ನಮ್ಮ ಕನ್ನಡ ಭಾಷೆಯನ್ನು ಮಾತನಾಡುವ ನೆಲದಲ್ಲಿ ಕನ್ನಡ ಮರೆಯಾಗುತ್ತಿದೆ. ನಾವು ಮಾತನಾಡುವ ಕನ್ನಡ ಭಾಷೆಯನ್ನೇ ವ್ಯವಹಾರಿಕ ಭಾಷೆಯನ್ನಾಗಿ ಮಾಡಬೇಕು. ಆದರೆ ಅದು ಆಗುತ್ತಿಲ್ಲ. ಕನ್ನಡ ಭಾಷೆ ಇರುವ ಜಾಗದಲ್ಲಿ ಅನ್ಯ ಭಾಷೆಗಳೇ ಕಾಣುತ್ತಿರುವುದು ಬೇಸರದ ಸಂಗತಿ. ಹಾಗಾಗಿ “ಅನ್ಯ ಭಾಷೆ ಎಲ್ಲೆಲ್ಲಿ ಕಾಣುತ್ತಿದೆ, ಅಲ್ಲಲ್ಲಿ ಕನ್ನಡ ಭಾಷೆ ಕಾಣಬೇಕು” ಎಂದು ನಮ್ಮ ಕರವೇ ಗದಗ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಆಗ್ರಹಿಸಿದರು.
ಕರ್ನಾಟಕ ಸರ್ಕಾರ 40ರಷ್ಟು ಇಂಗ್ಲೀಷ್ ಹಾಗೂ 60ರಷ್ಟು ಕನ್ನಡ ಪದಗಳನ್ನು ಬಳಸಬೇಕೆಂದು ಆದೇಶವಾದರೂ ಪಾಲಿಸದಿರುವುದನ್ನು ಖಂಡಿಸಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ತಹಶೀಲ್ದಾರ್ ಎರ್ರಿಸ್ವಾಮಿ ಪಿ ಎಸ್ ಅವರಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿ ಮಾತನಾಡಿದರು.
“ಮುಂಡರಗಿ ಪಟ್ಟಣದಲ್ಲಿ ಈ ಆದೇಶವನ್ನು ಪಾಲಿಸದೆ ಅನ್ಯಭಾಷೆಗಳೇ ಕಾಣುತ್ತಿವೆ. ಇದರಿಂದ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ” ಎಂದು ನಮ್ಮ ಕರೆವೇ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಹೇಳಿದರು.
“ಪಟ್ಟಣದಲ್ಲಿ ಮನಬಂದಂತೆ ಕನ್ನಡ ಭಾಷೆಯ ಬದಲಿಗೆ ಅನ್ಯಭಾಷೆಯ ಬೋರ್ಡುಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅವರಿಗೆ ಎಳ್ಳಷ್ಟು ಕನ್ನಡ ಭಾಷೆಯ ಮೇಲೆ ಗೌರವವಿಲ್ಲ. ಕನ್ನಡ ಅಭಿಮಾನಕ್ಕೆ ಕನ್ನಡಪರ ಸಂಘಟನೆಗಳಿಗೆ, ಧಕ್ಕೆ ತರುತ್ತಿದ್ದಾರೆ. ಕೂಡಲೇ ಪಟ್ಟಣದಲ್ಲಿ ಕಾರ್ಯರೂಪದಲ್ಲಿರುವ ಕನ್ನಡ ವಿರೋಧಿ ಬೋರ್ಡುಗಳನ್ನು ತೆರವುಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವರದಿ-ಹೋರಾಟಕ್ಕೂ ಬಗ್ಗದ ಅಧಿಕಾರಿಗಳು; 6.90 ಕೋಟಿ ರೂ. ಅನುದಾನದ ಖರ್ಚಿಗೆ ಕುತಂತ್ರ!
“ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ, ನಾವೇ ಕನ್ನಡ ವಿರೋಧಿ ಅಕ್ಷರಗಳಿರುವ ಬೋರ್ಡುಗಳಿಗೆ ಕಪ್ಪು ಮಸಿ-ಬಳಿದು ತೆರುವುಗೊಳಿಸಬೇಕಾಗುತ್ತದೆ” ಎಂದು ಚಂದ್ರು ಪುಜಾರ್ ಎಚ್ಚರಿಕೆ ನೀಡಿದರು.
ಮನವಿ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮೋಹನ್ ಪಾಟೀಲ್, ಮುಖಂಡರು ರಾಜಾಭಕ್ಷ ಕೆಂಪಸಾಬಣ್ಣವರ, ಇರ್ಫನ್ ಬೆಪಾರಿ, ಮಂಜುನಾಥ್ ವಡ್ಡಟ್ಟಿ, ಮಲ್ಲೇಶ್ ದೊಡ್ಡಮನಿ ಸೇರಿದಂತೆ ಇತರರು ಇದ್ದರು.
ಈ ತರಹದ ಸಮಸ್ಯೆ ಜಿಲ್ಲಾ ಕೇಂದ್ರ ಗದಗನಲ್ಲಿ ಇದೆ, ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಬೇಕಾಗಿ ವಿನಂತಿ.