ಗದಗ | ತಹಸೀಲ್ದಾರ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ಸಾರ್ವಜನಿಕರ ಪರದಾಟ

Date:

Advertisements

ಒಂದು ಸರ್ಕಾರಿ ಕಛೇರಿ ಎಂದರೆ ಅಲ್ಲಿರುವ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ಇರಲೇಬೇಕು. ನಿತ್ಯ ತಹಸೀಲ್ದಾರರ ಕಚೇರಿಗೆ ಸಾವಿರಾರು ಜನರು ತಮ್ಮ ಅಹವಾಲುಗಳನ್ನು ಕಛೇರಿಗೆ ಹೊತ್ತು ಬರುತ್ತಾರೆ. ಹೀಗೆ ಬಂದ ಸಾರ್ವಜನಿಕರಿಗೆ ಕಛೇರಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ನಿತ್ಯವು ಸಮಸ್ಯೆ ಎದುರಿಸುತ್ತಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಮೂಕಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ. ಈ‌ ತಾಲೂಕಿಗೆ ಮೂವತ್ತೆರಡು ಗ್ರಾಮಗಳು ಇವೆ. ರೈತರು ಬಹುತೇಕ ಕೆಲಸಗಳಿಗೆ ತಹಸೀಲ್ದಾರರ ಕಛೇರಿಗೆ ಬರುತ್ತಾರೆ. ಅಷ್ಟೇ ಅಲ್ಲ ಕಛೇರಿಯ ಸಿಬ್ಬಂದಿಗಳಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದು ಎದ್ದು ಕಾಣುತ್ತಿದೆ.

ಶೌಚಾಲಯ ಸಮಸ್ಯೆ

Advertisements

ತಹಸೀಲ್ದಾರ ಕಛೇರಿಯಲ್ಲಿ ಶೌಚಾಲಯ ಸಮಸ್ಯೆ ಎದ್ದುಕಾಣುತ್ತಿದೆ. ಕಛೇರಿಯ ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ಆ ಶೌಚಾಲಯ ಸಿಬ್ಬಂದಿ ಕರ್ತವ್ಯ ಮಾಡುವ ಕೊಠಡಿಗೆ ಎದುರಾಗಿದೆ. ಅಲ್ಲಿ ಪದೆ ಪದೇ ಸಾರ್ವಜನಿಕರು ಮತ್ತು ಸಿಬ್ಬಂದಿಗಳು ಓಡಾಡುತ್ತಾರೆ. ಇದರಿಂದ ಮಹಿಳಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಲು ಮುಜುಗುರ ಎದುರಿಸುತ್ತಿದ್ದಾರೆ. ಇನ್ನು ಪುರುಷ ಸಿಬ್ಬಂದಿಗಳಿಗಂತೂ ಶೌಚಾಲಯವೇ ಇಲ್ಲ! ತಹಸೀಲ್ದಾರ ಕೊಠಡಿ ಹಿಂಬಾಗವೇ ಮೂತ್ರ ವಿಸರ್ಜನೆಯ ಬಯಲು ಶೌಚಾಲಯ. ಕಛೇರಿಯಲ್ಲಿ ಸಾರ್ವಜನಿಕರಿಗೆ ಶೌಚಾಲಗಳಿಲ್ಲದೇ ಕಛೇರಿಯ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ಕಛೇರಿಯಲ್ಲಿ ಅಡ್ಡಾದಿಡ್ಡಿ ಉಪಕರಣ: ಸಾರ್ವಜನಿಕರಿಗೆ ಕಿರಿಕಿರಿ

ಕಛೇರಿಯ ಹಳೆಯ ಉಪಕರಣ(ವಸ್ತು)ಗಳನ್ನು ಸಿಬ್ಬಂದಿ ಮತ್ತು ಸಾರ್ವಜನಿಕರು ಓಡಾಡುವ ಕಿರುದಾರಿಯಲ್ಲೇ ಶೇಕರಿಸಿಡಲಾಗಿದೆ. ಇದರಿಂದ ಅಕ್ಕ-ಪಕ್ಕದ ಕೊಠಡಿಗೆ ಓಡಾಡುವ ಸಿಬ್ಬಂದಿ ಮತ್ತು ಸಾಋವಜನಿಕರಿಗೆ ಇದರಿಂದ ಕಿರಿಕಿರಿಯಾಗುತ್ತಿದೆ. ಆ ಹಳೆಯ ವಸ್ತುಗಳ ಶೇಖರಣೆ ದೂಳು ಮತ್ತು ಮಹಿಳಾ ಶೌಚಾಲಯದಿಂದ ಇಡಿ ಕಛೇರಿಯೇ ದುರ್ವಾಸನೆ ಹಿಡಿದಿದೆ.

ಕಛೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳೇ ಇಲ್ಲ. ನಿತ್ಯವು ನೂರಾರು ಜನರು ಬಹುತೇಕ ಕೆಲಸಗಳಿಗೆ ತಹಸೀಲ್ದಾರ ಕಛೇರಿಗೆ ಬರುತ್ತಾರೆ. ಹೀಗೆ ಬಂತ ಸಾರ್ವಜನಿಕರಿಗೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆಯೇ ಇಲ್ಲ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲದೇ ಗಿಡಗಳ ನೆರಳಲ್ಲಿ ಕುಳಿತುಕೊಳ್ಳುತ್ತಾರೆ ಇಲ್ಲವೇ ಬಿಸಿಲಿನಲ್ಲಿಯೇ ನಿಂತು ಕಾಯುತ್ತಾರೆ.

ಕುಡಿಯುವ ನೀರಿನ ಸಮಸ್ಯೆ

ತಹಸೀಲ್ದಾರ ಕಛೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕಛೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜನರು ಹತ್ತಿರಇರುವ ಹೊಟೇಲ್‌ಗಳಲ್ಲಿ ನೀರು ಕುಡಿಯುವ ಅನಿವಾರ್ಯತೆ ಇದೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲ

ತಹಸೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ಕಛೇರಿಯ ಸಿಬ್ಬಂದಿ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಎಲ್ಲ ವಾಹನಗಳು ಕಛೇರಿಯ ಮುಂಭಾಗದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

ತಹಸೀಲ್ದಾರ ಕಛೇರಿಯ ಹಿಂಬಾಗದಲ್ಲಿ ಸರ್ಕಲರ್ ಕಛೇರಿಗೆ ಹೋಗಬೇಕಾದರೆ, ಲಕ್ಷ್ಮೇಶ್ವರ ಸ್ಥಳಿಯ ಜನರು ಇಲ್ಲಯೇ ಮಲ ವಿಸರ್ಜನೆ ಮಾಡುವುದರಿಂದ ಹಿಂದಿನಿಂದ ಸರ್ಕಲರ್ ಕಛೇರಿಗೆ ಹೋಗಲು ಕಿರಿಕಿರಿಯಾಗುತ್ತದೆ, ಎಂದು ತಹಸೀಲ್ದಾರ ಕಛೇರಿಗೆ ಬಂದಿದ್ದ ಹರೀಶ್ ವಗ್ಗಣ್ಣವರ ಎಂಬ ಯುವಕ ನೋವಿನಿಂದ ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ ವೃದ್ಧಾಪ್ಯ, ಸಂದ್ಯಾ ಸುರಕ್ಷಾ, ಅಂಗವಿಕಲ ಮಾಸಾಶನದ ʼಪಿಂಚನಿ ಅದಾತ್ʼ ತಾಲೂಕಿನ ಯಾವುದೇ ಗ್ರಾಮದಲ್ಲಿ ಸಂಬಂಧಿಸಿದ ಅಧಿಕಾರಿಗಳು ಇಲ್ಲಿಯವರೆಗೂ ಮಾಡಿಲ್ಲ; ಪಿಂಚಣಿ ಅದಾಲತ್ ಮಾಡಲು ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಸಂಬಂಧಪಟ್ಟ ಅಧಿಕಾರಿ ಕಿವಿ ಕಿವುಡಾಗಿವೆ, ಕಣ್ಣು ಕರುಡಾಗಿದೆ.

ಅನೇಕ ರೈತರಿಗೆ ಸರ್ಕಾರದ ಮೂಲ ಸೌಕರ್ಯಗಳು, ಸೌಲಭ್ಯ ಸರ್ಕಾರಿ ಇಲಾಖೆಗಳಿಂದ ಆಗುವ ತೊಂದರೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಮಟ್ಟದ ಅಥವಾ ಕನಿಷ್ಠ ಪಕ್ಷ ತಹಸೀಲ್ದಾರ ಮಟ್ಟಕ್ಕೆ, ಅಂದರೆ ತಹಸೀಲ್ದಾರ ಸಮ್ಮುಖದಲ್ಲಿ ಒಂದು ಸಭೆ ಕರೆಯಿರಿ ಎಂದು ಹಲವುಬಾರಿ ಮನವಿ ಮತ್ತು ಮುಖಾಮುಖಿ ಭೇಟಿ ಕೊಟ್ಟು ವಿನಂತಿಸಿಕೊಂಡರೂ, ಸಾರ್ವಜನಿಕ ಕರೆಗೆ ಮತ್ತು ವಿನಂತಿಗೆ ತಹಸೀಲ್ದಾರ ಸಾಹೇಬ್ರು ಕೇಳಿಸಿಕೊಳ್ಳದೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ.

ಮುಂದಿನ ತಿಂಗಳಲ್ಲಿ ರೈತರೊಂದಿಗೆ ತಹಸೀಲ್ದಾರ ಕಛೇರಿ ಮುಂಬಾಗದಲ್ಲಿ ಧರಣಿ ಕೂಡಲು ತೀರ್ಮಾನಿಸಿದ್ದೇವೆ ಎಂದು ತಾಲೂಕು ಘಟಕದ ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಲೋಕೇಶ್‌ ಜಾಲವಾಡಗಿ ಎಚ್ಚರಿಕೆ ನೀಡಿದ್ದಾರೆ.

ವಿಶೇಷ ವರದಿ : ಕೇಶವ ಕಟ್ಟಿಮನಿ, ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X