗದರ್ಶನದ ಮೂಲಕ ಅಖಾಡಕ್ಕೆ ಇಳಿದು. ಬಲಿಷ್ಠ ತಂಡಗಳು ಮತ್ತು ಮಾಜಿ ಚಾಂಪಿಯನ್‌ಗಳಾದ ಹಾವೇರಿ, ಬೆಳಗಾವಿ, ಧಾರವಾಡ, ಮೈಸೂರು, ಕೋಲಾರ ತಂಡಗಳನ್ನು ಸೋಲಿಸಿ ಫೈನಲ್ ನಲ್ಲಿಯೂ ಅಬ್ಬರದ ಪ್ರದರ್ಶನಗೈದು ಜಯಶಾಲಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನ.20ರಂದು ಲಿಂಗತ್ವ ಅಲ್ಪಸಂಖ್ಯಾತರಿಂದ ಸ್ವಾಭಿಮಾನದ ನಡಿಗೆ
ಆ ರೋಚಕ ಕ್ಷಣಗಳನ್ನು ಕಂಡು ನೆರೆದವರ ನಾಲಿಗೆಯಲ್ಲಿ ಗದಗ ಬಾಲಕಿಯರದ್ದೇ ವರ್ಣನೆ ಆವರಿಸಿಕೊಂಡಿತ್ತು. ಗೆದ್ದು ಬೀಗಿದ ಗದಗ ತಂಡದಿಂದ ಮೂರು ಕ್ರೀಡಾಳುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗದಗ ಜಿಲ್ಲಾ ಅಮೆಚೂರ್ ಅಧ್ಯಕ್ಷ ಅಂದಪ್ಪ ಉಳ್ಳಾಗಡ್ಡಿ ಹಾಗೂ ತರಬೇತುದಾರ ರವಿ ಅಸೂಟಿ, ಮ್ಯಾನೇಜರ್ ಬಿ ಎಸ್ ಜಗ್ಗಾಪುರ ತಂಡದ ಕ್ಯಾಪ್ಟನ್ಸಿ ವಹಿಸಿದ್ದ ಕುಮಾರಿ ಜ್ಯೋತಿ ಸೂಲೇಯವರಿಗೆ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಸಂಸ್ಥೆ ಹಾಗೂ ಗದಗ ಜಿಲ್ಲಾ ಖೋಖೋ ಕ್ರೀಡಾಭಿಮಾನಿಗಳು ತುಂಬು ಹೃದಯದಿಂದ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.