ಲಕ್ಷ್ಮೇಶ್ವರ ರಸ್ತೆಯುದ್ಧಕ್ಕೂ ನೂರಾರು ತಗ್ಗು ಗುಂಡಿಗಳು: ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರು ಒತ್ತಾಯ

Date:

Advertisements

ಒಂದು ಜಿಲ್ಲೆಯ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಅಲ್ಲಿಯ ರಸ್ತೆ ಸಂಪರ್ಕ ಜಾಲ ಗಮನಿಸಿದರೆ ಸಾಕು ಅರ್ಥವಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಾಗವಾಗಿ, ಕಡಿಮೆ ಅವಧಿಯಲ್ಲಿ ಸರಕು ಸಾಗಣೆಗೆ, ಉದ್ಯಮಗಳ ಬೆಳವಣಿಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ರಸ್ತೆಗಳು ಆಧಾರ ಸ್ತಂಭವಾಗಿ ಕೆಲಸ ಮಾಡುತ್ತವೆ. ಆದರೆ ಗದಗ ಗ್ರಾಮೀಣ ಪ್ರದೇಶದ ರಸ್ತೆಗಳು ಬಹುತೇಕ ಹದಗೆಟ್ಟು ರಸ್ತೆ ಸಂಚಾರ ಮಾಡಲು ಜನರು ಹರಸಾಹಸ ಪಡುತ್ತಿದ್ದು, ಸುವ್ಯವಸ್ಥಿತ ರಸ್ತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಗದಗ, ಹುಬ್ಬಳ್ಳಿ, ಗಜೇಂದ್ರಗಡ, ರೋಣ, ಮುಂಡರಗಿ ಹಾಗೂ ಕೊಪ್ಪಳಕ್ಕೆ ಹೋಗುವ ರಸ್ತೆ ಸಂಪರ್ಕ ಮಾರ್ಗವು ಬಹುತೇಕ ಉತ್ತಮ ಸ್ಥಿತಿಯಲ್ಲಿವೆ. ಆದರೂ ಜಿಲ್ಲೆಯ ರಸ್ತೆಗಳು ಅಷ್ಟೊಂದು ಸುಸ್ಥಿತಿಯಲ್ಲಿಲ್ಲ. ಪಟ್ಟಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಗಳು ಹಾಳಾಗಿವೆ. ಅದರಲ್ಲೂ ಗದಗದಿಂದ ಲಕ್ಷ್ಮೇಶ್ವರ ತಾಲೂಕಿಗೆ ಹೋಗುವ ರಸ್ತೆಯು ಜೀವಕ್ಕೆ ಕುತ್ತು ತರುವಷ್ಟು ರಸ್ತೆ ಹದಗೆಟ್ಟಿದೆ.

ಗದಗದಿಂದ ಲಕ್ಷ್ಮೇಶ್ವರ ತಾಲೂಕು ಸುಮಾರು ನಲವತ್ತು ಕಿಲೋ ಮೀಟರ್ ಅಂತರವಿದೆ. ಜಿಲ್ಲೆಯಿಂದ ನಾಗಾವಿ ಕ್ರಾಸ್, ಹರ್ತಿ, ಮುಳಗುಂದ, ಮಾಗಡಿ, ಗೊಜನೂರು ಗ್ರಾಮಗಳ ಮೂಲಕ ಲಕ್ಷ್ಮೇಶ್ವರ ಪಟ್ಟಣಕ್ಕೆ ತಲುಪುವ ಮಾರ್ಗವಾಗಿದ್ದು, ಮುಂದೆ ಸವಣೂರು, ಹಾವೇರಿ, ಶಿವಮೊಗ್ಗ ಸಂಪರ್ಕಿಸುವ ಕಾರವಾರ ಇಳಕಲ್ ಹೆದ್ದಾರಿ 5ರಲ್ಲಿ ಬರುವ ಗದಗ ಲಕ್ಷ್ಮೇಶ್ವರ ರಸ್ತೆ ತೀವ್ರ ದುಃಸ್ಥಿತಿಯಲ್ಲಿದೆ.  

Advertisements

“ಈ ಮಾರ್ಗದ ಮೂಲಕ ಹಾವೇರಿ, ಬೆಂಗಳೂರು ಹಾಗೂ ಶಿವಮೊಗ್ಗ ನಾನಾ ಜಿಲ್ಲೆಗಳಿಗೆ ಹೋಗುವ ರಸ್ತೆಯಾಗಿದ್ದು, ಗ್ರಾಮೀಣ ಜನರ ಗೋಳು ಕೇಳುವವರಿಲ್ಲದಂತಾಗಿದೆ. ಕಾರು, ಬಸ್, ದ್ವಿಚಕ್ರ, ಆಟೋ ಹೀಗೆ ನಾನಾ ರೀತಿಯ ವಾಹನಗಳು ನಿತ್ಯ ಸಂಚಾರ ಮಾಡಬೇಕಾದರೆ, ಜೀವವನ್ನು ಕೈಯಲ್ಲಿಡಿದು ವಾಹನ ಸಂಚಾರ ಮಾಡಬೇಕಾದಂತ ದುಃಸ್ಥಿತಿ ಎದುರಾಗಿದೆ.

ಗದಗದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ನಾಗಾವಿ ಕ್ರಾಸ್‌ನಿಂದ ಮುಳಗುಂದದವರೆಗೆ ರಸ್ತೆ ಅಗಲೀಕರಣ ಮಾಡಿ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಮುಳಗುಂದದಿಂದ ಲಕ್ಷ್ಮೇಶ್ವರ ಪಟ್ಟಣದವರೆಗೂ ಮೊಣಕಾಲುದ್ದ ದೊಡ್ಡ ದೊಡ್ಡ ತಗ್ಗು ಗುಂಡಿಗಳು, ಕಿತ್ತು ಹೋದ ಡಾಂಬರ್ ರಸ್ತೆಯಲ್ಲಿ ವಾಹನಗಳು ಸರ್ಕಸ್ ಮಾಡುತ್ತ ಸಾಗುತ್ತವೆ. ಈ ರಸ್ತೆಯಲ್ಲಿ ಶಾಲಾ ವಾಹನಗಳು, ದ್ವಿಚಕ್ರ ವಾಹನ, ಬಸ್ ಆಟೋ ನಿತ್ಯ ಸಂಚಾರ ಮಾಡುವರು ಲಕ್ಷ್ಮೇಶ್ವರ ತಲುಪುವಷ್ಟರಲ್ಲಿ ಪ್ರಯಾಣಿಕರು, ಹೈರಾಣಾಗುತ್ತಾರೆ. ಈ ರಸ್ತೆಯಲ್ಲಿ ಮಕ್ಕಳು ವೃದ್ಧರು, ಗರ್ಭಿಣಿಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ರಸ್ತೆ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಗದಗದಿಂದ ಲಕ್ಷ್ಮೇಶ್ವರಕ್ಕೆ ಅರ್ಧ, ಮುಕ್ಕಾಲು ಗಂಟೆ ತಲುಪಲು ಬೇಕಾಗಿದ್ದ ಸಮಯಕ್ಕೆ ಹದಗೆಟ್ಟ ರಸ್ತೆಯಿಂದ ಒಂದೂವರೆ ಗಂಟೆ ಹಿಡಿಯುತ್ತಿದ್ದು, ಪ್ರಯಾಣಿಕರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಬೈಯ್ಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಹದಗೆಡಲು ಕಾರಣ: ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ಮುಂಡರಗಿ ಪಟ್ಟಣಗಳಿಗೆ ಸಿಮೆಂಟು, ಕಲ್ಲು, ಮರಳು, ಇಟ್ಟಿಗೆಯನ್ನು ಮಿತಿಮೀರಿ ಲೋಡ್ ಮಾಡಿಕೊಂಡು ಟಿಪ್ಪರ್, ಲಾರಿ, ಟ್ರಕ್ ಈ ರಸ್ತೆಯಲ್ಲಿ ಹೆಚ್ಚು ಸಂಚಾರ ಮಾಡುತ್ತವೆ. ಇದರಿಂದ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಬ ಕೋಳಿವಾಡ ಈ ದಿನ.ಕಾಮ್ ಜತೆಗೆ ಮಾತನಾಡಿ, “ಸುಮಾರು ವರ್ಷಗಳಿಂದ ಗದಗ ಲಕ್ಷ್ಮೇಶ್ವರ ರಸ್ತೆ ಹದಗೆಟ್ಟಿದೆ. ರಸ್ತೆಯುದ್ಧಕ್ಕೂ ದೊಡ್ಡ ದೊಡ್ಡ ತಗ್ಗು ಗುಂಡಿಗಳೇ ತುಂಬಿವೆ. ಈ ರಸ್ತೆಯಲ್ಲಿ ಸಂಚಾರ ಮಾಡುವಾಗ ಅಪಘಾತಗಳಾಗಿವೆ. ಸತ್ತು ಹೋಗಿದ್ದರೂ ಈ ರಸ್ತೆ ದುರಸ್ಥಿಗೊಳಿಸಲು ಅಧಿಕಾರಿಗಳು ಶಾಸಕರು, ಸಚಿವರು ನಿರ್ಲಕ್ಷ್ಯ ತೋರಿದ್ದಾರೆ. ಕೂಡಲೇ ರಸ್ತೆ ದುರಸ್ಥಿಗೊಳಿಸಿ ಸಂಚಾರ ಸುಗಮಗೊಳಿಸಬೇಕು” ಎಂದು ಒತ್ತಾಯಿಸಿದರು.

ಕಾರು ಚಾಲಕ ಹಾಗೂ ರೈತ ದರ್ಶನ್ ಪಾಟೀಲ ಮಾತನಾಡಿ, “ಗದಗದಲ್ಲಿ ನಮ್ಮ ಬೀಗರ ಮನೆಯಿದೆ. ಹಾವೇರಿಯಿಂದ ಗದಗಕ್ಕೆ ಹೊರಟಿದ್ದೀನಿ. ಈ ರಸ್ತೆ ನೋಡಿ ಯಾಕಾದ್ರೂ ಮದುವೆ ಆದೆನೋ ಅನ್ನಿಸುತ್ತಿದೆ. ಇಲ್ಲಿಯ ರೈತರಿಗೆ, ಜನರಿಗೆ, ಮಹಿಳೆಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ರಸ್ತೆ ಸರಿಪಡಿಸದೆ ಇದ್ದಲ್ಲಿ ಪ್ರಯಾಣಿಕರೇ ರಸ್ತೆ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ. ಶಾಸಕರಿಗೆ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ ಈ ರಸ್ತೆ ಸರಿಪಡಿಸಿ” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಗದಗ ಜಿಲ್ಲಾ ಲೋಕೋಪಯೋಗಿ ಮುಖ್ಯ ಅಧಿಕಾರಿ ಎನ್ ಎನ್ ಪಾಟೀಲ್ ಅವರಿಗೆ ಈ ದಿನ.ಕಾಮ್ ಫೋನ್ ಕರೆ ಮಾಡಿದಾಗ ಪ್ರತಿಕ್ರಿಯೆ ನೀಡಿದ್ದು, “ಗದಗ ಲಕ್ಷ್ಮೇಶ್ವರ ರಸ್ತೆ ತೀವ್ರ ಹದಗೆಟ್ಟಿದೆ. ಎಡಬ್ಲ್ಯೂಡಿ ಅವರಿಗೆ ಸೂಚನೆ ಮಾಡಲಾಗಿದ್ದು, ಈ ವರ್ಷದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದರು.

“ಸುಮಾರು ವರ್ಷಗಳಿಂದ ಗದಗ ಲಕ್ಷ್ಮೇಶ್ವರ ರಸ್ತೆ ಹದಗೆಟ್ಟಿದೆ. ರಸ್ತೆ ದುರಸ್ಥಿಗೊಳಿಸಬೇಕೆಂದು ರೈತರು, ಸಾರ್ವಜನಿಕ, ಗ್ರಾಮಸ್ಥರು ಪತ್ರಿಭಟನೆ ನಡೆಸುತ್ತ ಇರುತ್ತಾರೆ. ಅಧಿಕಾರಿಗಳನ್ನು, ಜನಪ್ರತಿನಿಧಿನಗಳನ್ನು ಬೈಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗದಗ ಲಕ್ಷ್ಮೇಶ್ವರ ರಸ್ತೆ ಅಭಿವೃದ್ಧಿಪಡಿಸುವರೇ ಎಂಬುದನ್ನು ಕಾದು ನೋಡಬೇಕು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X