ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ, ಅಂಬೇಡ್ಕರ್ಗೆ ಅವಮಾನ ಮಾಡಿರುವ ಘಟನೆ ಗದಗ್ನ ವಾಯವ್ಯ ಕರ್ನಾಟಕ ಸಾರಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ವೇಳೆ ಗಾಂಧೀಜಿ ಭಾವಚಿತ್ರ ಮಾತ್ರವೇ ಇತ್ತು. ಅಂಬೇಡ್ಕರ್ ಫೋಟೋವನ್ನು ಉದ್ದೇಶಪೂರ್ವಕವಾಗಿ ಇಡದೇ, ಅವಮಾನ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ. ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಶರೀಫ್ ಬಿಳಿಯಲಿ, “ಕೆಲವು ಅಧಿಕಾರಿಗಳಿಗೆ ಸ್ವತಂದ್ರದ ಪರಿಕಲ್ಪನೆಯೇ ಗೊತ್ತಿಲ್ಲ. ಸ್ವತಂತ್ರ್ಯ ದಿನಾಚರಣೆ ಅಂದರೆ, ಅವರ ಮನೆಯಲ್ಲಿ ಪೂಜೆ ಮಾಡುವಂತೆ ಎಂದು ತಿಳಿದುಕೊಂಡಿದ್ದಾರೆ. ಸಾರ್ವಜನಿಕ ಕಛೇರಿಯಲ್ಲಿ ಸ್ವತಂತ್ರ ದಿನಾಚರಣೆ ಹೇಗೆ ಮಾಡಬೇಕೆಂದುನ್ನು ಮರೆತು ಬಿಟ್ಟಿದ್ದಾರೆ” ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ ಶೀಣಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ದ್ವಜದ ಕಲ್ಪನೆಯನ್ನು ಕೊಟ್ಟವರೇ ಅಂಬೇಡ್ಕರ್. ಅವರು ಬರೆದ ಸಂವಿಧಾನದಿಂದಲೇ ಬಹುಸಂಖ್ಯೆಯ ಜನರು ಉನ್ನತ ಸ್ಥಾನಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳು ಅವಮಾನ ಮಾಡುವುದು ದಲಿತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ” ಎಂದು ಕಿಡಿಕಾರಿದರು.
ಅಧಿಕಾರಿ ಜಿ ಶೀಣಯ್ಯ ತಪ್ಪನ್ನು ಒಪ್ಪಿಕೊಂಡು, ಪ್ರತಿಭಟನಾಕಾರರ ಬಳಿ ಕ್ಷಮೇಕೋರಿದರು. ಸಂವಿಧಾನ ಪೀಠಿಕೆ ಓದಿ, ಮಹಾತ್ಮ ಗಾಂಧೀಜಿ ಜೊತೆಗೆ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ನಮಿಸಿದರು.