ಗದಗ | ಆರೋಗ್ಯ, ಶಿಕ್ಷಣ ಇರುವ ನಾಡಲ್ಲಿ ಬಡತನ, ಅಜ್ಞಾನ ಇರುವುದಿಲ್ಲ: ಬಸವರಾಜ ಬೊಮ್ಮಾಯಿ

Date:

Advertisements

“ಆರೋಗ್ಯ ಮತ್ತು ಶಿಕ್ಷಣ ಯಾವ ನಾಡಿನಲ್ಲಿ ಇರುತ್ತದೆ. ಅಲ್ಲಿ ಬಡತನ ಮತ್ತು ಅಜ್ಞಾನ ಇರುವುದಿಲ್ಲ. ಆದ್ದರಿಂದ ಆ ಕೆಲಸ ಮಾಡಬೇಕೆಂದು ನಾನು ಆರಂಭ ಮಾಡಿದ್ದೇನೆ. ಕರ್ನಾಟಕದಲ್ಲಿ ಪೂರ್ಣಗೊಂಡಾಗ ನನ್ನ ಕನಸು ಈಡೇರುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಇಂದು ಬಸವರಾಜ ಕೊಂಚಿಗೇರಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕೊಠಡಿಗಳ ಉದ್ಘಾಟನೆ, ಗ್ರಂಥಾಲಯ ( ಅರಿವು ಕೇಂದ್ರ) ಉದ್ಘಾಟನೆ, ಗ್ರಾಮದ ಸಂತೆ ಕಟ್ಟೆ ಉದ್ಘಾಟನೆ, HDFC ನೂತನ ಶಾಖೆ ಉದ್ಘಾಟನೆ ಹಾಗೂ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮ ಮತ್ತು ಶ್ರೀ ಬೀರೇಶ್ವರ ಸಭಾಭವನ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ನಾವು ವೀರ ರಾಣಿ ಕಿತ್ತೂರು ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಮಾಡಿದ್ದೇವೆ.  ನಮ್ಮ ಶಾಸಕ ಚಂದ್ರು ಲಮಾಣಿ ಬಹಳ ಕಷ್ಟಕಾಲದಲ್ಲಿ ಶಾಸಕ ಆಗಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದರೆ ಇಷ್ಟೊತ್ತಿಗೆ ತಾಲೂಕಿನ ಚಿತ್ರಣ ಬದಲಾಗುತ್ತಿತ್ತು. ಕ್ರಿಯಾಶೀಲ ಶಾಸಕರಿದ್ದಾರೆ. ಅವರಿಗೆ ಸಹಾಯ ಮಾಡಲು ಸರ್ಕಾರ ಸಿದ್ಧವಿರಬೇಕು.

Advertisements

 ನಾನು ಸಿಎಂ ಆಗಿದ್ದಾಗ ವಿವೇಕ ಎಂಬ ಯೋಜನೆ ಮಾಡಿ 9 ಸಾವಿರ ಶಾಲಾ ಕಟ್ಟಡ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ನೀಡಿದ್ದೇವು. ಸುದೈವ ನನ್ನ ಕೈಯಿಂದಲೇ ಉದ್ಘಾಟನೆ ಆಗಿದೆ” ಎಂದರು.

ರಾಜ್ಯದ ಬಹಳಷ್ಟು ಮಕ್ಕಳು ವಿಶೇಷವಾಗಿ ಬಡವರು ಮತ್ತು ರೈತರ ಮಕ್ಕಳು ಸರಿಯಾದ ಶಿಕ್ಷಣ ಇಲ್ಲದೆ ವಂಚಿತರಾಗುತ್ತಿದ್ದಾರೆ. ಅದನ್ನು ಸರಿಪಡಿಸಲು 30 ಸಾವಿರ ಶಾಲಾ ಕಟ್ಟಡ ಹಾಗೂ 2 ಲಕ್ಷ ಶಿಕ್ಷಕರನ್ನು ನೇಮಕ ಮಾಡಲು ಕೆಲಸ ಪ್ರಾರಂಭಿಸಿದ್ದೆ. ಶಿಕ್ಷಣದ ಕೆಲಸ ಮಾಡಲು ಹಿಂದೆ ಮುಂದೆ ನೋಡಬಾರದೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಹೇಳಿದ್ದೇನೆ. ಶಿಕ್ಷಣ ನಿರಂತರವಾಗಿ ನಡೆಯಬೇಕು. ಮಕ್ಕಳು ನಿರಂತರವಾಗಿ ಬರುತ್ತಾರೆ. ನಾವು ಜಾಗತಿಕ ಪೈಪೋಟಿಯಲ್ಲಿದ್ದೇವೆ. ಕಡಕೋಳ ಗ್ರಾಮದ ಮಕ್ಕಳು ದೇಶ ಹಾಗೂ ಅಂತಾರಾಷ್ಟ್ರೀಯ ಮಕ್ಕಳ ಒತೆ ಪೈಪೋಟಿ ಮಾಡಬೇಕು” ಎಂದರು.

“ನಾನು ಕನಕದಾಸರು ಹುಟ್ಟಿದ ಊರಿನಿಂದ ಬಂದಿದ್ದೇನೆ. ಬಾಡದಲ್ಲಿ ಕನಕದಾಸರ ಅರಮನೆ ಕಟ್ಟಿದ್ದೇವೆ. ಒಳಗೆ ಕನಕದಾಸರ ಆದರ್ಶ ಕೃತಿಗಳನ್ನು ಕೆತ್ತಿಸಿದ್ದೇವೆ. ಅಲ್ಲಿಗೆ ಸಾವಿರಾರು ಮಕ್ಕಳು ಬಂದು ನೋಡುತ್ತಾರೆ. ಸುಮಾರು 25 ಕೋಟಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಕನಕದಾಸರು ಕುಲ ಕುಲ ಎಂದು ಬಡಿದಾಡದಿರಿ ಕುಲದ ನೆಲೆ ಏನಾದರು ಬಲ್ಲಿರಾ ಎಂದು ಕೇಳಿದರು. ಆದರೆ ಈಗ ಎಲ್ಲದರಲ್ಲೂ ಜಾತಿ ಉಪಜಾತಿ ಕೇಳುವಂತಾಗಿದೆ. ಅವಕಾಶ ಇದ್ದರೆ ಎಲ್ಲರೂ ಒಳ್ಳೆಯ ಕುಟುಂಬದಲ್ಲಿ ಹುಟ್ಟುತ್ತಿದ್ದರು. ಬದುಕು ಪ್ರಸ್ತುತ. ಬಸವಣ್ಣ ಸಮಾನತೆ ಸಾರಿದ. ಅವನ ಮಾತನ್ನೂ ಕೇಳಿಲ್ಲ. ನಡೆ ನುಡಿಗು ವ್ಯತ್ಯಾಸ ಇದೆ. ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು. ಸಾಮಾಜಿಕವಾಗಿ ಗೌರವ ಇರಬೇಕು. ಆಗ ಮಾತ್ರ ನಮ್ಮ ಬದುಕು ಹಸನಾಗುತ್ತದೆ” ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶಾಸಕರಾದ ಡಾ.ಚಂದ್ರು ಲಮಾಣಿ, ಶಿರಹಟ್ಟಿ ಮಂಡಳದ ಅಧ್ಯಕ್ಷರಾದ  ಸುನೀಲ ಮಹಾಂತಶೆಟ್ಟರ ಮುಖಂಡರಾದ  ಸಣ್ಣವೀರಪ್ಪ ಹಳ್ಳೆಪ್ಪನವರ,  ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ,  ತಿಪ್ಪಣ್ಣ ಕೊಂಚಿಗೇರಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರೈತರ ಪರ ಎಐಕೆಕೆಎಂಎಸ್,ಎಸ್‌ಯುಸಿಐ(ಸಿ) ಬೃಹತ್ ಪ್ರತಿಭಟನೆ

ಜಿಲ್ಲೆಯಾದ್ಯಂತ ಬಂದ ನಿರಂತರ ಮಳೆ ಮತ್ತು ಪ್ರವಾಹದಿಂದ ಅಪಾರ ಬೆಳೆ ನಷ್ಟ,...

ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ಹುಲಿ ಸಿಂಹಧಾಮದಲ್ಲಿ 6 ಹೊಸ ಪ್ರಾಣಿಗಳು

ಶಿವಮೊಗ್ಗ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಸದಸ್ಯರ ಆಗಮನವಾಗಿದೆ....

ಶಿವಮೊಗ್ಗ | ಗೋಡೌನ್‌ನ ಬೀಗ ಒಡೆದು 8 ಲಕ್ಷ ಮೌಲ್ಯದ ಅಡಿಕೆ ಕಳ್ಳತನ

ಶಿವಮೊಗ್ಗ, ಉದ್ಯಮಿಯೊಬ್ಬರಿಗೆ ಸೇರಿದ ಗೋದಾಮಿನ ಬೀಗವನ್ನು ಹೊಡೆದು ಕಳ್ಳರು ಸುಮಾರು ...

Download Eedina App Android / iOS

X