ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣದ ಅನ್ನದಾನೇಶ್ವರ ಮಠದ ಪ್ರಸಾದ ನಿಲಯದ 11.19 ಗುಂಟೆ ಎಕರೆ ಆಸ್ತಿ ವಕ್ಫ್ ಹೆಸರಿಗೆ ನಮೂದಾಗಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019-20 ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಪಹಣಿ ಬದಲಾವಣೆ ಮಾಡಿದ ಗದಗ ಜಿಲ್ಲಾಡಳಿತ ವಿರುದ್ಧ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್ | ವಕ್ಫ್ ನೋಟಿಸ್ ಹಿಂಪಡೆಯಲು ಸರ್ಕಾರ ಆದೇಶ: ಸಂಸದ ಸಾಗರ ಖಂಡ್ರೆ
“ಸುಮಾರು 500 ವರ್ಷಗಳ ಇತಿಹಾಸವಿರುವ ಮಠದ ಆಸ್ತಿ ವಕ್ಫ್ ಬೋರ್ಡ್ ಪಾಲಾಗಿದೆ. ನರೇಗಲ್ ಪಟ್ಟಣದ ಪ್ರಸಾದ ನಿಲಯದ 11 ಎಕರೆ 19ಗುಂಟೆ ಆಸ್ತಿ ವಕ್ಫ್ ಹೆಸರಿಗೆ ನಮೂದಾಗಿದೆಯೆಂದು ಹೇಳಿದ್ದಾರೆ. ಸರ್ವೆ ನಂಬರ್ 410/2ಬಿ 15 ಎಕರೆ 6 ಗುಂಟೆ ಜಮೀನು ದಾನವಾಗಿ ಮಠಕ್ಕೆ ಬಂದಿತ್ತು. 15 ಎಕರೆ ಆಸ್ತಿ ಪೈಕಿ 11 ಎಕರೆ 19ಗುಂಟೆ ಆಸ್ತಿಯಲ್ಲಿ ವಕ್ಫ್ ಅಂತ ನಮೂದಿಸಲಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಈ ಮಠದ ಆಸ್ತಿಯನ್ನು ಮಠಕ್ಕೇ ಉಳಿಯುವಂತೆ ದಾಖಲೆ ಬದಲಾಯಿಸಬೇಕು. ಒಂದುವೇಳೆ ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.