ಗದಗ-ಬೆಟಗೇರಿ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಬಳಿಯ ಬಸವಣ್ಣ ಪ್ರತಿಮೆ ಎದುರು ಕಸ, ಕಂಟಿಗಳು ತುಂಬಿವೆ. ಅದನ್ನು ಸ್ವಚ್ಛಗೊಳಿಸಿ, ಪ್ರತಿಮೆ ಸುತ್ತ ತಂತಿ ಬೇಲೆ ಆಳವಡಿಸಬೇಕು ಅಥವಾ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಹಕ್ಕೊತ್ತಾಯ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ತೌಸಿಫ ಢಾಲಾಯತ, “ಭೀಷ್ಮ ಕೆರೆ ಬಳಿಯ ಬಸವಣ್ಣ ಪ್ರತಿಮೆ ಇರುವ ಸ್ಥಳ ಅವ್ಯವಸ್ಥೆಯಿಂದ ಕೂಡಿದೆ. ಪ್ರತಿಮೆಯ ಅಕ್ಕಪಕ್ಕದಲ್ಲಿ ಕಸ, ಕಂಟಿಗಳು ಬೆಳದಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಕುಡಿಯವ ನೀರಿನ ವ್ಯವಸ್ಥೆ, ಶೌಚಾಲಯ, ಕುಳಿತಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಚಿಕ್ಕ ಮಕ್ಕಳು ಬಂದರೆ, ಮಕ್ಕಳು ಆಟವಾಡಲು ಉದ್ಯಾನವನ ಸರಿಯಾದ ವ್ಯವಸ್ಥೆ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗದಗ ತಾಲೂಕು ಅಧ್ಯಕ್ಷ ದಾವಲಸಾಬ ತಹಶೀಲ್ದಾರ ಮಾತನಾಡಿ, “ಕರೆ ಬಳಿಕ ಅವ್ಯವಸ್ಥೆಯನ್ನು ಒಂದು ತಿಂಗಳ ಒಳಗಾಗಿ ಸರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಯುವ ಘಟಕದ ಉಪಾಧ್ಯಕ್ಷರಾದ ಕುಮಾರ ರಾವಣ್ಣವರ, ಜಿಲ್ಲಾ ವಕ್ತಾರರಾದ ವಿರುಪಾಕ್ಷಪ್ಪ ಹಿತ್ತಲಮನಿ, ತಾಲೂಕ ಸಂಚಾಲಕರಾದ ಸಲೀಂ ಬೋಧಖಾನ, ತಾಲೂಕ ಘಟಕದ ಕಾರ್ಯದರ್ಶಿ ನಿಯಾಜ್ ಶೇಖರವರು, ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಇರ್ಫಾನ ತಾಳಿಕೋಟಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಮ ಶಿರವಾರ, ಮುಳಗುಂದ ಘಟಕದ ಅಧ್ಯಕ್ಷರಾದ ಹುಸೇನ ಅಕ್ಕಿ, ತಾಲೂಕ ಸಾಮಾಜಿಕ ಜಾಲತಾಣ ಮುಸ್ತಾಕ ಡಾವಣಗೇರಿ, ಇಸಾಕ್ ನದಾಫ, ಗೌಸುಸಾಬ ಶಿರಹಟ್ಟಿ, ಸುಲೇಮಾನ ಮಂಜಾಲಪೂರ. ಮಹಾಂತೇಶ ನಡಗೇರಿ, ಸದಾಶಿವ ಸೊರಟೂರ, ಮುನ್ನಾ ಪಠಾಣ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.